ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವಸುರಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ಪ
ವೈಕುಂಠದಿಂದ ಬಂದು ಶೇಷಾಚಲದಲಿ ನಿಂದುಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧುಭಕುತಿ ಮುಕುತಿಯೀವ ಮತ್ಕುಲದೇವನೆಸಕಲ ಜನಸೇವಿತ ಘನ ಪರಿಪೂರ್ಣನೆವಿಕಸಿತ ಕಮಲನಯನ ಕಂಜನಾಭನೆಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ 1
e್ಞÁನಿಗಳ ಗೋಚರನೆ ತನ್ನಧ್ಯಾನಿಪರ ಮನೋಹರನೆದಾನವರ ಸಂಹರನೆ ಮಹಾದೈನ್ಯಾದಿಗಳುದ್ಧರನೆಆನಂದಮಯನೆ ಅನೇಕಾವತಾರನೆಅನುದಿನ ನೆನೆವರ ಹೃದಯ ಮಂದಿರನೆಘನಮಾಣಿಕ ಭೂಷಣ ಶೃಂಗಾರನೆತನುವಿನ ಕ್ಲೇಶ ದುರಿತ ಸಂಹರನೆ2
ಜಯತು ದೋಷವಿನಾಶ ಜಯಮಹಿಮಾ ವಿಶೇಷಜಯತು ಲಕುಮೀ ಪರಿತೋಷ ಜಯ ಶ್ರೀವೆಂಕಟೇಶಜಯ ಕಮಲಜನಕನೆ ಜಯಜಗದೀಶಜಯ ಗಜವರದ ಪಾಲಿತ ಪುಣ್ಯಘೋಷಜಯತು ಜನಾರ್ಧನ ಜಗÀನ್ಮೋಹನ ವೇಷÀಜಯ ರಂಗವಿಠಲ ಕರುಣಾವಿಲಾಸ 3
No comments:
Post a Comment