Labels

Wednesday, 20 November 2019

ಗೊಲ್ಲರಾ ಮನೆಯ Gollara and maneya pokku

ಗೊಲ್ಲರಾ ಮನೆಯ ಪೊಕ್ಕುಗುಲ್ಲು ಮಾಡುವುದೇನಲ - ಬಲುಲಲ್ಲೆ ಮಾಡುವುದೇನಲ ಪ
ಹಾಲು ಮೊಸರು ಘೃತವು ನೆಲುವಿನಮೇಲೆ ಇಟ್ಟ ಬೆಣ್ಣೆಯಬಾಲಕರಿಗಿಲ್ಲದಲೆ ಸುರಿದುಹಾಲುಗಡಿಗೆಯನೊಡೆದಲ 1
ಸಣ್ಣ ಮಕ್ಕಳ ಕಣ್ಣ ಮುಚ್ಚಿಹುಣ್ಣಿಮೆ ಬೆಳುದಿಂಗಳಲಿಬಣ್ಣ ಬಣ್ಣದ ಮಾತನಾಡಿಸಣ್ಣ ಕೆಲಸಕ್ಕೆಳೆದಲ 2
ಸುದತಿಯೊಬ್ಬಳು ದಧಿಯ ಮಥಿಸುತಒದಗಿದ ಬೆಣ್ಣೆಯ ತೆಗೆಯಲುಮದನ ಕದನಕೆ ಕೆಡಹಿ ಮಾನಿನಿಒದರಿದರು ನೀ ಬಿಡೆಯಲ 3
ಕಿಟ್ಟ ನಾ ನಿನಗೆಷ್ಟು ಹೇಳಲಿದುಷ್ಟ ಬುದ್ಧಿಯ ಬಿಡೆಯಲಇಷ್ಟು ಹರಳಿಸಿ ರಟ್ಟು ಯಾತಕೆಬಿಟ್ಟು ಮಧುರೆಗೆ ಪೋಗೆಲ4
ಕೇಶವ ವಿಠ್ಠಲ ನಿನ್ನನುಕೂಸು ಅಂದವರ್ಯಾರಲೊ - ಹಸುಗೂಸು ಅಂದವರ್ಯಾರಲೊದೇಶದೊಳಗೆ ವಾಸವಾಗಿಹ ಬೇಲೂರು ಚೆನ್ನಕೇಶವ 5

No comments:

Post a Comment