ಡೊಂಕುಬಾಲದ ನಾಯಕರೆ ನೀವೇನೂಟವ ಮಾಡಿದಿರಿ \\ ಪ\\.
ಕಣಕ ಕುಟ್ಟುವಲ್ಲಿಗೆ ಹೋಗಿ ಹಣಿಕಿ ಹಣಿಕಿ ನೋಡುವಿರಿ ||
ಕಣಕ ಕುಟ್ಟೋ ಒನಕಿಲಿಬಡಿದರೆ ಕುಂಯ್ ಕುಂಯ್ ರಾಗವ ಮಾಡುವಿರಿ \\1\\
ಹುಗ್ಗಿ ಮಾಡುವಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿ ||
ಹುಗ್ಗಿ ಮಾಡುವ ಸವಟಿಲಿ ಬಡಿದರೆ ಕುಂಯ್ ಕುಂಯ್ ರಾಗವ ಮಾಡುವಿರಿ \\2\\
ಹಿರಿಯ ಬೀದಿಯಲಿ ಓಡುವಿರಿ ಕರಿಯ ಬೂದಿಯಲಿ ಹೊರಳುವಿರಿ ||
ಪುರಂದರವಿಠಲರಾಯನ ಈ ಪರಿಮರೆತು ಸದಾ ನೀವು ತಿರುಗುವಿರಿ\\3\\
No comments:
Post a Comment