ಎಂದು ಬರುವನು ಇಲ್ಲೆ ಮಂದಸೂನನುನಮಗೆ ಮುಂದೆ ಗತಿಯೇನುದ್ಧವಾಒಂದು ಕಾರ್ಯವು ಬಾರದಂದಿನಾದಿಈಶ ಸುರಸುಂದರನು ಪೋದನಲ್ಲೋ ಉದ್ಧವಾ ಪ
ಸರಿ ರಾತ್ರಿಯೊಳು ಯಮುನೆ ಸರಿತ ತೀರದಿ ನಿಂತುಮುರಲಿ ಊದಿದನುದ್ಧವಾಶರಣದೊಳು ಪತಿ ಸುತರ ಪರಿಚರಿಸುತಿಹ ನಮ್ಮಮರುಳು ಮಾಡಿದನುದ್ಧವಾ 1
ತೊರೆದು ಮನೆ ಧನಗಳನೆ ಬರಲು ಬಳಿಯಲಿ ಭಾಳತರಲಿ ಮಾಡಿದನುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 2
ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆತುರುಬಿನೊಳಗಿಟ್ಟುದ್ಧವಾಸರಸ ಸೌಂದರ್ಯಕ್ಕೆ ಮರುಳಾದನಿವನೆಂದುಗರುವ ಮಾಡಿದೆವುದ್ಧವಾಅಂತು ನಮ್ಮನು ಬಿಟ್ಟು ಮರೆಯಾಗಿ ರೋಧಿಸಲುಭರದಿ ಬಂದನುದ್ಧವಾ 3
ಕೋಲು ಕುದುರೆಯನೇರಿ ಬಾಲಕರಕೂಡಿ ತಾ ಕೇಳಿ ಮಾಡಿದನುದ್ಧವಾಲೀಲೆ ಚತುರರ ಸದೃಶ ಬಾಲೆಯರಕೂಡಿ ತಾ ಕೋಲನಾಡಿದನುದ್ಧವಾ4
ಕಾಲಿನೊಳು ರುಳಿಗೆಜ್ಜೆ ಕರದಿ ಕಂಕಣವಂಕಿ ಶೀಲ ಸುಂದರನುದ್ಧವಾಪಾಲು ದಧಿ ಬೆಣ್ಣೆ ನಮ್ಮಾಲಯದೊಳುತಿಂದು ಭಾಳ ಮೋಹಿಸಿದನುದ್ಧವಾ 5
ಸುಖಿಸಿದನುದ್ಧವಾ ಉರಗರಾಜನ ತುಳಿದುಮಡದಿ ನುಡಿಸಲು ಡಾನು ಗರಳ ಹರಿಸಿನುದ್ಧವಾಉರಿಯ ನುಂಗುತ ಮುಖದಿ ಬೆರಳೊಂದುಹತ್ತೊಂದು ವರುಷ ಇಲ್ಲಿದ್ದುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 6
ಒಂದಿನಾದರೂ ಒಮ್ಮೆ ಮನದಿ ಗೋಕುಲದವರಇಂದು ಸ್ಮರಿಪನೆ ಉದ್ಧವಾಚಂದ್ರ ವದನೇರ ಸ್ನೇಹ ಕೂಡಿ ಪುರದೊಳು ನಮ್ಮನಿಂದು ಮರೆತನೆ ಉದ್ಧವಾ 7
ಬಂದು ಬಳಗವ ಬಿಟ್ಟು ಮಧುರೆಗೆಲ್ಲರುನಿನ್ನ ಹಿಂದೆ ಬರುವೆವೊ ಉದ್ಧವಾಕಂದರ್ಪ ಪಿತನಿವನ ಸ್ಮರಿಸುತಲೆ ದೇಹದಿಪ್ರಾಣವೊಂದೇ ಉಳಿದಿಹುದುದ್ಧವಾ8
ಪರಮ ವೈಕುಂಠನು ಸರತಿಯಲೆ ತೋರಿಸುತಮರುಳು ಮಾಡಿದನುದ್ಧವಾಗಿರಿಗಿರಿ ಝರಿಯೊಳಗೆ ಚರಿಸಿ ಚಿನ್ನದ ಚರಯಗುರುತು ಮಾಡಿದನುದ್ಧವಾಅರಿಯಲಿಲ್ಲವೋ ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 9
____
No comments:
Post a Comment