ತನುವ ನಂಬಲುಬೇಡ ಜೀವವೆ \\ಪ.\\
ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವದು ಅನುವಿಲ್ಲದಾಗ ಈ ತನುವೆ ನಿನಗೆ ವೈರಿ \\ಅಪ\\
ಜರೆಮರಣಗಳಿಂದ ಭರಿತವಾದುದು ಕಾಯ ಸ್ಥಿರವೆಂದು ನಂಬಿ ನೀ ಮರುಳಾಗಬೇಡ \\1\\
ಧನ - ಧಾನ್ಯ ಪಶು - ಪತ್ನಿ ಸ್ಥಿರವೆಂದು ತಿಳಿದು ಮನುಮತನಯ್ಯನ ಮರೆಯದೆ ಮನವೆ \\2\\
ಶರಣೆಂದರೆ ಕಾವ ಗರುಡಕೇತನ ನಮ್ಮ ಪುರಂದರವಿಠಲನ ಮರೆಯದೆ ಮನವೆ \\3\\
No comments:
Post a Comment