Labels

Thursday, 21 November 2019

ಗೋವಿಂದ ಹರಿ ಗೋವಿಂದ Govind hari govinda

ಗೋವಿಂದ ಹರಿ ಗೋವಿಂದ ಪ
ಗೋವಿಂದ ಪರಮಾನಂದ ಮುಕುಂದಅ
ಮಚ್ಛ್ಯಾವತಾರದೊಳಾಳಿದನೆ - ಮಂದರಾಚಲ ಬೆನ್ನೊಳು ತಾಳಿದನೆಅಚ್ಛ ಸೂಕರನಾಗಿ ಬಾಳಿದನೆ - ಮದಹೆಚ್ಚೆ ಹಿರಣ್ಯಕನ ಸೀಳಿದನೆ1
ಕುಂಭಿನಿ ದಾನವ ಬೇಡಿದನೆ - ಕ್ಷಾತ್ರ-ರೆಂಬುವರನು ಹತ ಮಾಡಿದನೆಅಂಬುಧಿಗೆ ಶರ ಹೂಡಿದನೆ - ಕಮ-ಲಾಂಬಕ ಗೊಲ್ಲರೊಳಾಡಿದನೆ 2
ವಸುದೇವನುದರದಿ ಪುಟ್ಟಿದನೆ - ಪಲ್‍ಮಸೆವ ದನುಜರೊಡೆಗುಟ್ಟಿದನೆಎಸೆವ ಕಾಳಿಂಗನ ಮೆಟ್ಟಿದನೆ - ಬಾ-ಧಿಸುವರ ಯಮಪುರಕಟ್ಟಿದನೆ 3
ಪೂತನಿಯ ಮೈ ಸೋಕಿದನೆ - ಬಲುಘಾತದ ಮೊಲೆಯುಂಡು ತೇಕಿದನೆಘಾತಕಿಯನತ್ತ ನೂಕಿದನೆ - ಗೋಪವ್ರಾತ ಗೋಗಳನೆಲ್ಲ ಸಾಕಿದನೆ4
ಸಾಧಿಸಿ ತ್ರಿಪುರರ ಗೆಲಿದವನೆ - ಮ್ಲೇಚ್ಛರಛೇದಿಸೆ ಹಯವೇರಿ ಕೆಲೆದವನೆಸಾಧುಸಂತರೊಡನೆ ನಲಿದವನೆ - ಬಾಡದಾದಿಕೇಶವ ಕನಕಗೊಲಿದವನೆ 5

No comments:

Post a Comment