ಕೈಯ ತೋರಿದ ಬಗೆಯ, ಅಮ್ಮಮ್ಮ ಯಾದವಗಿರಿ ಕಲ್ಯಾಣಿ ನೀನು ಪ
ಸಕಲ ಜನರು ಕಾಣುತಿರಲುವಿಕೃತಿ ವತ್ಸರ ಚೈತ್ರ ದ್ವಿತೀಯೇಕಾದಶಿಯೊಳುಪ್ರಕಟಿತಾ ಶುಕ್ರವಾರದೊಳು ತನ್ನಭಕುತರಿಗುತ್ಸಾಹ ಸಂಧ್ಯಕಾಲದೊಳು 1
ಕಡಗ ಕಂಕಣ ಗೀರುಗಂಧ ಮಿಗೆಕಡು ಚೆಲುವಿನ ಬಣ್ಣ ಕುಪ್ಪುಸದಿಂದನಡು ಬೆರಳುಂಗುರದಿಂದ ಕೈಯಬೆಡಗ ನೋಡಿದ ಜನರಿಗೆ ಪುಟ್ಟಿತಾನಂದ 2
ಜನರೆಲ್ಲ ಯದುಶೈಲೋತ್ಸವವ ಕೇಳಿಘನ ಕಾಲದೇಶದಜಿತ ಭಯವನಿಮಗೆ ಬಿನ್ನೈಪೆನು ನಯವ ಕೊಟ್ಟಮನೋಹರುಷದಿ ನಮಗಿತ್ತ ವೈಭವವ 3
ಚೆಲುವರಾಯನ ರಥೋತ್ಸವದೀ ತೀರ್ಥಕೊಲಿದು ಗಂಗಾದೇವಿ ಬರುವ ಸಂಭ್ರಮವನೆಲೆಯ ಸರ್ವರಿಗನುಭವವ ಕೋಟಿಮನೋಹರುಷವನ್ನು ನಮಗಿತ್ತ ವೈಭವವ 4
ನಿನ್ನ ಮೋಹದ ಕಂದ ನಾನೊ ಕೇಳೆನಿನ್ನೊಮ್ಮೆ ದಿವ್ಯ ಹಸ್ತಂಜವನೀವಚೆನ್ನಿಗ ವರದ ವೆಂಕಟಾದಿಕೇಶವನುತನ್ನ ನಂಬಿದ ಭಕ್ತರಾಶ್ರಿತ ಕಾಮಧೇನು 5
No comments:
Post a Comment