Labels

Wednesday, 6 November 2019

ಎಡ್ಡಂ ತಿಡ್ಡಂ ಮಾತುಗಳಾಡುವಿದಡ್ಡನು Eddam tiddam maatu

ಎಡ್ಡಂ ತಿಡ್ಡಂ ಮಾತುಗಳಾಡುವಿದಡ್ಡನು ಶಾಣ್ಯಾನೋಗುಡ್ಡದಿ ಸೇರುತ ಬಡ್ಡಿ ಸಹಿತ ಪರದುಡ್ಡು ಸೆಳೆವರೇನೋ ಪ
ಕೊಟ್ಟಾದನ್ನುಣ್ಣುತ ದೇಹವ ಪುಷ್ಟಿಸಿ ಕಾದಿರುಶಕಟ್ಟಿದ ಹಣವನು ಕಷ್ಟದಿ ಕೊಡದಿರೆ ಕುಟ್ಟಿ ಸೆಳೆದು ತರುವಿ ಚಾಳಿ ಕೆಟ್ಟದು ಕಲಿತಿರುವಿ 1
ಶಿಷ್ಟರು ಗುಡಿಯೊಳು ಬಂದರೆ ಅವರನು ಅಟ್ಟಿಸಿ ಹೊರಡಿಸುವಿಮೊಟ್ಟೆಯಲಿ ಹಣ ಕಟ್ಟಿದವರು ಬರೆ ದೃಷ್ಟಿಸಿ ಮನ್ನಿಸುವಿಚಾಳಿ ಕೆಟ್ಟದು ಕಲಿತಿರುವಿ 2
ಹೇಳಿದ ಮಾತನು ಕೇಳದೆ ನಮ್ಮೊಳು ಕಾಳಗ ನಡೆಸಿರುವಿಶ್ರೀಲೋಲನೆ ಮುಖತೋರಿಸು ಎಂದರೆ ಆಲಯಕ್ಹೋಗೆನುವಿಚಾಳಿ ಕೆಟ್ಟದು ಕಲಿತಿರುವಿ 3
ಹುಚ್ಚುನ ತೆರದೆಲೆ ಮಾತುಗಳಾಡುವಿ ನಿಶ್ಚಯ ಒಂದಿಲ್ಲಾತುಚ್ಛಿಸಿ ಎಲ್ಲವ ನಿನ್ನಲಿ ಬಂದರೆ ಮತ್ಸರ ನಡೆಸಿರುವಿಚಾಳಿ ಕೆಟ್ಟದು ಕಲಿತಿರುವಿ 4
ಭೂಸುರ ನಿಲಯದಿ ವಾಸಿಸೆ ನಿಜ ಶುಭ ದಾಸನಾಗಿದ್ದಿಈ ಸಮಯದೀತನು ಪೋಷಿಸಲು ವಿಷಯಾಸೆಯನಾಗಿದ್ದಿಧನರಾಸಿಯೊಳಗೆ ಬುದ್ಧಿ ಇಂದಿರೇಶನೆ ಕಲಿಸಿದ್ದಿ 5

No comments:

Post a Comment