ರಂಗ ಕೊಳಲನೂದುತ ಬಂದಯಶೋದೆಯ ಕಂದ ಪ
ಕೊಳಲ ಧ್ವನಿಗೆ ವಿರಹವು ನಾರಿಯರಿಗೆಕಳಕಳÀವಾಗಲು ಕಳಕಳಿಸುತ ಅ.ಪ.
ಶೃಂಗಾರ ಕೊಳಲ ಗಾಯನ ಮಾಡೆಸ್ತ್ರೀಯರು ನೋಡೆ ರಂಗನ ಪಾದದಲಿ ಮನ ಹೂಡೆಭೃಂಗಾಮೃತ ತೈಲದಿಅಂಗನೆಯರು ಝಳಕವ ಮಾಡೆದೇವರ್ಕಳು ನೋಡೆತುಂಗವಿಹಂಗ ಭುಜಂಗ ನವಿಲು ಸಾ -ರಂಗ ಗಿಣಿಯು ಮಾತಂಗ ಮರಿಯು ಕು-ರಂಗ ಮಧ್ಯೆ ಚರಣಂಗಳೆಡೆಗೆ ವೇ-ದಂಗಳೆರಗೆ ಕಾಮಂಗಳಲುಗೆ ನೇ-ತ್ರಂಗಳಿಗತಿ ಚಿತ್ರಂಗಳಾಗೆ ಆರಂಗನೂದ್ವ ಸಾರಂಗ ಕೇಳಿ ಋಷಿಪುಂಗಸಹಿತ ತಾವುಗಳು ಬರೆ ನರ-ಸಿಂಗನೂದಿದ ಜಗಂಗಳ ಮೋಹಿಸಿ1
ಬಂಗಾರ ಬಟ್ಟಲೊಳಗೆ ಅಂದುಕ್ಷೀರವ ತಂದು ರಂಗಗರ್ಪಿಸುವೆವು ನಾವೆಂದುಹರುಷದೊಳಂದು ಅಂಗನೆಯರು ಮೈಮರೆತು ನಿಂದುಒಲಿಯಬೇಕೆಂದು ಮಂಗಳ ಮಹಿಮನು ನೀನೆಂದುಅತಿಭಕುತಿಯೊಳಂದುತುಂಗ ವಿಕ್ರಮನ ಪದಂಗಳಿಗೆರಗಲುರಂಗ ನೆಗಹಿ ಕರಂಗಳ್ಹಿಡಿಯ ಮೋ-ಹಂಗಳಿಂದ ವಿರಹಗಳ್ಹೆಚ್ಚಿ ರವಿಕೆಂಗಳುಡೆಯ ಕುಚಂಗಳು ಬಿಟ್ಟಾ-ಲಿಂಗಿಸುತಿರೆ ಶ್ರೀ ಮಂಗಳಾಂಗಗೆ ಪು-ಷ್ಪಂಗಳಿಂದ ವರುಷಂಗಳು ಮೇಲ್ ಸುರ-ರಂಗಳು ಸುರಿಯೆ ಉತ್ತುಂಗ ಮಹಿಮ ಹರುಷಂಗಳ ಬೀರುತ ಅಂಗನೆಯರಿಗೆ 2
ಮಂದಿರ ಮಾನಿನಿಯರು ಬಿಟ್ಟುಮನದಲಿ ಕಂಗೆಟ್ಟುಮಂದರೋದ್ಧರನಲ್ಲೆ ಮನವಿಟ್ಟುಕರೆಕರೆಯ ಬಿಟ್ಟುಚಂದದಿ ಕರ್ಪೂರ ವೀಳ್ಯವನಿಟ್ಟುಸಡಗರವ ತೊಟ್ಟುಒಂದಾಗಿ ಚೆದರುತ ತೋಷವ ತೊಟ್ಟುತ್ವರೆ ಬರುವರು ಅಷ್ಟುಅಂದದಿಂದಲಾನಂದವೇರಿ ಮು -ಕುಂದನಂಘ್ರಿ ಮುದದಿಂದ ಸ್ಮರಿಸಿ ಬರು-ವಂದ ನೋಡಿ ಗೋವಿಂದ ಕೊಳಲ ಬಹುಅಂದದೊಳಿಡೆ ಈ ಇಂದುವದನೆಯರುಚಂದ್ರನುದಯವಾದಂತೆ ಆಯ್ತು ಮನಗಂಧ ಕಸ್ತೂರಿ ತಂದು ಆಗ ಹರಿಕಂದರದೊಳಗಿಡೆ ರಂಗವಿಠಲ ದಯದಿಂದ ನೋಡ್ದ ಪುರಂಧ್ರಿಯರನ್ನು3
No comments:
Post a Comment