ಇಂದಿರೆ ನಿನ್ನ ಪೂಜೆ ಛೆಂದಾಗಿ ಮಾಡುವೆ ನಾನು ಪ
ಮಂದಹಾಸದಿ ಮೋದದಿಂದಲೇ ನೋಡು ದಯದಿ ಅ.ಪ.
ಜರದ ಪೀತಾಂಬರ ಕರದೊಳು ಧರಿಸಿರುವೆನೆಎರಕೋ ಹರಿಯ ಕೂಡ ಸರಸಿಜದಳ ನೇತ್ರಿಯೇ 1
ಮಂದಾರ ಮಲ್ಲಿಗೆ ಕುಂದದ ಚಂಪಕ ಜಾಜಿತಂದು ನಿಂತಿಹೆ ಹರಿಸುಂದರಿ ಸರಸದಿ ಮುಡಿಯೇ 2
ಗಂಧಕುಂಕುಮ ವೀಳ್ಯಾ ಬುಂದ್ಯಾ ಭಕ್ಷಗಳನುಬಂದು ಹರಿಯ ಕೂಡಿ ಛೆಂದಾಗಿ ಭುಂಜಿಸು ಬೇಗ 3
ಹರಡಿ ಕಂಕಣ ದುಂಡು ಹೆರಳು ಭಂಗಾರಗಳನುಹರುಷದಿಂದಲಿ ಕೃಷ್ಣನರಸಿ ತಂದಿಹೆ ನಿನಗೆ4
ಚಂದ್ರಶೇಖರ ಸುರವೃಂದಾದಿ ವಂದಿತ ಚರಣೆಇಂದಿರೇಶನ ಸಹ ಬಂದಿಲ್ಲಿ ತೋರಿಸು ಮುಖವಾ 5
No comments:
Post a Comment