ಗೋವಿಂದ ಸಲಹೆನ್ನನು - ಸದಾನಂದಗೋವಿಂದ ಸಲಹೆನ್ನನು ಪ
ಗೋವಿಂದ ಸಲಹೆನ್ನ ಕುಮುದಲೋಚನ ನಿನ್ನಸೇವಕರಡಿಯ ಸೇವಕನಯ್ಯ ಗೋವಿಂದ ಅ
ತಮನ ಸಂಹರಿಸಿ ವೇದವ ತಂದೆ ಗೋವಿಂದಅಮರರಿಗಮೃತ ಪಾನವನಿತ್ತೆ ಗೋವಿಂದರಮಣಿಯ ತಂದ ವರಾಹರೂಪಿ ಗೋವಿಂದಭ್ರಮಿಸಿ ಕಂಬದೊಳುದ್ಭವಿಸಿದೆ ಗೋವಿಂದಕ್ಷಮೆಯನಳೆದ ಬ್ರಹ್ಮಚಾರಿಯೆ ಗೋವಿಂದಸಮರದೊಳಖಿಲ ರಾಯರ ಕೊಂದೆ ಗೋವಿಂದಕಮಲಾಕ್ಷ ಕಡಲ ಕಟ್ಟಿದ ದಿಟ್ಟ ಗೋವಿಂದಮಮತೆಯೊಳಿಳೆಯ ಗೋವ್ಗಳ ಕಾಯ್ದೆ ಗೋವಿಂದರಮಣಿಯರ್ಗೊಲಿದು ಬತ್ತಲೆ ನಿಂತೆ ಗೋವಿಂದವಿಮಲ ತುರಗವೇರಿ ನಡೆಸಿದೆ ಗೋವಿಂದನಮಿಪರಿಗೊಲಿದೆ ಗೋವಿಂದ - ನಿಂದಿಪರಿಗೆಶಮನನಂತಿಪ್ಪೆ ಗೋವಿಂದ - ಎಲ್ಲರೊಳಿಪ್ಪಅಮಿತ ಮಹಿಮ ಗೋವಿಂದ - ಇಂಗಡಲೊಳುಗಮನ ನಿರ್ಜಿತ ಗೋವಿಂದ - ಅಚ್ಯುತ ಸರ್ವೋ-ತ್ತಮನೆ ಚಿನ್ಮಯ ಗೋವಿಂದ - ನಿಶ್ಚಲಭಕ್ತಿಕ್ರಮವ ಬೋಧಿಸೊ ಗೋವಿಂದ - ಪಾಪವನೆಲ್ಲಶಮನಗೊಳಿಪ ಗೋವಿಂದ - ಲಕ್ಷ್ಮೀರಮಣನಮೋ ದಶಾವತಾರಿ ಗೋವಿಂದ 1
ಮನವೆನ್ನ ಮಾತು ಕೇಳದು ಕಾಣೊ ಗೋವಿಂದಮನವ ಗೆಲ್ಲುವ ಬಲ ಎನಗಿಲ್ಲ ಗೋವಿಂದಕನಸಿನಂತಿಹ ದೇಹ ಸ್ಥಿರವಲ್ಲ ಗೋವಿಂದಬಿನುಗು ಬುದ್ಧಿಗಳ ಬಿಡಿಸಯ್ಯ ಗೋವಿಂದನೆನಹು ನಿನ್ನೊಳಗಿಟ್ಟು ನಡೆಸಯ್ಯ ಗೋವಿಂದನೆನೆವ ದಾಸರ ಮನದೊಳಗಿರ್ಪ ಗೋವಿಂದವನಜಲೋಚನ ನಾ ನಿನ್ನವನಯ್ಯ ಗೋವಿಂದಘನ ಮಹಿಮನೆ ನಿನ್ನ ಮೊರೆಹೊಕ್ಕೆ ಗೋವಿಂದಮುನಿಗಳ ಮನದೊಳು ಮಿನುಗುವ ಗೋವಿಂದನಿನಗಲ್ಲದಪಕೀರ್ತಿ ಎನಗೇನೊ ಗೋವಿಂದಜನನ ರಹಿತ ಗೋವಿಂದ - ನಿನ್ನಡಿಗಳನೆನವು ಕೊಡೊ ಗೋವಿಂದ - ದುರ್ವಿಷಯ ವಾ-ಸನೆಯ ಬಿಡಿಸೊ ಗೋವಿಂದ - ಕುತ್ಸಿತ ಕೆಟ್ಟತನವ ಬಿಡಿಸೊ ಗೋವಿಂದ - ಸದ್ಗುಣವೆಂಬಧನವ ತುಂಬಿಸೊ ಗೋವಿಂದ - ಇದಕ್ಕೆ ಬಡ-ತನವೆ ನಿನಗೆ ಗೋವಿಂದ - ಸದಾ ನಿನ್ನಘನ ಸ್ಮರಣೆ ಕೊಡು ಗೋವಿಂದ - ಸನಕಸನಂದನಾರ್ಚಿತ ಗೋವಿಂದ 2
ನರ ಬೊಂಬೆಗಳ ಮಾಡಿ ಕುಣಿಸುವೆ ಗೋವಿಂದನರರ ನೋಡಿ ನೋಡಿ ನಗುತಿರ್ಪೆ ಗೋವಿಂದಅರಿದೆನೆಂಬರಿಗಂತ್ಯ ತೋರದೊ ಗೋವಿಂದಅರಿಯದಂತಖಿಳದೊಳಗಡಗಿರ್ಪೆ ಗೋವಿಂದಅರಿಯಾಡಂಬರಗಳಿಗಳವಡದ ಗೋವಿಂದಪರಮ ಪಾವನನೆಂಬ ಬಿರುದುಳ್ಳ ಗೋವಿಂದ ಪರಮ ಪುರುಷ ಪುರುಷೋತ್ತಮ ಗೋವಿಂದಪರಬ್ರಹ್ಮ ಪರಮ ಪರಾತ್ಪರ ಗೋವಿಂದಮೊರೆ ಹೊಕ್ಕ ಭಕ್ತರ ಸಲಹುವ ಗೋವಿಂದಕರಿರಾಜ ಕರೆಯಲೊದಗಿ ಬಂದೆ ಗೋವಿಂದಗರುಡಗಮನ ಗೋವಿಂದ - ಕಿನ್ನರ ಸಿದ್ಧಗರುಡ ಸನ್ನುತ ಗೋವಿಂದ - ಅಪರಿಮಿತಕರುಣಾಸಾಗರ ಗೋವಿಂದ - ಅರಿಯದಂಥಪರಮ ಜ್ಯೋತಿಯೆ ಗೋವಿಂದ - ಗಂಗೆಯ ಪೆತ್ತಚರಣ ನಿರ್ಮಲ ಗೋವಿಂದ - ತೆತ್ತೀಸ ಕೋಟಿಸುರರ ಪೊರೆವ ಗೋವಿಂದ - ಶ್ರೀವೈಕುಂಠಪುರದೊಳಗಿಹ ಗೋವಿಂದ - ಅಚ್ಯುತಾನಂತತಿರುಪತಿ ನೆಲೆಯಾದಿ ಕೇಶವ ಗೋವಿಂದ
No comments:
Post a Comment