Labels

Wednesday, 1 January 2020

ಚರಣಕಮಲವನು ತೋರೋ charana kamalavanu toro


ಚರಣಕಮಲವನು ತೋರೋ ಪ
ಮನವೆಂಬ ಮನೆಯನು ನಿರ್ಮಲಗೊಳಿಸು
ತನುಮನಧನದಾಶೆಯ ನೀ ಬಿಡಿಸೊ 1
ಆರು ಮಂದಿಯು ಯನ್ನ ಗಾರುಮಾಡುವರು
ಪಾರಗಾಣಿಸು ಬೇಗ ಶ್ರೀ ರಾಮದೇವ 2
ದಶರxಸುತ ನೀನು ಶಶಿಮುಖಕಾಂತನು
ಶಶಿಧರನುತನೀ ಅಪಮಸಾಹಸನೊ 3
ಮೂರಾವತ್ಸೇಗಳಲ್ಯು ದೂರಾಪೋಗದೆ ನೀ
ಕಾರುಣ್ಯದಿಂದ ಯೆನ್ನ ಶೇರಿರು ಹರುಷದಿ 4
ಸಿರಿವತ್ಸಾಂಕಿತ ನೀನು ತರಣಿಸುತನ ಸರವ
ಕರಕರೆ ಬಿಡಿಸಲು ಸುರರ ವೃಂದವ ಬಿಟ್ಟು 5


ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ gopala krishnaraya


ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ
ನೀ ಪರಿಹರಿಸು ಜೀಯ್ಯಾ ಪ
ವಿದ್ಯಾಶ್ರೀ ಸಿಂಧುತೀರ್ಥ ಶುದ್ಧ ಪದ್ಧತಿಯಿಂದ
ಶುದ್ಧ ಪೂರ್ವಕ ನಿನ್ನ ಭಜಿಪೆನು ಅನುದಿನ
ಮುದ್ದುಮೋಹನ ನೀನು ತಿದ್ದಿ ಸರ್ವರ ಹೃದಯ
ಬದ್ಧನಾಗಿರುತಿ ಪ್ರಸಿದ್ಧ ಮೂರುತಿ ವೇಣು 1
ಸುರಪನ ಗರ್ವವ ಹರಣವ ಮಾಡಿ ನೀ
ವರವಿತ್ತೆ ಕಾಳಿಂಗ ಉರಗನಿಗೆ
ಸುರರ ವೃಂದಗಳೆಲ್ಲ ಪೊರೆವುತ ಸರ್ವದಾ
ವರ ಕಲ್ಪತರುವೆಂದು ಮೆರೆಯುವಿ ಧರೆಯೊಳು 2
ಗಿರಿಯನು ಪೊತ್ತು ನೀ ಪೊರೆದಿಹ ತುರುಗಳ
ಮರೆಯೋದು ಯನ್ನನು ಸರಿಯೆನೊ ಹರಿಯೆ
ಶರಣ ರಕ್ಷಕ ಬೇಗ ಕರುಣಾಳು ಕಾಯಯ್ಯ
ಶ್ರೀವತ್ಸಾಂಕಿತನಾದ ವರಜಾರಚೋರ ವೇಣು 3


ಗಂಗಾಜನಕಗೆ ಮಂಗಳಾರುತಿಯನೆತ್ತಿ gangajanakage mangalarutiyennatti



ಗಂಗಾಜನಕಗೆ ಮಂಗಳಾರುತಿಯನೆತ್ತಿ
ಮಂಗಳಾಂಗಿಯರು ಸಂಗೀತ ಪಾಡುತ ಪ
ಅನಿಮಿಷೇಶನು ಆನಂದಾತ್ಮಾ ಪ್ರಾಕೃತನು
ಅನಿಲವಾಸಾನಂತಾನಂತಾನಂತನಂತರೂಪನು 1
ಲಕ್ಷ್ಮೀವಾಸನು ಕುಕ್ಷಿಯೊಳ್ ಬ್ರಹ್ಮಾಂಡಧರನು
ಲಕ್ಷಣಗ್ರಜನು ಸುಕ್ಷೇಮದಿಂದಿಡುವ ನಾಮ 2
ಕರುಣಪೂರ್ಣನು ಸ್ಮರಿಪರ ಭವವಿದೂರ
ಸರಿಮಿಗಿಲಿಲ್ಲದ ಸಿರಿವಿಠಲ ನಾಮಧೇಯ 3


ಕೊಳ್ಳೇಗಾಲದ ಲಕ್ಷ್ಮೀನಾರಾಯಣ kollegalada laxmi naaraayana


ಕೊಳ್ಳೇಗಾಲದ ಲಕ್ಷ್ಮೀನಾರಾಯಣ ಯನ್ನ
ಸೊಲ್ಲ ಲಾಲಿಸಿ ಬೇಗ ಸಲಹು ದೇವಾ
ಕ್ಷುಲ್ಲಕರೂ ಯನ್ನ ಖುಲ್ಲ ಮಾನವನೆಂದು
ತಲ್ಲಣಗೊಳಿಸೋರು ಭವನಾವಾ ಪ
ಓಡಿಬಂದೆನೊ ನಿನ್ನ ನೋಡಬೇಕೆನುತಲಿ
ಗಾಡಿಕಾರದೇವ ತ್ವರೆಯಿಂದ ದೂಡಬ್ಯಾಡೊ ನನ್ನ
ರೂಢಿಯವಳಗೆ ನೀ ನೀಡು ನಿನ್ನಯ ಪಾದ ಮುಕುಂದಾ 1
ಅಭಯವ ನೀಡಯ್ಯಾ ಇಭರಾಜವರದನೆ
ಉಭಯ ಸುಖಪ್ರದ ನೀನೆಂದು
ಅಭಿನಮಿಸುವೆನಯ್ಯ ಶಬರಿಯಂಜಲನುಂಡು
ಬುಜೆಗಧವಕೊಂಡಿ ವಿಬುಧವಂದಿತನೆ2
ಮೆರೆಯುವಿ ನೀ ಬಲು ಉರಗರಾಜಶಾಯಿ
ವರವಿಪ್ರನಿಕರದಿಂ ಪೂಜೆಗೊಂಡು
ಥರಥರದಲಿ ನೀ ಪೊರಹಿದೆ ಭಕ್ತರ
ಮರೆಯಬ್ಯಾಡ ನನ್ನ ಶಿರಿವತ್ಸಾಂಕಿತನೆ 3


ಕಾಯೋ ಬಾರೋ ಹರಿ kaayo baaro hari


ಕಾಯೋ ಬಾರೋ ಹರಿ ಈಯ್ಯೋ ವರ ಥೋರೀ
ಜಾರಚೋರಖರ ಅರಿನಾಶಕಾರಿ ಪ
ವಾಯುದೇವಪಿತ ತೋಯಜಾಕ್ಷಿ ಸೀತಾ
ಪ್ರಿಯ ನೀನು ತ್ರಾತ ರಾಯ ಜಗನ್ನಾಥ 1
ಕಾಮನಯ್ಯ ನೀನು ಮಾಮನೋಹರನು
ವಾಮನಾದಿ ನೀನು ರಾಮನಾಮಕನು 2
ಕರಿರಾಜನನ್ನು ತ್ವರಿತಾದಿ ಕಾಯ್ದಿ
ಶ್ರೀವತ್ಸಾಂಕಿತ ಹರಿ ವೆಂಕಟೇಶ3


ಕರುಣದಿ ಬಂದು ನಿನ್ನ ಚರಣ ಕಮಲವೆನ್ನ karungi bandu ninna


ಕರುಣದಿ ಬಂದು ನಿನ್ನ ಚರಣ ಕಮಲವೆನ್ನ
ಶಿರದ ಮೇಲಿಟ್ಟು ನೀ ಪೊರಿಯೊ ಕೃಪಾರಸ ಸುರಿಯೋ
ಗರುಡಧ್ವಜ ನೀನು ಸ್ಮರಮಣ ನಿನ್ನ ಭಕುತರ ಸುರಧೇನೆಂದು
ಕರೆವರು ನಿನ್ನನು ಪ
ಸರಸಿಯೊಳ್ಕರಿರಾಜ ಭರದಿಂದ ತನ್ನವುದ್ಧರಿಸೆಂದು ಮೊರೆಯಿಡೆ
ಪೊರೆದೆಯಲ್ಲೊ ಶಿರಿಯೊಳುನುಡಿಯದೋ ಶರಣಾಗತರನ್ನು
ಪೊರೆವೆನೆಂಬ ನಿಜ ಬಿರಿದನು ಮೆರಿಸಿದಿ1
ಆಗಮವಂದಿತ ನಾಗಭೂಷಣ ತಾತ
ಮೇಘವಾಹನ ಸುತನ ಬ್ಯಾಗ ರಕ್ಷಿಸಿದಿ
ಭಾಗವತರ ಪ್ರಿಯ ಜಾಗುಮಾಡದೆ ಎನ್ನ-
ದಾಗಲು ರಕ್ಷಿಸೆಂದು ಬಾಗಿ ಬೇಡುವೆನು 2
ಕಾವನು ನೀನಲ್ಲದೆ ಯಾವ ದೇವರನು ನಾ
ಆವಲ್ಯು ಕಾಣೆನು ಭಾವಜಜನಕನೆ
ಶ್ರೀವಾಸುದೇವನ ಗೋವೃಂದ ರಕ್ಷಕನೆ
ಭಾವಿ ಬ್ರಹ್ಮನ ಪತಿ ಶ್ರೀವತ್ಸಾಂಕಿತನೆ 3


ಎಂದಿಗೆ ನೀ ಯೆನ್ನ ಮುಂದಕೆ endige nee yenna


ಎಂದಿಗೆ ನೀ ಯೆನ್ನ ಮುಂದಕೆ ಬರುವೆಯೊ
ಸುಂದರ ಮೂರುತಿಯೆ ನಂದದಿ ಭಕುತರ
ವೃಂದಗಳೆಲ್ಲವ ಸಂದೇಹವಿಲ್ಲದೆ
ಮುಂದಕೆ ಕರದೊಯ್ವೆ ಪ
ಪಂಕಜಾಕ್ಷನೆ ನೀನು ಕಿಂಕರ ಜನರಾ-
ತಂಕಗಳೆಲ್ಲವ ಶಂಕಿಸದೆ
ವೆಂಕಟನಾಮಕ ಸಂಕಟಪರಿºರವಿವ-
ಳಾಂಕರನÀರವ ನಿಶ್ಶಂಕೆಯಿಂದಲಿಯಿತ್ತು 1
ಆರುವೈರಿಗಳೆನ್ನ ಗಾರುಮಾಡುವರಯ್ಯಾ
ಆರು ಕಾವರು ಇಲ್ಲಾ ಮಾರಜನಕನೆ
ಪಾರುಗಾಣಿಸದೆ ನೀ ದೂರಗೈಸಲು ಯನ್ನ-
ನಾರು ರಕ್ಷಿಪರೊ ದೋಷವಿದೂರನೆ ಪೇಳೋ 2
ಯರಬೆರಡೆನಾಗಿತ್ತು ಪೊರಿಯೋ ದೇವರ ದೇವ
ಕರುಣಾಬ್ಧಿ ನೀನೆಂದು ವರವೋದು ಶ್ರುತಿಯು
ಶರಣಾಗತನನ್ನು ಪೊರೆಯದೆ ಬಿಡುವಂದು
ಸರಿಯೇನೋ ಕರುಣಾಳು ಸಿರಿವತ್ಸಾಂಕಿತನೆ 3