ದಯೆಮಾಡಿ ಸಲಹಯ್ಯ ಭಯನಿವಾರಣನೆ
ಹಯವದನ ನಾ ನಿನ್ನ ಚರಣ ನಂಬಿದೆ ಕೃಷ್ಣ \\ಪ\\
ಕ್ಷಣಕ್ಷಣಕೆ ನಾ ಮಾಡಿದಂಥ ಪಾಪಗಳೆಲ್ಲ ಎಣಿಸಲಳವಲ್ಲಷ್ಟು ಇಷ್ಟು ಎಂದು
ಫಣಿಶಾಹಿ ಅವಗುಣವ ನೋಡದೇ ಚರಣ ಸ್ಮರಣೆಯ ಮಾಡುವಂಥ ಭಕುತಿಯನಿತ್ತು \\1\\
ಕಂಡ ಕಂಡ ಕಡೆಗೆ ಪೋಪ ಚಂಚಲಮನಸು ಲಂಡತನದಲಿ ಬಹಳ ಭ್ರಷ್ಟ ನಾನು
ಭಂಡಾಟದವನೆಂದು ಬಹಿರಂಗಕೆಳೆಯದೆ ಕೊಂಡಾಡುವಂಥ ಭಕುತಿಯನಿತ್ತು ಸಲಹಯ್ಯ \\2\\
ಜಾತಿಧರ್ಮವ ಬಿಟ್ಟು ಅಜಮಿಳನು ಇರತಿರಲು ಪ್ರೀತಿಯಿಂದಲಿ ಮುಕುತಿಕೊಡಲಿಲ್ಲವೆ
ಖ್ಯಾತಿಯನು ಕೇಳಿ ಮೊರೆಹೊಕ್ಕೆ ದಯಾನಿಧಿಯೆ ಬೆ|ನ್ನಾತು ಕಾಯಯ್ಯ ಶ್ರೀ ಪುರಂದರವಿಠಲ \\3\\
No comments:
Post a Comment