ಒಂದಾನು ಒಂದು ದಿನ ಶಿಂಧುವಿನೊಳ್ ನೆರೆದು ಬಂದಾರು ದೇವತೆಗಳುವೃಂದಾವು ದುಷ್ಟ ಜನರಿಂದಾಲೆ ಭೂಮಿ ನೊಂದಾಳುಎಂದುಸುರಿತಾ ಪ
ಕಂದರ್ಪತಾತ ನಿನಗೊಂದಿಸಿ ಬೇಡುವೆನು ಛಂದಾದಸೂರ್ಯಸುತನಾಮಂದಿರದೋಳ್ ಜನಿಸಿ ನಂದಾದಿ ಗೋಕುಲದಿ ನಿಂದಾತ್ಮಲೀಲೆ ತೋರೊ ಅ.ಪ.
ಅಂದಾಡಿದೂತ ಸುರವೃಂದಾರ ವಾಕ್ಯಗಳ ಕಿವಿಯಿಂದಾಲೆಕೇಳಿ ಹರಿಯುಛಂದಾದಿ ನೀವುಗಳು ಮುಂದಾಗಿ ಜನಿಸುವದು ಹಿಂದಾಗಿನಾ ಜನಿಸುವೇಅಂದಾಡಿದಂಥ ಹರಿ ಸುಂದರಾ ಮಾತವನು ತಂದಾನುಬ್ರಹ್ಮ ಮನದೀಇಂದ್ರಾದಿಗಳಿಗೆಲ್ಲ ಅವನಂದದ್ದು ಪೇಳೆ ನಿಜಮಂದಿರಖೋಗಿರೆಂದಾ 1
ಎಲ್ಲಾ ಅಮರರೂ ನಿಜವಲ್ಲಾಭಿಯರು ಸಹ ಅಲ್ಲಲ್ಲೆಜನಿಸುತಿಹರೂಫುಲ್ಲಾಕ್ಷತಾ ಮಥುರೆಯಲಿಟ್ಟು ಗೋಕುಲದಿ ಮೆಲ್ಲಾನೆಬೆಳೆಯುತಿರಲುಅಲ್ಲಿದ್ದ ಗೋಪಿಯರು ಯಲ್ಲಾರು ತಾವು ನಿಜವಲ್ಲಾಭೆರೆಂದು ಹರಿಯೋಳ್‍ಎಲ್ಲಾನು ಬಿಟ್ಟು ಅವನಲ್ಲಿಗೆ ಸ್ನೇಹವನು ಉಲ್ಹಾಸಮಾಡುತಿರಲು 2
ಇಂದೀವರಾಕ್ಷ ಇಹ ಬಂದಾ ಸುರೇಂದ್ರಗಣ ನೊಂದಾನುಒಂದು ಬಿಡದೇವೃಂದಾವನಾದಿ ತನನಂಥಾ ದಿನಗಳೆಲ್ಲ ಒಂದೊಂದೇಲೀಲೆ ತೋರಿಇಂದ್ರಾನ ಗರ್ವಕಳೆದಿಂದೆತ್ತಿ ಪರ್ವತವ ಒಂದಂಗುಲಿಯಲ್ಲಿಧರಿಸೀಮುಂದೇಳು ದಿವಸ ವ್ರಜ ಮಂದೀಯ ಕಾಯ್ದ ಕರ ವೃಂದಾವನದಲ್ಲಿಳುಹಿದಾ 3
ವಂದೀನ ರಾತ್ರಿ ರವಿನಂದಿನಿಯೋಳ್ ಹರಿಯುನಿಂದೂದಲಾಗ ಕೊಳಲುವೃಂದಾದರಾಗಗಳಿಂದಾಲೆ ಕೇಳಿ ವ್ರಜದಿಂದಾವರಾನಿಹರೂಮಂದೀರದೊಳಗೆ ನಿಜ ಕಂದಾರು ನಾಥಗಳು ಛಂದಾದವಸ್ತ್ರಂಗಳುವಂದಾನು ನೋಡದಲೆ ವಂದಾರು ಯಮುನೆಯಲಿಂದಾರುಮೈಯ್ಯ ಮರೆತು 4
ಬಂದೇವು ನಾವು ನಿಜ ಮಂದೀರ ಬಿಟ್ಟು ನಿಮ್ಮ ಸುಂದರಕೊಳಲ ಧ್ವನಿಗೇಛಂದಾದ ಸ್ಮರಣೆ ಸುಖದಿಂದಿತ್ತು ನಮಗೆ ದ್ವಿಜೇಂದ್ರೇತಕಾಯೋ ಯನಲುಅಂದಾವರಾಮಾತು ನಂದಾನುಸೂನ ದಯದಿಂದಾಲೆಕೇಳಿ ಹರಿಯೂಮುಂದಣಿಯಾಗ ಅವರಿಂದಾಲೆ ಕೂಡಿ ದಯದಿಂದಾಲೆನಲಿದು ಮರೆದೂ 5
ಬಂದಾನು ಮಥುರೆಯಲಿ ಕೊಂದಾನು ಮಾತುಳನೆತಂದೀಯಾ ಬಂಧನವ ಬಿಡಿಸೀಸಾಂದೀಪಗಿತ್ತು ಕಂದಾನಸೂನ ಕುರು ನಂದಾರಕೊಲ್ಲಿಸಿದನೂಇಂದ್ರತ್ವ ಜ್ವಾಲೆಗಳೂ ಅಂತಿತ್ತು ರಾಜ ಸುಖ ಸಂದೇಹ ಸಂತೋಷದೀಇಂದ್ರಾದಿ ಸರ್ವಸುರ ಸಂದೇಹ ಪ್ರಾರ್ಥಿಸಿದ ಒಂದೊಂದೆ ಮಹಿಮೆಗಳನೂ 6
ಛಂದಾಗಿ ಮಾಡಿದ್ವಶ ಮಡುಹಿಕರ ವೃಂದಾವಪಾಲಿಸಿದನೂನಂದಾತ್ಮ ಜಾತವು ಒಂದೊಂದೆ ಮಹಿಮೆಗಳ ತಂದೊಮ್ಮೆಮನದಿ ಸ್ಮರಿಸೀಬೆಂದಾವು ಪಾಪಗಳು ಬಂದಾವು ಸೌಖ್ಯಗಳುಸಂದೇಹವಿಲ್ಲನಿದರೋಳ್‍ಕಂದಾರ ಕೊಡುವ ಧನ ವೃಂದಾವು ಪೊರೆವಾ ಮಂದೀರವಿತ್ತು ಸಲಹುವ 7
ಇಂದೆನ್ನ ಮಾನಸದಿ ತಂದಾತ್ಮ ರೂಪವನೂ ಛಂದಾಗಿ ಸಂತೈಸಲೀನಂದಬಾಲಾಷ್ಟಕವನೂ ಇಂದುವಾವರು ಪಠಿಸುವಾ ಇಂದಿರೇಶನು ಪಾಲಿಸುವನೂ 8
_____
No comments:
Post a Comment