Labels

Friday, 1 November 2019

ಸರಸಿಜನಾಭನೆ ಸೆರಗೊಡ್ಡಿ sarasijanabgana seregoddi

ಸರಸಿಜನಾಭನೆ ಸೆರಗೊಡ್ಡಿ ಬೇಡುವೆ,ದುರಿತಗಳೆಲ್ಲ ತರಿದು ವರವಿತ್ತು ಕರುಣಿಸೊ ಪ
ಕರುಣಾಸಾಗರ ನಿನ್ನ ಚರಣವ ನಂಬಿದೆಪರಮ ಪಾವನ ನಿನ್ನ ಶರಣನ ಪೊರೆಯೆಂದು 1
ಈಶವಿನುತ ನಿನ್ನ ವಾಸಿಯ ಪೊಗಳುವೆದಾಸ ಎಂದೆನ್ನನು ಗಾಸಿಮಾಡದೆ ಕಾಯೊ 2
ಬಾರಿಬಾರಿಗೆ ಬರುವ ದಾರಿದ್ರ್ಯ ದುಃಖದದೂರಗೈಸುವಂಥ ದಾರಿ ತೋರಿಸೆಂದು 3
ಕಂತುಪಿತನೆ ಎನ್ನ ಅಂತರಂಗದಿ ನಿನ್ನಸಂತತÀ ನೆನೆವಂತೆ ಚಿಂತನೆ ನಿಲಿಸೆಂದು 4
ಮಂಗಳಾತ್ಮಕನೆ ಶ್ರೀರಂಗವಿಠ್ಠಲ ಭು-ಜಂಗಶಯನ ನಿನ್ನ ಹಿಂಗದೆ ಭಜಿಪೆನು5

No comments:

Post a Comment