Labels

Sunday 24 November 2019

ಧರೆಯ ಭೋಗವನ್ನು dhareya bhogavanu

ಧರೆಯ ಭೋಗವನ್ನು ನಂಬಿಹರಿಯ ಮರೆದು ಕೆಡಲು ಬೇಡಧರೆಯ ಭೋಗ ಕನಸಿನಂತೆ ಕೇಳು ಮಾನವ ಪ
ತಿರುಕನೋರ್ವನೂರ ಮುಂದೆಮುರುಕು ಧರ್ಮಶಾಲೆಯಲ್ಲಿಒರಗಿರುತ್ತಲೊಂದು ಕನಸು ಕಂಡನೆಂತೆನೆಪುರದ ಅರಸು ಸತ್ತನವಗೆವರ ಕುಮಾರರಿಲ್ಲದಿರಲುಕರಿಯ ಕೈಲಿ ಕುಸುಮ ಮಾಲೆಯಿತ್ತು ಪುರದೊಳು 1
ಬಿಡಲದಾರ ಕೊರಳಿನಲ್ಲಿತೊಡರಿಸಲ್ಕೆ ಅವರ ಪಟ್ಟದೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆಒಡನೆ ತನ್ನ ಕೊರಳಿನಲ್ಲಿತೊಡರಿಸುವುದ ಕಂಡು ತಿರುಕಪೊಡವಿಯಾಣ್ಮನಾದೆನೆಂದು ಹಿಗ್ಗುತಿದ್ದನು 2
ಪಟ್ಟಗಟ್ಟಲಾಗ ನೃಪರುಕೊಟ್ಟರವಗೆ ಕಪ್ಪಗಳನುನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೆಪಟ್ಟದರಸಿಯೊಳಗೆ ಸುಖವಪಟ್ಟು ಮನದಿ ಹರುಷಗೊಳಲುಪುಟ್ಟಿದವು ಹೆಣ್ಣು ಗಂಡು ಮಕ್ಕಳಾಗಲೆ 3
ಓಲಗದೊಳಗಿರುತ ತೊಡೆಯಮೇಲೆ ಮಕ್ಕಳಾಡುತಿರಲುಲೀಲೆಯಿಂದ ಚಾತುರಂಗ ಬಲವ ನೋಡುತಲೋಲನಾಗಿ ನೆನೆದು ಮನದಿಪೇಳೆ ಮಂತ್ರಿಗಳಿಗೆ ಆಗಬಾಲೆಯರನು ನೋಡಿ ಮದುವೆ ಮಾಳ್ಪೆನೆಂದನು 4
ನೋಡಿ ವರಗಳೆನುತ ಕಳುಹೆನೋಡಿ ಬಂದೆವೆನಲು ಜೀಯಮಾಡೆ ಮದುವೆ ಮಂಟಪವನು ರಚಿಸಿರೆಂದನುಗಾಢ ಸಂಭ್ರಮದೊಳು ಕೂಡಿಮಾಡಿದನವ ಮದುವೆಗಳನುರೂಢಿ ಪಾಲರೆಲ್ಲ ಕೇಳಿ ಮೆಚ್ಚುವಂದದಿ 5
ಧನದ ಮದವು ರಾಜ್ಯ ಮದವುವನಿತೆ ಮದವು ಸುತರ ಮದವುಕನಸಿನಲ್ಲಿ ಕಂಡು ತಿರುಕ ಹಿಗ್ಗುತಿದ್ದನುಅನಿತರೊಳಗೆ ನೃಪರ ದಂಡುಮನೆಯ ಮುತ್ತಿದಂತೆ ಕಂಡುಕನಸಿನಲ್ಲೆ ದಿಗಿಲುಗೊಂಡು ಕಣ್ಣು ತೆರೆದನು 6
ಮೆರೆಯುತಿದ್ದ ಭಾಗ್ಯವೆಲ್ಲಹರಿದು ಹೋಯಿತೆಂದು ತಿರುಕತಿರಿವುದಕ್ಕೆ ನಾಚುತಿದ್ದ ಮರುಳನಂದದಿಸಿರಿಯು ಕನಸಿನಂತೆ ಕೇಳುಅರಿತು ಆದಿಕೇಶವನ್ನಹರುಷದಿಂದ ಭಜಿಸೆ ನಿತ್ಯ ಸುಖವನೀವನು 7
* ಈ ಕೀರ್ತನೆ ಮುಪ್ಪಿನ ಷಡಕ್ಷರಿಯದೆಂದೂ ಪ್ರತೀತಿಯಿದೆ.

No comments:

Post a Comment