ತಾಳಬೇಕು ತಕ್ಕ ಮೇಳಬೇಕು -
ಶ್ರೀ ಲೋಲನಚರಿತೆಯ ಹೇಳುವ ದಾಸರಿಗೆ ಪಗಳಶುದ್ಧಿ ಇರಬೇಕು |
ತಿಳಿದು ಪೇಳಲು ಬೇಕು|ಕಳವಳಬಿಡಬೇಕು ಕಳೆಮೊಗವಿರಬೇಕು 1
ಯತಿ ಪ್ರಾಸವಿರಬೇಕು ಗತಿಗೆ ನಿಲ್ಲಿಸಬೇಕು ||
ಶ್ರುತಿಪತಿ ಕೇಳಬೇಕು ರತಮುಖವಿರಬೇಕು 2
ಹರಿದಾಸನಾಗಿರಬೇಕು ಹರುಷ ಪಡುತಿರಬೇಕು
ಪುರಂದರವಿಠಲನಲಿ ಸ್ಥಿರಚಿತ್ತವಿರಬೇಕು 3
No comments:
Post a Comment