ಗುರುರಾಜರೆ ಎನ್ನ ಪರಿಪಾಲಿಸುವುದು ಬಿಟ್ಟುವರ ಮಂತ್ರಾಲಯದೊಳು ಇರುವುದುಚಿತವೇನೊ ಪ
ಬಡವ ಭಕ್ತ ಕಷ್ಟಕಲೊಳಿರಿಸಿ ತುಂಗಾದಡದಿ ನಿಂತೆನ್ನ ಕೈಪಿಡಿಯದೆ ಪೋಗುವರೇನೊ 1
ಕಡು ಸೇವಕನೊಳಿಂಥ ಕಡುಕೋಪವ್ಯಾತಕೆನಡೆ ನುಡಿ ಎನ್ನ ತಪ್ಪು ಪಿಡಿದು ಪೋಗುವರೇನೊ 2
ಎಂದಿಗಾದರು ನಿನ್ನ ಪೊಂದಿದವನಲ್ಲೋಮುಂದೇನುಗತಿ ಪೇಳೊ ಇಂದಿರೇಶನ ಪ್ರಿಯ 3
No comments:
Post a Comment