ತುರುಕರು ಕರೆದರೆ ಉಣಬಹುದಣ್ಣ ತುರುಕರು ಕರೆದರೆ ಉಣಬಹುದು \\ ಪ\\
ಕರ ಕರೆ ಚಂಚಲ ಮಾಡದಿರಣ್ಣ ತುರುಕರು ಕರೆದರೆ ಉಣಬಹುದು \\ಅಪ \\
ತುರುಕರುವಿಂದ ಮುಟ್ಟು ಮುಡಚಟ್ಟು ಹೋಹುದು ತುರುಕರುವಿಂದ ಹೋಹದು ಎಂಜಲವು ||
ತುರುಕರು ಕಂಡರೆ ಸರಕನೆ ಏಳಬೇಕು ತುರುಕರುವಿನ ಮಂತ್ರ ಜಪಿಸಬೇಕಣ್ಣ\\1\\
ತುರುಕರುವಿಂದ ಸ್ವರ್ಗ ಸ್ವಾಧೀನವಾಹುದು ತುರುಕರುವಿಂದ ನರಕ ದೂರಪ್ಪುದು ||
ತುರುಕರು ಕೂದಲ ತುರುಬಿಗೆ ಸುತ್ತಿಕೊಂಡು ಗರತಿಯರೆಲ್ಲ ಮುತ್ತೈದೆಯರಣ್ಣ \\2\\
ತುರುಕರುವಿನ ನೀರೆರಕೊಂಡ ನಮ್ಮ ದೇವ ಉರವಕೊಂಡ ನೀರೆಲ್ಲ ಸನಕಾದಿಗೆ ||
ಬೆರಕೆಯ ಮಾಡಿದ ಪುರಂದರವಿಠಲ ಅರಿಕೆಯ ಮಾಡಿದ ಹರಿದಾಸರಿಗೆಲ್ಲ\\3\\
No comments:
Post a Comment