ತಾಳು ತಾಳೆಲೊ ರಂಗಯ್ಯ ನೀ ತಾಳು ತಾಳೆಲೊ ಕೃಷ್ಣಯ್ಯ \\ಪ \\
ನಾಳೆ ನೀನು ನಮ್ಮ ಮನೆಗೆ ಬಂದರೆ ಕಾಲ ಕಂಬಕೆ ಕಟ್ಟಿ ಪೇಳುವೆ ಗೋಪಿಗೆ \\ಅ.ಪ\\
ದೊರೆಗಳ ಮಗನೆಂಬುದಕೇನೊ ಬಹು ಧುರದಿ ಮನೆಯ ಪೊಕ್ಕ ಪರಿಯೇನೊ ||
ದುರುಳತನದ ಬುದ್ಧಿ ಸರಿಯೇನೊ ನೀನು ತಿರಿದು ಬೇಡುಂಡದ್ದು ಮರೆತೆಯೇನೊ \\1\\
ಚಿಕ್ಕಮಕ್ಕಳು ಇಲ್ಲವಂತೇನೊ ನಿನಗೆ ಕಕ್ಕೂಲಾತಿಯಿಂದಲಿ ನಿನ್ನ ||
ಸಿಕ್ಕಿದ ಶ್ರೀಲೋಲ ಹಿಡಿಹಿಡಿಯೆಂದರೆ ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೊ \\2\\
ಕಟ್ಟಿದ ತುರುಗಳ ಮೊಲೆಯುಂಡು ಕರು ಬಿಟ್ಟ ಕಾರಣವೇನು ಹೇಳೊ ||
ಸೃಷ್ಟೀಶ ಪುರಂದರವಿಠಲರಾಯನೆ ಇಟ್ಟಿಗೆಯ ಮೇಲೆ ಬಂದು ನಿಂತ ಕಾರಣವೇನೊ? \\3\\
No comments:
Post a Comment