Labels

Saturday, 7 December 2019

ಆ ನಮಿಪೆ ಗುರುಸಂತತಿಗೆ aa namipe guru santatige

ಆ ನಮಿಪೆ ಗುರುಸಂತತಿಗೆ ಸತತ ಗೆ
e್ಞÁನ ಭಕ್ಯಾದಿಗಳ ಕರುಣಿಸಲಿ ಎನಗೆಂದು ಪ
ಹಂಸನಾಮಕ ಹರಿ ಬ್ರಹ್ಮಗುರುವರ ಸರೋ
ಜಾಸನ ಪುತ್ರರೆನಿಸಿಕೊಂಬಾ
ಆ ಸನಕ ಸನಂದನ ಕುಮಾರಕರ ಶಿಷ್ಯ ದೂ
ರ್ವಾಸಮುನಿ e್ಞÁನನಿಧಿ ತೀರ್ಥ ಪದಾಬ್ಜಗಳಿಗೆ 1
ಗರುಡವಾಹನತೀರ್ಥ ಕೈವಲ್ಲe್ಞÁನೇಶ
ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞರಾ
ವರಕುಮಾರಕ ತಪೋರಾಜ ಸಂಯಮಿ ವಿಮಲ
ಕರಕಮಲ ಸಂಜಾತ ಅಚ್ಯುತ ಪ್ರೇಕ್ಷರಿಗೆ 2
ಶ್ರೀ ಮಧ್ವವರ ಪದ್ಮನಾಭ ನರಹರಿಮುನಿಪ
ಶ್ರೀ ಮಾಧವಕ್ಷೋಭ್ಯಯತಿ ಜಯಾರ್ಯ
ಧೀಮಂತ ವಿದ್ಯಾಧಿರಾಜ ಸುಕವೀಂದ್ರ ನಿ
ಸ್ಸೀಮ ವಾಗೀಶಯತಿ ರಾಮಚಂದ್ರಾರ್ಯರಿಗೆ 3
ವಿದ್ಯಾನಿಧಿ ರಘುನಾಥ ರಘುವರ್ಯೋತ್ತಮ ಕರ
ಪದ್ಮ ಸಂಜಾತ ವೇದವ್ಯಾಸರಾ
ವಿದ್ಯಾಪತಿ ಅಧೀಶನಿಧಿ ಸತ್ಯವ್ರತ ನಿಧಿಯಾ
ಶುದ್ಧಾತ್ಮ ಸತ್ಯನಾಥರ ಪಾದ ಕಮಲಗಳಿಗೆ 4
ಸತ್ಯಾಭಿನವ ಪೂರ್ಣ ಸತ್ಯವಿಜಯ ಪ್ರೀಯಾ
ಸತ್ಯಬೋಧರ ಸತ್ಯಸಂಧವರರಾ
ನಿತ್ಯದಲಿ ನೆನೆದು ಕೃತಕೃತ್ಯನಾಗುವೆ ಬಿಂಬ
ಮೂರ್ತಿ ಜಗನ್ನಾಥವಿಠಲನ ತೋರಿಸಲೆಂದು 5

No comments:

Post a Comment