ಏಳಮ್ಮಾ ತುಳಸಿ ಕೋಮಲವೇಣಿ ನೀಲವರ್ಣನ ರಾಣಿ ನಿತ್ಯ ಕಲ್ಯಾಣಿ||ಪ||
ಏಳುತಲೆದ್ದು ಶ್ರೀತುಳಸಿಗೆ ಕೈ ಮುಗಿದು
ಏಳು ಪ್ರದಕ್ಷಿಣೆ ಹಾಕುತಲಿ
ಏಳು ಜನ್ಮದ ಪಾಪ ಕಳೆವಂಥ ತಾಯೆ ನೀ||೧||
ಉಟ್ಟ ಪೀತಾಂಬರ ಹೃದಯದೊಳ್ ಕೌಸ್ತಭ
ತೊಟ್ಟ ಮುತ್ತಿನ ಅಂಗಿ ತೋಳ ಬಾಪುರಿಯು
ಇಟ್ಟ ದ್ವಾದಶನಾಮ ನೊಸಲಲ್ಲೆ ತಿಲಕವು
ಲಕ್ಷ್ಮೀರಮಣನು ನಿನಗೊಪ್ಪಿದನಲ್ಲ ತುಳಸಿ||೨||
ಎಡದ ಕೈಯಲ್ಲಿ ಶಂಖ ಬಲದ ಕೈಯಲ್ಲಿ ಚಕ್ರ
ಎಡಬಲಕೊಪ್ಪುವ ಛತ್ರಚಾಮರವು
ಡಿದ ಮಲ್ಲಿಗೆ ಹೂಮುಡಿಯಿಂದಲುದುರುತ
ಒಡೆಯ ಶ್ರೀ ಪುರಂದರವಿಠಲನ ರಾಣೀ||೩||
ಏಳುತಲೆದ್ದು ಶ್ರೀತುಳಸಿಗೆ ಕೈ ಮುಗಿದು
ಏಳು ಪ್ರದಕ್ಷಿಣೆ ಹಾಕುತಲಿ
ಏಳು ಜನ್ಮದ ಪಾಪ ಕಳೆವಂಥ ತಾಯೆ ನೀ||೧||
ಉಟ್ಟ ಪೀತಾಂಬರ ಹೃದಯದೊಳ್ ಕೌಸ್ತಭ
ತೊಟ್ಟ ಮುತ್ತಿನ ಅಂಗಿ ತೋಳ ಬಾಪುರಿಯು
ಇಟ್ಟ ದ್ವಾದಶನಾಮ ನೊಸಲಲ್ಲೆ ತಿಲಕವು
ಲಕ್ಷ್ಮೀರಮಣನು ನಿನಗೊಪ್ಪಿದನಲ್ಲ ತುಳಸಿ||೨||
ಎಡದ ಕೈಯಲ್ಲಿ ಶಂಖ ಬಲದ ಕೈಯಲ್ಲಿ ಚಕ್ರ
ಎಡಬಲಕೊಪ್ಪುವ ಛತ್ರಚಾಮರವು
ಡಿದ ಮಲ್ಲಿಗೆ ಹೂಮುಡಿಯಿಂದಲುದುರುತ
ಒಡೆಯ ಶ್ರೀ ಪುರಂದರವಿಠಲನ ರಾಣೀ||೩||
No comments:
Post a Comment