Labels

Monday, 4 November 2019

ಕಂಡು ಧನ್ಯನಾದೆ ಗುರುಗಳ kandu dhanyanade gurugala

ಕಂಡು ಧನ್ಯನಾದೆ ಗುರುಗಳ - ಕಣ್ಣಾರೆ ನಾಕಂಡು ಧನ್ಯನಾದೆ ಈ ಗುರುಗಳ ಪ
ತುಂಗಾತಟದಿ ಬಂದು ನಿಂತ ಪಂಗು ಬಧಿರಾದ್ಯಂಗ ಹೀನರಅಂಗಗೈಸಿ ಸಲಹುವಾ - ನರಸಿಂಗನಂಘ್ರಿ ಭಜಕರಿವರ 1
ಗುರುವರ ಸುಗುಣೇಂದ್ರರಿಂದಪರಿಪರಿಯಲಿ ಸೇವೆಗೊಳುತವರಮಂತ್ರಾಲಯ ಪುರದಿ ಮೆರೆವಪರಿಮಳಾಖ್ಯ ಗ್ರಂಥಕರ್ತರ 2
ಸೋ ಅಹಂ ಎನ್ನದೆ ಹರಿಯ ದಾಸೋ ಅಹಂ ಎನ್ನಲು ಒಲಿದು ವಿಜಯಮೋಹನ ವಿಠ್ಠಲನ್ನ ಪರಮಸ್ನೇಹದಿಂದ ತೋರುವವರ 3

No comments:

Post a Comment