ದಣಿಯ ನೋಡಿದೆನೋ ವೆಂಕಟನ ಮನ ದಣಿಯೆ ನೋಡಿದೆ ಶಿಖಾಮಣಿಯ ನಿರ್ಮಲನ \\ಪ\\
ಕೇಸಕ್ಕಿ ಅನ್ನ ಉಂಬುವನ ದುಡ್ಡು ಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ||
ದೋಸೆ ಅನ್ನವ ಮಾರಿಸುವನ ತನ್ನ ದಾಸರ ಮೇಳದಿ ಕುಣಿದಾಡುತಿಹನ \\1\\
ಗಂಟಿನೊಲ್ಲಿಯ ಹೊದ್ದಿಹನಹೊರ ಹೊಂಟು ಹೋಗಿ ಬೇಟೆಯಾಡುತಲಿಹನ ||
ಗಂಟೆ ನಾದಕೆ ಒಲಿಯುವನ ಭೂವೈಕುಂಠವಿದೆಂದು ಹಸ್ತವ ತೋರಿದವನ \\2\\
ಬೆಟ್ಟದೊಳಗೆ ಇದುತಿಹನ ಮನ ಮುಟ್ಟೆ ಭಜಿಪ ಭಕುತರಿಗೊಲಿದವನ ||
ಕೊಟ್ಟ ವರವ ತಪ್ಪದವನ ಈ ಸೃಷ್ಟಿಗಧಿಕ ಪುರಂದರ ವಿಠಲನ \\3\\
No comments:
Post a Comment