ತಾರಮ್ಮಯ್ಯಯದುಕುಲ ವಾರಿಧಿ ಚಂದ್ರಮನ \\ಪ\\
ಮಾರಜನಕನಮೋಹನಾಂಗನ ಸೇರಿ ಸುಖಿಸೆ ಹಾರೈಸಿ ಬಂದೆವು \\ಅ.ಪ\\
ಬಿಲ್ಲು ಹಬ್ಬಗಳಂತೆ ಅಲ್ಲಿ ಬೀದಿ ಶೃಂಗಾರವಂತೆ ||
ಮಲ್ಲಕಾಳಗೆ ಮದ್ದಾನೆಗಳಂತೆ ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ \ \1\\
ಮಧುರಾಪುರವಂತೆ-ಅಲ್ಲಿ-ಮಾವ ಕಂಸನಂತೆ ||
ಒದಗಿದ ಮದಗಜ ತುರಗ ಸಾಲಿನಲಿ | ಮದನಮೋಹನ ಕೃಷ್ಣ ಮಧುರೆಗೆ ತೆರಳಿದ \\ 2\\
ಅತ್ತೆ ಮಾವನ ಬಿಟ್ಟು-ಬಂದೆವು ಹಿತ್ತಲ ಬಾಗಿಲಿಂದ ||
ಭಕ್ತವತ್ಸಲನ ಬಹು ನಂಬಿದ್ದೆವು | ಉತ್ಸಾಹ ಭಂಗವ ಮಾಡಿದನಮ್ಮ \\3\\
ರಂಗನ ನೆರೆನಂಬಿಬಂದೆವು-ಸಂಗ ಸುಖವ ಬಯಸಿ ||
ಭಂಗಿಸಿ ನಮ್ಮನು ಹಾಗೆ ಪೋದನಮ್ಮ ಮಂಗಳ ಮೂರುತಿ ಮದನ ಗೋಪಾಲನು \\4\\
ಶೇಷಗಿರಿಯ ಮೇಲೆಹರಿ ತಾವಾಸವಾಗಿಹ ಕಾಣೆ ||
ಸಾಸಿರನಾಮದ ಒಡೆಯನೆಂದೆನಿಸಿದ ಶ್ರೀ ಪುರಂದರವಿಠಲರಾಯನ \\5\\
No comments:
Post a Comment