ತಾಪಡೆದು ಬಂದುದಕುಪಾಯವೇನು ಕೋಪದಲಿ ಶ್ರೀಪತಿಯ ಶಾಪಿಸಿದರೇನು \\ಪ.\\
ಅನ್ನವಸ್ತ್ರವಿಲ್ಲವೆಂದು ಅತಿ ಕ್ಲೇಶಪಟ್ಟರೇನು ಧಾನ್ಯಧನಗಳ ಬೇಡಿ ಧರೆಗಿಳಿದರೇನು |
ಎಣ್ಣಿಯನು ಪೂಸಿ ಹುಡಿಯೊಳಗೆ ಹೊರಳಿದರೇನು ತನ್ನ ತಲೆ ಅಡಿಮಾಡಿ ತಪವ ಮಾಡಿದರೇನು \\1 \\
ಸರಿಯ ಸುಜನರ ಕಂಡು ಕರುಬಿ ಕೊರಗಿದರೇನು ಬರಿಮಾತುಗಳನಾಡಿ ಭ್ರಷ್ಟನಾದರೆ ಏನು ||
ಇರುಳು ಹಗಲೂ ಹೋಗಿ ಆರ ಮೊರೆಯಿಟ್ಟರೇನು ಅರಿಯದ - ಮನುಜರಿಗೆ ಆಲ್ಪರಿದರೇನು \\2 \\
ಹೋಗದೂರಿನ ದಾರಿ ಕೇಳಿ ಮಾಡುವದೇನು ಮೂಗನ - ಕೂಡ ಏಕಾಂತವೇನು ||
ಯೋಗೀಶ ಪುರಂದರವಿಠಲನ ನೆನೆಯದವ ತ್ಯಾಗಿಯಾದರೆ ಏನು ಭೋಗಿಯಾದರೆ ಏನು \\3 \\
No comments:
Post a Comment