ತುದಿನಾಲಿಗೆ ಬೆಲ್ಲ ಎದೆಗತ್ತರಿಯವರ ಸಂಗಬೇಡ ಹೃದಯ ದಾಕ್ಷಿಣ್ಯವನರಿಯದ ಮನುಜರ ಪ್ರಸಂಗಬೇಡ \\ಪ\\
ಮುಂದೆ ಭಲಾ ಎಂದು ಹಿಂದಾಡಿಕೊಂಬರ ಸಂಗಬೇಡ ಕುಂದು ನಿಂದೆಗಳ ಪ್ರಯೋಗ ಮಾಡುವರ
ಪ್ರಸಂಗ ಬೇಡ \\1\\
ಆಡಿ ಅಳುಕದ ಅಜ್ಞಾನಿ ಮನುಜರ ಸಂಗಬೇಡ ಕೂಡಿ ಕುಮಂತ್ರವ ಎಣಿಸುವ ನರರ ಪ್ರಸಂಗ ಬೇಡ\\ 2\\
ವಿನಯ - ವಿವೇಕವಿಲ್ಲದ ವಿದ್ವಾಂಸರ ಸಂಗಬೇಡ ತನಗಲ್ಲದ ಬಂಟ ನಂಟ ಮಿತ್ರಾಂಗಳ ಸಂಗಬೇಡ \\3\\
ತಮ್ಮ ಕಾರ್ಯಕ್ಕಾಗಿ ಪರರ ಕೆಡಿಸುವರ ಸಂಗ ಬೇಡ ನಮ್ಮ ಪುರಂದರವಿಠಲನಿರಲನ್ಯ ಪ್ರಸಂಗ ಬೇಡ \\4\\
No comments:
Post a Comment