ಉಡಪಿಯ ಕೃಷ್ಣ ಯನ್ನ ನುಡಿ ಲಾಲಿಸೋ ಪ
ಸಡಗರದಲಿ ನೀನು ಮಡದಿವೃಂದ ಬಿಟ್ಟು
ಕಡಲಪಯಣದಿಂದಲಿ ವಂದು ಬಿಡದೆ ಭಕ್ತರಿಗೆಲ್ಲ
ವಡೆಯನಾಗಿ ನೀನು ಷಡುರಸ ಅನ್ನವ ಕೊಡುತನಿಂತಿಹೆ 1
ಪ್ರಾಣಪತಿಯು ಅತಿ ಜಾಣನೆಂದೆನಿಶಿÉ ನೀ
ಕಾಣಿಸುವಿ ನರಪ್ರಾಣಿಗೆ
ಮಾಣವಕನೆ ನೀ ಜಾಣನೆಂದೆನುತಲಿ
ಧ್ಯಾನಮಾಡಿ ಮೋದಿಸುವರು 2
ಧರೆಯೊಳು ರಜತಪೀಠ ಪುರದೊಳೂ ನೆಲೆಸಿಪ್ಪ
ಸುರವೃಂದನುತ ಬೇಗ ಸಲಹೆನ್ನ
ವರಮಧ್ವ ಮುನಿನುತ ಸರಸಿಜಭವ ವಂದ್ಯ
ಶ್ರೀವತ್ಸಾಂಕಿತ ವೆಂಕಟಪತಿಯೇ 3
No comments:
Post a Comment