ಎಷ್ಟು ಚಲುವರೋ ರಾಮಕೃಷ್ಣರೆಷ್ಟು ಚಲುವರೊಎಷ್ಟು ಚಲುವರಿವರ ಶಿರದಿ ಬಿಟ್ಟ ಜುಲುಪಿ ಕೇಶ ಚಂದ ಪುಟ್ಟ ಬಾಲಕಾರು ಕೂಡಿ ಗೋಷ್ಟದೊಳಗೆ ಚಲಿಸಿದಾರೊ ಪ
ನಿನಗು ಇದ್ದವೋ ಈ ಜುಲುಪಿ ನಿನ್ನನುಜಗಿದ್ದವೊಮುನಿಯ ಕೂಡಿ ಪೋಗುವಾಗ ವನದಿ ನಾಲ್ಕು ಹತ್ತು ವರುಷಜನತೆಗಾದ ನಯನ ಸುಖದ ಘನತೆ ನೀನು ತಿಳಿದು ಪೇಳೋ 1
ಬಹಳ ಶೂರನೋ ತಥೋಪಿ ಧೈರ್ಯಶೀಲನಾಮನೋಶೂಲ ಪಾಣಿ ಧನದ ಭೂಮಿ ಪಾಲು ಸಾಧಿಸಿ ಮುರಿದು ನಿಂತಬಾಲಕೃಷ್ಣ ಶತ್ರುಗಣದಿ ಬಾಲೆಯೆತ್ತಿಕೊಂಡು ಪೋದ 2
ಸತ್ತ ಕಪಿಗಳಾ ನೋಡದೆಲೆ ವನದೊಳಿತ್ತಿ ಅಸ್ತುಗಳುಮೃತ್ಯುಪೊಂದಿ ಬಹಳ ಕಾಲ ಎತ್ತಜೀವ ಎತ್ತಕಾಯಪುತ್ರ ವೃತ್ತಿ ಮಾತೆ ಗುರು ಸುಪಾತ್ರರನ್ನು ಸುಖಿಸಿದಾರು 3
ಪಿತೃನಾಗ್ಞದಿ ನೋಡುತಲೆ ವನದೊಳ್ಹೆತ್ತೆ ಮಾಡಿದೆಮತ್ತ ಆನೆಯಮಲ್ಲ ಕಂಸನೊತ್ತಿ ತುಳಿದು ಮಧುರೆಯಲ್ಲಿಹತ್ತು ಒಂದು ವಯದ ಬಾಲ ಮುತ್ಯಾ ಮಾತೆಯರನು ಕಾಯ್ದ 4
ಕೂಸುಪಿಡಿಯಿತು ಪೂಥಣಿಯ ಮೊಲೆಯ ತಾಸು ತಿಂದಿತುಈ ಶರೀರದೊಳಗೆ ತಾಟಕಾಸುರೀಯ ಕೊಂದ ಇಂದಿರೇಶಅದ್ಭುತಾವದಿದರೊಳಾರು ಪೇಳೊ ದಾಶರಥಿಯೆ 5
No comments:
Post a Comment