Labels

Friday, 1 November 2019

ರಂಗನಾಥನ ನೋಡುವ Ranganathana noduva

ರಂಗನಾಥನ ನೋಡುವ ಬನ್ನಿ ಶ್ರೀ- ಪ
ರಂಗನ ದಿವ್ಯ ವಿಮಾನದಲ್ಲಿಹನಅ.ಪ.
ಕಮನೀಯಗಾತ್ರನ ಕರುಣಾಂತರಂಗನಕಾಮಿತಾರ್ಥವೀವ ಕಲ್ಪವೃಕ್ಷನಕಮಲದಳನೇತ್ರನ ಕಸ್ತೂರಿ ರಂಗನಕಾಮಧೇನು ಕಾವೇರಿ ರಂಗನ1
ವಾಸುಕಿಶಯನನ ವಾರಿಧಿನಿಲಯನವಾಸುದೇವ ವಾರಿಜನಾಭನವಾಸವಾದಿ ಭಕ್ತ ಹೃದಯಾಂಬುಜದಲ್ಲಿವಾಸವಾಗಿರುತಿಹ ವಸುದೇವಸುತನ2
ಮಂಗಳಗಾತ್ರನ ಮಂಜುಳಭಾಷನಗಂಗಾಜನಕ ಅಜಜನಕನಸಂಗೀತಲೋಲನ ಸಾಧುಸಮ್ಮತನರಂಗವಿಠಲ ರಾಜೀವನೇತ್ರನ 3

No comments:

Post a Comment