Labels

Wednesday, 1 January 2020

ಉಡಪಿಯ ಕೃಷ್ಣ ಯನ್ನ ನುಡಿ ಲಾಲಿಸೋ udupiya krishna yenna nu dil laaliso


ಉಡಪಿಯ ಕೃಷ್ಣ ಯನ್ನ ನುಡಿ ಲಾಲಿಸೋ ಪ
ಸಡಗರದಲಿ ನೀನು ಮಡದಿವೃಂದ ಬಿಟ್ಟು
ಕಡಲಪಯಣದಿಂದಲಿ ವಂದು ಬಿಡದೆ ಭಕ್ತರಿಗೆಲ್ಲ
ವಡೆಯನಾಗಿ ನೀನು ಷಡುರಸ ಅನ್ನವ ಕೊಡುತನಿಂತಿಹೆ 1
ಪ್ರಾಣಪತಿಯು ಅತಿ ಜಾಣನೆಂದೆನಿಶಿÉ ನೀ
ಕಾಣಿಸುವಿ ನರಪ್ರಾಣಿಗೆ
ಮಾಣವಕನೆ ನೀ ಜಾಣನೆಂದೆನುತಲಿ
ಧ್ಯಾನಮಾಡಿ ಮೋದಿಸುವರು 2
ಧರೆಯೊಳು ರಜತಪೀಠ ಪುರದೊಳೂ ನೆಲೆಸಿಪ್ಪ
ಸುರವೃಂದನುತ ಬೇಗ ಸಲಹೆನ್ನ
ವರಮಧ್ವ ಮುನಿನುತ ಸರಸಿಜಭವ ವಂದ್ಯ
ಶ್ರೀವತ್ಸಾಂಕಿತ ವೆಂಕಟಪತಿಯೇ 3


ಇಲ್ಲಿಲ್ಲ ಸ್ವಾಮಿ ಅಲ್ಲಿಲ್ಲ ಎಲ್ಲವೂ illilla swamy allilla



ಇಲ್ಲಿಲ್ಲ ಸ್ವಾಮಿ ಅಲ್ಲಿಲ್ಲ ಎಲ್ಲವೂ ಸುಳ್ಳೆಂಬ
ಖುಲ್ಲ ಜನರುಗಳಿಗಿಲ್ಲಿಲ್ಲ ಪ
ಸತಿಸುತರುಗಳೆಲ್ಲ ಅತಿಹಿತರೆನ್ನುತ
ರತಿಪತಿಪಿತನ ಮರೆತು ಇಪ್ಪ ಜನರಿಗೆ 1
ಮಿಗಿಲಾದ ಮಹಿಮೆಯ ಜಗದೊಳು ತೋರುವ
ಅಗಣಿತ ಮಹಿಮಗೆ ಸೊಗಸದ ಜನರಿಗೆ 2
ಶರಧಿಶಯನನಾದ ಶ್ರೀವತ್ಸಾಂಕಿತನನ್ನು
ಮರೆತು ಮರಳುಗೊಂಡು ಕರಗಿ ಕುಂದುವ ಜನರಿಗಿಲ್ಲಿಲ್ಲ 3


ಅಂಬುಜಾಕ್ಷನೆ ಪಾಲಿಸೊ ambujakshane paaliso


ಅಂಬುಜಾಕ್ಷನೆ ಪಾಲಿಸೊ ಅಂಬುಜಾಕ್ಷನೆ ಕೇಳು
ಕಂಬುಕಂಧರ ನಿನ್ನ ನಂಬಿದ ಜನರನು ಇಂಬಾಗಿರಕ್ಷಿಸುವ ಪ
ಹರಿಯೆ ನೀ ಭಕುತರ ಸುರತರುವೆಂದು
ಅರಿದು ನಿನ್ನಡಿಗೆ ಬಂದು ಕರುಣಾಸಿಂಧು
ವರವೇನು ಎನ್ನ ಪರಿಚರ್ಯವೆಲ್ಲವನು
ಜರಿದು ಎನ್ನನು ಪೊರಿಯೆಂದು ಭಕ್ತರ ಬಂಧು
ಕರಿವರದನೀತರಿವಿದುರುಳನ ಪೊರೆವಿ ಸುಜನರ
ಅರವಿದೂರನೆ ಸ್ಮರಣೆಮಾತ್ರದಿ ತರಣಿಸುತನ
ಪುರದಭಯವನು ಪರಿಹರಿಸುವಿ 1
ಭವರೋಗವೈದ್ಯ ನೀ ಅವಧಿಯೂ ಇಲ್ಲದೆ
ಸ್ವವಶವ್ಯಾಪಿಯಾಗಿ ದಿವಿಜಯ ಪೊರೆವಿ
ಭಕುತರ ಕಾಯ್ಯಿ ಅವನೀಲಿ ಜನಿಸಿದ
ಪವನ ವೈರಿಯ ಕವಿಶಿ ಮೋಹದಿ ಕೆಡಿಶಿದಿ
ನರನನ್ನು ಪೊರದಿ ಅವನಿಪಿತ ನಿನ್ನ
ಯುವತಿ ವೇಷವ ಕವಿಗಳೆಲ್ಲರು ಸ್ತವನ ಮಾಳ್ಪರು
ಪವನ ಪ್ರಿಯನೆ ಭುವನ ತಾತನೆ
ಶಿವಗೆ ವರವಿತ್ತೆ ಪವನನಯ್ಯನೆ 2
ತರಳ ಪ್ರಹ್ಲಾದನ ಪೊರೆದು ಪಾಂಚಾಲಿಗೆ
ವರವಿತ್ತೆ ಕರಿಪುರಾಡರಸರ ಪ್ರಭುವೆ
ಸುರತರು ವೇಷಶರಣಾಗತರನು ಪೊರೆವನೆಂಬ ನಿಜ
ಬಿರುದನು ಮೆರಿಸುತ ಶಿರಿಯಿಂದೊಪ್ಪುತ
ವರ ಭಕ್ತಾಗ್ರೇಸರ ನರಪಾಂಬರೀಷನ ಪೊರೆವಂಥ
ಸುರಪತಿ ಶಿರಿವತ್ಸಾಂಕಿತನೆ 3


ವೃತವೆ ಉತ್ತಮ ವೃತವೆಂದು vrutave uttama vrutavendu


ವೃತವೆ ಉತ್ತಮ ವೃತವೆಂದು ಪೇಳಿಹರು
ಅತುಳ e್ಞÁನನಿಧಿ ವಿಜಯಾಖ್ಯ ಗುರುಗಳು |
ಸತತ ಅಧ್ಯಾತುಮ ಅನಂತ ವೃತವೆಂದು |
ಕ್ಷಿತಿಯೊಳು ಈ ವೃತಕೆÀ ಸರಿಗಾಣೆನೊ |
ಪತಿತ ಮಾನವರ ಉದ್ಧಾರಗೋಸುಗವಾಗಿ
ದ್ವಿತಿಯ ಉತ್ತಮ ವೃತವು ಹನುಮದ್ಪ್ರತವೂ |
ಯತನ e್ಞÁನೇಚ್ಛಾ ಶಕ್ತ್ಯಾದಿಗಳಿಗೆ ನಿರುತ |
ಜತೆಯಾಗಿ ಕಾರ್ಯ ಮಾಳ್ಪ e್ಞÁನಾಖ್ಯವೃತವೊ |
ಅತಿಶಯವಾದ e್ಞÁನ ಭಕ್ತಿ ವಿರಕ್ತಿವೀವುದು |
ಮತಿವಂತರು ಮನಕೆ ತಂದು ತಿಳಿದು |
ಕ್ಷಿತಿಪತಿ ಧರ್ಮರಾಜನೆಸಗಿದ ಮಹಾ ವೃತವೊ |
ಪತಿಭಕುತಿಯುಕುತಳಾದ ದ್ರೌಪದಿಯು |
ಪತಿ ಮೂರ್ಲೋಕದ ಶ್ರೀ ಕೃಷ್ಣನುಪದೇಶದಂತ್ಯೆ |
ಮಿತ ಜ್ಯಾನದಿಂದ ಚರಿತ ವ್ರತವೊ |
ಹಿತವಂತ ಹನುಮಂತ ಪಿತ ರಾಮನಿಗೆ ಪೇಳೆ ಆ |
ಚ್ಯುತನಾದ ರಾಮನುಮತಿವಾನ್ ಹನು |
ಮಂತನ ಭಕುತಿಗೊಲಿದು ಮಾಡ್ಡ ವೃತವೊ |
ಸತತ ಸೂತರು ಶೌನಕಾದ್ಯರಿಗಿದರ ಮಹಿಮೆ |
ಮಿತಿ ಇಲ್ಲದೇ ಪೇಳಿ ಮಾಡಿಸಿದ ವೃತವೊ |
ವೃತತಿಜಾಸನ ಪ್ರಿಯ ಸುತ ಸುಂದರ ವಿಠಲನ ಭ |
ಕುತಿ e್ಞÁನವೀವ ಮಹಾ ಶ್ರೇಷ್ಠ ವೃತವೊ 1
ಮಟ್ಟತಾಳ
ಜಾನ್ಹವೀ ತೀರದಲಿ ಶೌನಕಾದ್ಯ ಮುನಿಗಳು |
ಧ್ಯಾನಿ ಸೂತರ ಕುರಿತು ಸಾನುರಾಗದಿ ನಮಿಸಿ |
ಮೇಣು ಭಕುತಿಯಿಂದ ಙÁ್ಞನವಂತರೆ ನಿಮ್ಮಿಂ |
ದಾನೇಕ ವೃತಮಹಿಮೆಯಾನು ಕೇಳಿ ನಿತ್ಯ |
ಧೇನಿಸುವೆವು ಹರಿಯಾ ಪುನೀತರ ಮಾಡುವಾ |
ಕಾಣೋವನ್ಯ ವೃತವು ಆವುದುಪೇಳೆನಲು |
ಪ್ರಾಣದ ಪಾವನಿಯ ಪರತರ ಪ್ರಿಯ ವ್ರತವು |
ಸಾನುರಾಗದಿ ನಿತ್ಯ ಶೂದ್ರಾದಿ ನಾಲ್ಕು |
ಜಾಣ ವರ್ಣರಿಂದ ಮಾಡ್ವದಕ್ಕೆ ಯೋಗ್ಯವೊ |
ಏನು ಬೇಡಿದರೆ ತಡಿಯದೆ ಕೊಡುವುದೊ |
e್ಞÁನಿ ಜನಗಳಿಗೆಲ್ಲ ಮಂಗಳತಮ ವೃತವು |
ಏನು ಪೇಳಲಿ ಮತ್ತೆ ಆರೋಗ್ಯ ಐಶ್ವರ್ಯ
ಪುತ್ರಾದಿಗಳೀವುದು
ಶ್ರೇಣಿ ದಿನ ಪ್ರತಿ ದಿನದಲ್ಲಿ ವರವಿದ್ಯ ಪ್ರದವೊ
ಹಾನಿ ಲಾಭಗಳಲ್ಲಿ ಹನುಮಂತನ ನೆನಸೆ |
ಮಾನನಿಧಿ ಸುತ ಸುಂದರ ವಿಠಲನ |
ಧ್ಯಾನ ಧಾರಣವೀವ ಉತ್ತುಮಾಮಹವೃತವೊ 1
ರೂಪಕ ತಾಳ
ಒಂದಾನೊಂದು ಸಮಯದಲ್ಲಿ ಶ್ರೀ ವ್ಯಾಸ ಶಿಷ್ಯ |
ವೃಂದದಿಂದೊಡಗೂಡಿ ಯುಧಿಷ್ಠರನ ನೋಡಲು |
ಅಂದುಳ್ಳ ದ್ವೈತ ವನಕೆ ನಡೆತಂದರು ಏನಂಬೆ |
ಚಂದಾದ ನಿರ್ವೈರ ಮೃಗವೃಂದಗಳಿಂ ಕೂಡಿರುವ |
ಕುಂದ ಮಂದಾರಾದಿ ಪುಷ್ಪಫಲ ವೃಕ್ಷಗಳಿಂ ಶೋಭಿಪ |
ಕುಂದು ದೂರೋಡಿಸಿದ e್ಞÁನಿಗಳ ಸಮೂಹವು |
ಛಂದದಲಿ ಕಾವ್ಯಷಡಂಘ್ರಿ ನಿರತರಾಗಿ |
ಮುಂದೆ ಅಧ್ಯಯನ ಶ್ರುತಸಂಪನ್ನರಾದವರು |
ಒಂದೊಂದು ವೇದ ಋಗು ಯಜು:ಸಾಮಾಥರ್ವಣ
ಒಂದೋಂದು ಶಾಖಾಶಾಸ್ತ್ರದಿ ಪ್ರವಚನಾಸಕ್ತರು |
ಮಿಂದು ಹರಿಪದಜಲದಿ ಚತುರ ವೇದ ಘೋಷದಿ |
ಸಂದೇಹವಿಲ್ಲದಲೇ ಭಗವದ್ಗೀತಾ ಲೀಲಾ |
ಎಂದೆಂಬುವ ಹರಿಕಥಾಮೃತ ಪಾನ ಮಾಡುವ |
ಸಂದೋಹ ಮುನಿಗಳಿಗೆ ನಿತ್ಯನ್ನದಾನವ ಮಾಡಿ |
ಬಂಧುಗಳಿಂ ಸಹಿತ ಇರುವ ಯುಧಿಷ್ಟರನನ್ನು |
ಸುಂದರ ವಿಠಲಾತ್ಮಕ ವ್ಯಾಸದೇವನು |
ಅಂದು ದ್ವೈತವನದಲ್ಲಿ ಕೃಪಾ ದೃಷ್ಟಿಯಿಂದ ನೋಡಿದನು 3
ಝಂಪಿ ತಾಳ
ಕೃಷ್ಣದ್ವೈಪಾಯನಾ ಮುನಿಗಳಾಗಮ ಕೇಳಿ |
ಕೃಷ್ಣೆ ಸಹಿತಾ ಅನುಜರೊಡನೆ ಕೂಡಿ |
ಜೇಷ್ಠನಾದ ಯುಧಿಷ್ಠರನು ತಾ ದೂರ ನಡೆತಂದುವಾ |
ಸಿಷ್ಟ ಕೃಷ್ಣಗೆ ಸಾಷ್ಟಾಂಗ ಪ್ರಣಾಮಗಳ ಮಾಡಿ ನಿ |
ರ್ದಿಷ್ಟವಾದೆಕಾಂತ ಸ್ಥಳಕೆ ಕರೆತಂದು |
ಶ್ರೇಷ್ಠವಾದಾಸನದ ಮೇಲೆ ಕುಳ್ಳಿರಿಸಿ |
ಜೇಷ್ಟಾದಿಕೃಷ್ಣೇಯೊಡನೆ ಉತ್ಕøಷ್ಠ ಪೂಜೆಯ ಮಾಡೆ ಪರ
ಮೇಷ್ಠಿ ಜನಕನು ತಾನು ತುಷ್ಟ ನಾಹೆ |
ಶಿಷ್ಟಾಚಾರದಂತೆ ಕುಶಲ ಪ್ರಶ್ನೆಯು ಮಾಡ್ದ ನಿ |
ರ್ದುಷ್ಟ ಭೀಮಾರ್ಜುನರೆ ಅಶ್ವಿನಿಯರೇ ಮನ |
ಮುಟ್ಟಿ ಹರಿಪಾದ ಭಜನೆಯ ಮಾಡಿ ಸುಖಿಗಳಾಗಿಹ್ಯರೇ?
ಧಿಟ್ಟತನದಲೆ ತಪವನೆಸಗಿ ಕಿರಿಟಯು |
ನಿಷ್ಠಿಯಲಿ ಮಹರುದ್ರನೊಲಿಸಿ ಪಾಶುಪತವೆಂಬು |
ತ್ಕøಷ್ಟಾಸ್ತ್ರ ಸಂಪಾದನೆಯ ಮಾಡಿದದು ಕೇಳಿ |
ಹೃಷ್ಟನಾದೆನೊ ನಾನು ನಿಮ್ಮಿಂದಲಿ ಕೂಡಿ |
ಕಷ್ಟಬಡುತಿರುವ ನಿನ ದುಃಖ ಶಾಂತ್ಯರ್ಥ |
ಇಷ್ಟವೀವುದಕಾಗಿ ಬಂದಿಹನು ರಾಜಾಯು |
ದ್ಯಿಷ್ಟರನೆ ಕೇಳುತ್ತಮ ವೃತವು ನಿನಗೋಸುಗ |
ಸೃಷ್ಟಿಗೊಡೆಯ ಸುಂದರವಿಠ್ಠಲ ಪೇಳ್ವೆನೆನಲು
ನಿಷ್ಠಿಯಿಂದಲಿ ಧರ್ಮತನಯ ನುಡಿದನು 4
ತ್ರಿವಿಡಿ ತಾಳ
ನಮೊ ನಮೊ ತಾತ ಮಹಾ ಖ್ಯಾತವಂತರೆ ನಿಮಗೆ |
ನಮೊ ನಮೊ ನಮೊ ಎಂದು ಬಿನ್ನೈಸುವೆ |
ಶ್ರಮ ಪರಿಹರವೃತವಾವುದದÀರ ಮಹಿಮೆ |
ಸುಮನಸರೊಡೆಯನೆ ಪೇಳಯ್ಯಾ ಜೀಯ್ಯಾ |
ಕುಮತಿ ಪರಿಹರಿಸುವ ದೇವತೆ ಆರು ಉ |
ತ್ತಮ ನಿಯಮ ಆವುದು ಪೂಜಾ ಕ್ರಮವು |
ಶಮೆ ದಮೆವೀವ ನಿಯಮ ತಿಥಿ ಆವುದು |
ರಮೆ ರಮಣನೆÉ ಆವ ಮಾಸದಲಿ ಮಾಡೋದು |
ಶಮಲ ವಿವರ್ಜಿತ ವ್ಯಾಸದೇವನೆ ನಿಮ್ಮಾ |
ಗಮನವು ಎಮ್ಮಯ ಕಷ್ಟ ದೊರೋಡಿಸಲು |
ಸಮೀಚೀನ ಮತಿಯಿತ್ತು ಭಕ್ತರ ಪಾಲಿಪುದೆನುತ |
ಸಮಚಿತ್ತ ಉಳ್ಳ ಮುನಿಗಳ ಕೂಡ ನಮಿಸಲು |
ಭ್ರಮಣ ಮತಿಯ ಕಳೆವ ಹನುಮಾನ್ ಹ
ನುಮನ್ನಾಮ ಪುನಃ ಪುನಃ ಸ್ಮರಿಸಿ ಶ್ರೀವ್ಯಾಸರು |
ಆಮಮ ಪೇಳಲೇನೊ ಹನುಮದ್ವ್ರತವೋ |
ಧೀಮಂತ ಹನುಮಂತನ ನಾಮೋಚ್ಚಾರಣೆಯಿಂದ |
ಸಮಸ್ತ ಕಾರ್ಯ ಸಿದ್ದಿಪದು ಸಂಶಯ ಬ್ಯಾಡಿ |
ಆ ಮಹಾ ದುಷ್ಟ ಗ್ರಹೋಚ್ಛಾಟನ ಜ್ವರಾದಿ |
ತಾಮಸ ರೋಗ ನಿವರಣವಾಗುವದು |
ಪ್ರೇಮದಿಂದಲಿ ಕೇಳು ಬಹು ವಾಕ್ಯಗಳಿಂದೇನು ?
ಸೀಮೆಗಾಣದ ಅಭೀಷ್ಟಪ್ರದಾಯಕವೊ
ನೀ ಮರೆಯದಿರು ಹಿಂದೆ ದ್ವಾರಕಿಯಲ್ಲಿ
ಶ್ರೀ ಮದ್ವಿಷ್ಣುವೆ ಕೃಷ್ಣ ಪಾಂಚಾಲಿಯನಿ
ಸ್ಸೀಮ ಭಕುತಿಗೆ ವೊಲಿದು ಈ ಮಹಾ ಹ
ನುಮದ್ವ್ರತವನ್ನು ಉಪದೇಶಿಸಿ |
ನೇಮದಿಂದಲೀ ವ್ರತವು ಮಾಡಿರೆನಲು
ಕಾಮಿತಫಲವೀವಾ ವ್ರತದ ಮಹಿಮೆ ಆ |
ಸ್ವಾಮಿ ಅನುಗ್ರಹದಿ ಸಂಪದೈಶ್ವರ್ಯದಿ
ಆ ಮಹಾ ಸ್ತೋಮಗಳು ಪ್ರಾಪ್ತವಾಗಲು ನಿಮಗೆ |
ಈ ಮಹಾ ವೃತ ಮಹಿಮೆ ತಿಳಿಯದ ಪಾರ್ಥನು
ಪ್ರೇಮದಿಂ ದ್ರೌಪದಿ ಧರಿಸಿದ ದೋರವ ನೋಡಿ
ಹೇ ಮಹಿಷಿಯೆ ಇದೆನೆನ್ನಲಾಗಿ |
ತಾಮರಸನಯನೆ ಶ್ರೀ ಹನುಮದ್ದೋರವನ್ನೆ |
ಆ ಮಹಾ ಐಶ್ವರ್ಯ ಗರ್ವಿಕೆ ಕ್ರೋಧಾದಿ ನಿ
ಸ್ಸೀಮ ಪರಾಕ್ರಮಿ ನುಡಿದ ಅರ್ಜುನನು
ಕಾಮಿನಿಯೆ ಕೇಳು ಆ ಹನುಮನೆಂಬೊ ಕಪಿ
ನಾ ಮುದದಿ ಧ್ವಜದಲ್ಲಿ ಧರಿಸಿರುವೆನು ಈ |
ಮರ್ಮವನು ತಿಳಿಯದೆ ಆ ವನಚರ ಶಾಖಾಮೃಗ |
ಕಾಮಿತ ಫಲ ಕೊಡಬಲ್ಲದೆ ಕೇಳಿನ್ನು
ಪಾಮರ ವ್ರತದಿಂದ ವಂಚಿಸಿದೆಲ್ಲದೇ ನೀನು
ಕಾಮಿ ಜನರ ತೆರದಿಂದಲಿ ಅರ್ಜುನನು
ಭಾಮೆ ದ್ರೌಪದಿ ಧರಿಸಿದ ತ್ರಯೋದಶ ಗ್ರಂಥಿಯುಕ್ತ
ಆ ಮುದದ ದೋರವನು ಹರಿದು ಬಿಸಾಟಲು
ಹೇಮಾದಿ ಸಕಲ ಸಂಪದೈಶ್ವರ್ಯ ರಾಜ್ಯವು
ಭೂಮಿ ಸಹಿತ ಪ್ರಾಪ್ತವಾದುದೆಲ್ಲ ಪೋಗೆ |
ಭ್ರಾಮಕ ಮತಿಯಿಂದ ನೀವುಗಳೀಪರಿ
ಶ್ರಿಮದಾಂಧದಿಂದ ಪ್ರಾಪ್ತವ್ಯ ದುಃಖ ಫಲವು |
ಸ್ವಾಮಿ ಆಜ್ಞದಿ ಹದಿಮೂರೊರುಷ ಪರಿಯಂತ |
ನೇಮಿಸಿದಂತೆ ಅನುಭವಿಸಬೇಕಯ್ಯಾ ಶ್ರೀ
ರಾಮ ಮನೊರಮನು ಇನಿತು ನುಡಿಯೆ |
ಸ್ವಾಮಿ ಆಜ್ಞವ ತಿಳಿದ ದ್ರೌಪದಿ ದೇವಿಯು |
ಹೇ ಮಹತ್ಮರೆ ಶ್ರೀವ್ಯಾಸರ ನುಡಿ ನಿಜವೋ
ಭೀಮಭವಾಬ್ಧಿ ದಾಂಟಿಸುವ ಸುಂದರ ವಿಠಲನ
ನೇಮಗಳೆಲ್ಲಾ ತಿಳಿಯಲೋಶವೆ ಎಂದಿಗು 5
ಧ್ರುವ ತಾಳ
ಕೇಳಯ್ಯಾ ಧರ್ಮರಾಜ ಆಲಸ ಮಾಡದೆ |
ಪೇಳುವೆ ನಿನಗೊಂದು ಪುರಾತನ ಕಥೆಯು |
ಆಲಿಸಿ ಮನಕೆ ತಂದು ಬಾಳು ಚನ್ನಾಗಿ ನೀನು |
ಶೀಲೆ ಸೀತೆಯ ನೋಡುವ ಇಚ್ಛಾಉಳ್ಳ ಮಾ
ಲೋಲ ರಾಮನು ನಿತ್ಯ ಲಕ್ಷ್ಮಣನೊಡಗೂಡಿ |
ಮೇಲಾದ ಋಷ್ಯಮೂಕ ಗಿರಿಯ ಮಧ್ಯದಲ್ಲಿ
ಶೀಲ ಭಕುತಿಯುಳ್ಳ ಹನುಮಂತನ ದರ್ಶನಾಗೆ
ಆಳುವ ಕಪಿ ರಾಜ್ಯ ಸುಗ್ರೀವನ ಸಖ್ಯವನು ಬ
ಹಾಳ ಮತಿಯುಳ್ಳ ವಾಯುಜ ಮಾಡಿಸೆ |
ನಾಲಕು ಮಾಸ ಮಳೆಗಾಲವು ವಾಸ ಮಾಡ್ಡ |
ಕಾಲದಲಿ ಹನುಮನು ರಾಮದೇವಗೆ ನಮಿಸಿ |
ನೀಲ ಮೇಘ ಶ್ಯಾಮ ಶ್ರೀ ರಾಮ ನೀನಿನ್ನ |
ಬಾಲನ ಬಿನ್ನಪ ಮನಕೆ ತರಲು |
ಪೇಳುವೆ ನಿಮ್ಮ ಸನ್ನಿಧಾನದಲೆನ್ನ ನಾಮ ಮಹಿಮೆ
ಮೇಲುಸಿಲೆಯನದ್ಧರಿಸಿದ ಶ್ರೀರಾಮ ನೀನಙ್ಞನೆ |
ಕಾಲ ಜನನದಲಿ ಇಂದ್ರನಿಂದಲಿ ಎನ್ನ
ಮೇಲಾದ ವಜ್ರಾಯುಧದಿಂದ ಹನುಘಾತಿಸಲು
ಭೂಲೋಕದಲ್ಲಿ ಅಂದಿನಾರಭ್ಯ ಹನುಮನೆಂದು ಖ್ಯಾತನಾಗಿ |
ಕೇಳಯ್ಯಾ ಅಂಜನಾದ್ರಿಯಲ್ಲಿ ಸೂರ್ಯೋದಯ |
ಕಾಲಕೆ ಪ್ರಕಟನಾದ ಬಾಲ ರವಿಯ ನೋಡಿ ಹಣ್ಣೆಂದು |
ಮೇಲಾಗಿ ಭಕ್ಷಿಪುದಕೆ ಉಡ್ಡಾಣ ಮಾಡಲಾಗಿ |
ಈ ಲೀಲೆಯ ತಿಳಿದು ಲೋಕ ಶಿಕ್ಷಣ ಗೋಸುಗ |
ಕಾಲವಜ್ರಾಯುಧದಿಂದ ಹೊಡೆಯಲು ಮೂರ್ಛಿತ |
ಬಾಲನಂತೆ ಬಿದ್ದವನೆನ್ನ ನೋಡಿ ಸ್ವಾಹಾ |
ಲೋಲನ ಸಖನಾದ ವಾಯುದೇವನು ಎನ್ನ |
ಮೇಲಿನ ಪ್ರೀತಿಯಿಂದ ಸರ್ವಜೀವರ ಶ್ವಾಸ |
ಕಾಲನಾಮಕ ಭಗವಾನಿಚ್ಛೆಯಂತ ತೃಟಿ |
ಕಾಲಬಿಡದೆ ಮಾಡ್ವ ಶ್ವಾಸ ನಿರೋಧಿಸೆ ಶಚಿ |
ಲೋಲನಿಂದನ್ನ ಪುತ್ರನ ಕೆಡಹಿರಲವನನ್ನು ಈ |
ಕಾಲಲವದಲ್ಲಿ ಕೆಡಹೆನೆನಲು ಆ |
ಕಾಲದಲಿ ಬ್ರಹ್ಮಾದಿ ದೇವತೆಗಳು ಸಾಕ್ಷಾತ್ಕಾರರಾಗಿ |
ಓಲೈಸಿ ಪೆಳ್ದ ಮಾತು ಎನಗೋಸುಗ ಆಂಜನೇಯಾ |
ಬಾಲನೆ ಚಿರಜೀವಿಯಾಗು ನೀನೆ ಪರಾಕ್ರಮಿ |
ಮೇಲೆನಿಪ ಶ್ರೀರಾಮನ ಕಾರ್ಯಸಾಧಕನಾಗೆನುತ |
ಬಾಲ ಹನುಮನ ಪೂಜೆ ಮಾಡ್ಡರು ದೇವತೆಗಳು |
ಮೇಲಾದ ಮಾರ್ಗಶಿರ ಶುದ್ಧ ತ್ರಯೋದಶಿ |
ಕಾಲ ಅಭಿಜಿನ್ ಮೂಹೂರ್ತದಲ್ಲಿ ಆರು ಪೂಜಿಪರೊ |
ಆಲಸವಿಲ್ಲದೆ ಪುರುಷಾರ್ಥ ಹೊಂದುವರೆಂದು |
ತಾಳ ಮ್ಯಾಳರೊಡನೆ ವರವ ನೀಡಿ ಪೋದರು |
ಆಲಯಾ ಸ್ವರ್ಗ ಸತ್ಯಾದಿ ಲೋಕಕೆ ಅಂದು ಹೀಗೆ |
ಪೇಳೆ ಸುಂದರ ವಿಠಲ ರಘುರಾಮನು ನಸುನಗೆ |
ಯಾಲಿ ಒಲಿದು ಹನುಮಗೆ ಹಸನ್ಮುಖನಾಗಿ ಇರಲು 6
ಮಟ್ಟತಾಳ
ಭಕುತ ವತ್ಸಲ ನೀನು ಭಕುತರಿಚ್ಛವ ನೀನು |
ಭಕುತ ಭಾಂಧವ ನೀನು ಭಕುತರೊಡಿಯ ನೀನು |
ಭಕುತ ಪಾಲಕನೆಂಬ ಬಿರುದುಳ್ಳವ ನೀನು |
ಭಕುತರಿಂದಲಿ ನೀನು ನಿನ್ನಿಂದಲೆ ಭಕುತರು |
ಅಕಳಂಕ ಐಶ್ವರ್ಯ ಸತು ಚಿತು ಆನಂದಾತ್ಮಾ |
ಮುಕುತಿ ಪ್ರದಾತನೆ ಸರ್ವ ಸ್ವಾಮಿ ನೀನು |
ಸಕಲ ಲೋಕಗಳೊಡೆಯ ನಿನ್ನಿಂದಲೆ ಸರ್ವ
ವ್ಯಕುತವಾಗ್ವದು ಸತ್ಯ ಸರ್ವಙ್ಞನು ನೀನು |
ಭಕುತರ ಮನದಿಂಗಿತ ತಿಳಿಯದವನೆ ನೀನು |
ಅಖಿಳ ಬ್ರಹ್ಮಾಂಡÀರಸನೆ ನಮೊ ನಮೊ ನಮೊ ನಮೊ |
ಭಕುತರಿಂದಲೇ ನಿನ್ನ ಖ್ಯಾತಿ ಮೂರ್ಲೋಕಕ್ಕೆ
ಭಕುತರೇ ನಿನ್ನಯಾ ಮಹಿಮೆಯ ಹೊಗಳುವರು |
ಭಕುತರು ನಿನ್ನಿಂದಲೆ ಕೀರ್ತಿವಂತರÀಹರು |
ಅಕುಟಿಲ ಪ್ರಭೋ ನೀನು ನಾ ನಿನ ನಿಜ ಭಕ್ತ |
ಸಕಲ ಕಾಲದಲ್ಲಿ ನಿನ್ನನಾ ಮರೆಯದಲೇ |
ವಿಖನಾಸಂಡದಲ್ಲಿ ಸೇವೆ ಮಾಳ್ಪದು ನಿಜವಾಗೆ |
ಶಕುತನೆ ಎನ ಕೀರ್ತಿ ನಿನ್ನಿಂದಾಗಲಿ ವಿಭೋ |
ಉಕುತಿ ಲಾಲಿಸು ಪ್ರಭೋ ತವಚಿತ್ತವ ಧಾರೆ |
ಭಕುತ ಹನುಮಂತ ಇನಿತು ವಿಙÁ್ಞಪಿಸಿ ನಿಲಲು |
ಪ್ರಕಟಿತ ಅಶರೀರ ವಾಕ್ಯವು ಬಿಡದಲೆ |
ಸಕಲ ನುಡಿ ಹನುಮಾ ಸತ್ಯನಾಡಿದನೆನಲು |
ಸುಕರ ಏಕಮೇವ ದ್ವಿತಿಯ ಸುಂದರವಿಠಲ ತುಷ್ಟನಾಹೆ 7
ಝಂಪಿತಾಳ
ಮಾಸಮಾರ್ಗಶೀರ್ಷ ಶುದ್ಧ ತ್ರೊಯೋದಶಿ |
ಆ ಸುಮುಹೂರ್ತ ಜಯಾ ಅಭಿಜಿನ್ ಕಾಲಕೆ |
ಶ್ರೀಶರಾಮನು ಹನುಮದ್ವ್ರತವ ಮಾಡ್ಡ ತ್ರಯೋ |
ದಶ ಗ್ರಂಥಿüಯುತ ಹರಿದ್ರಾದೋರಗಳಲಿ |
ಭಾಸುರಾಮತಿವೀವ ಹನುಮನಾವ್ಹಾನಿಸಿ |
ಪೇಶಲಾಪೀತಗಂಧ ವಸ್ತ್ರ ಪುಷ್ಟಿಗಳಿಂದಲೀ |
ಶ್ರೀಸೀತೆವಕ್ಷಸ್ಥಳದಿಪ್ಪ ನಿತ್ಯಾವಿಯೋಗಿನಿ |
ಆ ಸುಗ್ರೀವ ಲಕ್ಷ್ಮಣಾದಿಗಳೊಡನೆ ನೆಸಗಿದನೇನೆಂಬೆ |
ಲೇಶಬಿಡದೇ “ಓಂ ನಮೋಭಗವತೇ ವಾಯುನಂದನಾಯ” |
ಈ ಸುಮಂತ್ರವ ಜಪಿಸಿ ತಾ ಸಹಸದಿ ಮಾಡ್ಡನೋ |
ದೇಶಪರಿಮಿತ ಪ್ರಸ್ಥತ್ರಯೋಶಗೋಧೂಮವನು |
ಆ ಸುದಕ್ಷಣೆ ತಾಂಬೂಲ ಸಹ ದ್ವಿಜರಿಗಿತ್ತದಾನ |
ಮೀಸಲಾ ಮನದಿ ಈ ಸತ್ಕಥೆಯನು ಕೇಳಿ |
ಭೇಶಮುಖಿ ಸೀತಿಯಳ ಕೊಡ್ದನೆಂಬದು ಖ್ಯಾತಿ |
ಆ ಸತ್ಯಲೋಕರಿಗೆ ಆದುದು ಅಚ್ಚರವೆ ಪೂರ್ಣಕಾಮನಿಗೆ |
ಕ್ಲೇಶನಾಶನವು ಸುಗ್ರೀವನಿಗೆ ವಿಶೇಷವಾದುದು ಸತ್ಯವೆನ್ನಿ |
ತೋಷದಲಿ ವಿಭೀಷಣ ಶ್ರೀರಾಮನಾಙÉ್ಞಯಿಂ ಮಾಡ್ಡು |
ದೇಶಲಂಕೆಯ ರಾಜ್ಯವನು ಪಡೆದನು |
ಹೇ ಸುಮತಿಯೇ ಕೇಳಂದಿನಾರಭ್ಯ ಭೂಲೋಕಕೆ |
ಲೇಸುವಿಶ್ರುತವಾದಿತೈ ಹನುಮದ್ವ್ರತವೂ |
ಆಸುಸಂವತ್ಸರ ತ್ರಯೋದಶ ಪರಿಯಂತ ಮಾಡ್ಡುದ
ಕೀಸು ಉದ್ಯಾಪನೆಯಯ್ಯಾ ಆದಿ ಮಧ್ಯಾಂತಕೆ |
“ಮಾಸಾನಾಂ ಮಾರ್ಗಶೀರ್ಷೋಹಂ” ಎಂದು ಗೀತೆÀಯಲಿ
ಆ ಸ್ವಾಮಿ ದಿವ್ಯನುಡಿಯುಂಟು ಕೇಳ್ ಧರ್ಮಜನೆ |
ಸ್ತ್ರೀಸಹಿತ ಅನುಜರೊಡನೇ ಈ ವ್ರತವನು |
ಮೇಶನಾಜ್ಞೆಯಿದೆಂದು ಮಾಡಲು ನಿನಗೆ ರಾಜ್ಯ |
ಕೋಶ ಭಾಂಡಾರಪ್ರಾಪ್ತಿಯಾಗುವದು |
ಲೇಶ ಸಂಶಯ ಬ್ಯಾಡೆನಲು ಶ್ರೀ ವ್ಯಾಸ |
ಆ ಸುಂದರ ವಿಠಲನ ಭಕುತರು ಮುದಭರಿತರಾಗೆ 8
ರೂಪತಾಳ
ರವಿಯು ವೃಶ್ಚಿಕ ರಾಶಿಗೆ ಬರಲಾಗಿ |
ಸವೆಯಾದ ಪದವೀವ ವ್ರತವಮಾಡುವದಕ್ಕೆ |
ಕವಳಾ ಅe್ಞÁನಾಖ್ಯ ರಾತ್ರಿಕಳೆದು |
ಸುವಿಮಲಾe್ಞÁನಾಖ್ಯ ಪ್ರಾತಃ ಕಾಲದಲೆದ್ದು |
ಕವಿವ್ಯಾಸರ ಮುಂದೆ ಮಾಡಿ ಧರ್ಮಜನು |
ಸುವಿವೇಕಬುದ್ಧಿಯಿಂ ಸ್ನಾನಾದಿಗಳ ಮಾಡಿ |
ಹವಿಷಾದಿ ದ್ರÀ್ರವ್ಯಗಳಲಿ ಹರಿಯಚಿಂತಿಸಿ ಮಾ |
ಧವÀನಾಜ್ಞೆಯಂತೆ ಉದ್ಯಾಪನವಂಗೈದು |
ಕವ್ಯವಾಹನನಲ್ಲಿ ಮೂಲಮಂತ್ರದಿಂದ |
ಲವಕಾಲ ಬಿಡದಲೆ ವೇದಸೂಕ್ತಗಳಿಂ ಹೋಮಿಸಿ |
ನವಭಕುತಿಯಲಿ ಹನುಮಂತನ ವ್ರತಾಚರಿಸಲು |
ಹವಣಿಸಿ ಸಂವತ್ಸರವು ಪೋಗಲು ಪಾಂಡವರು |
ಬವರದಲ್ಲಿ ಕೌರವರಗೆ


ಹರಿಯಲ್ಲಿ ಧನ್ಯರು ಪೊರೆಯರು hariyalli dhanyaru poreyaru




ಹರಿಯಲ್ಲಿ ಧನ್ಯರು ಪೊರೆಯರು ಸತ್ಯಸ್ಥಿರವೀ ಮಾತಿಗೆ ಸದ್ಭಕ್ತರು ಸಾಕ್ಷಿಯಿಹರು ಪ
ಪುಣ್ಯಾತ್ಮ ಪ್ರಿಯ ವೃತ ಸಾಕ್ಷಿ ಜಗನ್ಮಾನ್ಯ ನಾರದ ದೇವ ಋಷಿ ಶ್ರೇಷ್ಠ ಸಾಕ್ಷಿಧನ್ಯ ಧೃವರಾಯನು ಸಾಕ್ಷಿ ಹರಿಯಪೂರ್ಣ ವ್ಯಾಪ್ತಿಯ ತೋರ್ದ ಪ್ರಲ್ಹಾದ ಸಾಕ್ಷಿ 1
ದೊರೆ ಅಂಬರೀಷನು ಸಾಕ್ಷಿ ಹರಿಗುರುಭಕ್ತಿ ನಾಮಕೆ ದ್ರೌಪದಿ ಸಾಕ್ಷಿಸ್ಥಿರ ವಿಭೀಷಣ ರಾಜ ಸಾಕ್ಷಿ ತನ್ನಮರಣ ಕಾಲದಿ ನೆನೆದ ಅಜಮಿಳ ಸಾಕ್ಷಿ 2
ದೊರೆ ಧರ್ಮ ದೇವರು ಸಾಕ್ಷಿ ಜಗದ್ಗುರುವಾದ ಮಹ ರುದ್ರದೇವರು ಸಾಕ್ಷಿಗರಳ ಕಾಳಿಂಗನು ಸಾಕ್ಷಿ ಪ್ರಾಣಾತುರದಿಹರಿಯ ಕರೆದ ಗಜರಾಜ ಸಾಕ್ಷಿ 3
ಶಿಲೆಯಾದ ಅಹಲ್ಯೆಯ ಸಾಕ್ಷಿ ಗರ್ವವರ್ತಿಸಿದ ನಹುಷನೃಗರು ಸಾಕ್ಷಿಚೆಲುವೆ ಗಂಡಿಕಾ ವೇಶ್ಯ ಸಾಕ್ಷಿ ಭಕ್ತಿಗೊಲಿದುನಲಿದ e್ಞÁನಿ ವಿದುರನು ಸಾಕ್ಷಿ 4
ಮೊರೆ ಹೊಕ್ಕ ಸುಗ್ರೀವ ಸಾಕ್ಷಿ ಬಾಲ್ಯಪರಮ ಮಿತ್ರನಾದ ಕುಚೇಲ ಸಾಕ್ಷಿಶರಬಿಟ್ಟ ಭೃಗುವಾದ ಸಾಕ್ಷಿ ಶ್ರೇಷ್ಠಹರಿದಿನ ವೃತದ ರುಗ್ಮಾಂಗ ಸಾಕ್ಷಿ 5
ಪುಂಡಲೀಕ ಋಷಿಸಾಕ್ಷಿ ಆ ಮೃಕಂಡಮುನಿಜ ಮಾರ್ಕಾಂಡೇಯ ಸಾಕ್ಷಿಪಂಡಿತ ಸಾಂದೀಪ ಸಾಕ್ಷಿ ಕುರುಪಾಂಡವರ ಪಿತಾಮಹ ಭೀಷ್ಮನು ಸಾಕ್ಷಿ 6
ಪಿರಿದು ಕಷ್ಟದ ನಳ ಸಾಕ್ಷಿ ಕೃಷ್ಣಕರುಣಿಕೆ ಪಾತ್ರ ಪರೀಕ್ಷಿತ ಸಾಕ್ಷಿನಳಕೂಬರು ಸಾಕ್ಷಿ ಸತ್ಯದ್ಹರಿಶ್ಚಂದ್ರಾದಿ ಪುಣ್ಯ ಶ್ಲೋಕರು ಸಾಕ್ಷಿ 7
ನಿದ್ದೆಯ ಮುಚುಕುಂದ ಸಾಕ್ಷಿ ಆತ್ಮಬದ್ಧ ಭಕ್ತಿಯಲರ್ಪಿಸಿದ ಬಲಿ ಸಾಕ್ಷಿಶುದ್ಧ e್ಞÁನಿ ಶುಕ ಸಾಕ್ಷಿ ಹರಿಯಸದ್ಯದಣನಾದ ಬಲಭದ್ರ ಸಾಕ್ಷಿ 8
ಅರ್ಕಾದಿ ಋಷಿಗಳು ಸಾಕ್ಷಿ ವಿಶ್ವಾಮಿತ್ರ ದಕ್ಷ ಪ್ರಜೇಶ್ವರೆಲ್ಲ ಸಾಕ್ಷಿಮಿತ್ರೆ ಕುಬ್ಜಾ ತ್ರಿಜಟಿ ಸಾಕ್ಷಿ ಮಹಾಮೈತ್ರೇಯ ಪರಾಶರ ಮುನಿಶರು ಸಾಕ್ಷಿ 9
ಇಂದ್ರಾದಿ ದಿವಿಜರು ಸಾಕ್ಷಿ ಕೃಷ್ಣನ್ಹೊಂದಿ ಸೇವಿಸಿದುದ್ಧವಕ್ರೂರ ಸಾಕ್ಷಿಸುಂದರ ಗೋಪಿಯರು ಸಾಕ್ಷಿ ಪಾಪಸಂದೋಹದ್ಯುದೃತ ವಾಲ್ಮೀಕಿ ಸಾಕ್ಷಿ 10
ಸರ್ವ ಮುಕ್ತ ಜೀವರು ಸಾಕ್ಷಿಯಾ ದೇವರು ವಸುದೇವ ದೇವಕಿಯರು ಸಾಕ್ಷಿಹರಿದಾಸರೆಲ್ಲರು ಸಾಕ್ಷಿ ಫಲಸಿರಿವಿಠಲಗೆ ಕೊಟ್ಟ ಶಬರಿಯ ಸಾಕ್ಷಿ 11


ಶ್ರೀ ಹರಿಪ್ರಿಯ ಸಖನು shri haripriya sakhanu



ಶ್ರೀ ಹರಿಪ್ರಿಯ ಸಖನು ಕುಚೇಲನುವರವಿಪ್ರೋತ್ತಮನವನೂ ಪ
ಘೋರ ದಾರಿದ್ಯ್ರದ ಬಾಧೆಯೊಳಿರುತಲಿಚಾರು ಸಚ್ಚರಿತೆಯ ಆಗರವಾಗಿಹ ಅ.ಪ.
ಶೀಲ ಸದ್ಗುಣವತಿಯು ಸುಸೀಲೆಯುಸತಿಮಣಿ ಪತಿವ್ರತೆಯುಬಾಲಕ ಸಲಹಲು ಕಡು ಕಷ್ಟ ಬಡುತಲಿ ಶ್ರೀಲೋಲನ ಧ್ಯಾನದಿ ಕಾಲಕಳೆಯುತಲಿಹಳು 1
ಮನದಲಿ ಯೋಚಿಸುತ ಅನುನಯದೊಳುಪತಿಗೆ ತಾ ನುಡಿದಳೆಂದೂಅನುಭವಿಸಲಾರೆ ಘನ ದಾರಿದ್ರ್ಯವನುಸಂ ಮ್ಮಂಧಿಗಳು ಸ್ನೇಹಿತರಲ್ಲವೇ ನಿಮಗೆ 2
ಅಂದ ಮಾತನು ಕೇಳುತ ಕುಚೇಲ ತಾಹಿಂದೆ ಗುರುಕುಲ ವಾಸದಿನಂದ ಬಾಲನ ಕೂಡ ಹೊಂದಿದ ಸ್ನೇಹವತಂದು ಸ್ಮರಣೆಗೆ ಶ್ರೀ ಕೃಷ್ಣ ಸಖನು ಎಂದಾ 3
ಕಡುಹರುಷದಿ ಸತಿಯುಒಡನೆ ತಂದು ಪ್ರಥಕು ತಂಡುಲವ ನೀಡೀಕಡಲೊಡೆಯ ಪಾದ ದರುಶನ ಕೊಂಡು ನೀವಸಡಗರದಲಿ ಬನ್ನಿರೆಂದು ಕಳುಹಿದಳು 4
ಭರತ ಮಾರ್ಗದಿ ಹರಿಯಾಸ್ಮರಿಸುತಲೆ ಮನದೊಳು ಪೂಜಿಸುತಸುರ ವೈಭವದಲಿ ಮೆರೆಯುವ ದ್ವಾರಕಾಪುರವನುನೋಡುತ ಬೆರಗಾಗಿ ನಿಂದನು 5
ಚಾರರೊಡನೆ ಪೇಳಿದಾಶ್ರೀ ಕೃಷ್ಣನ ಬಾಲ್ಯದ ಸಖ ತಾನೆಂದುದೂರದಿ ಬಂದು ದ್ವಾರದಿ ನಿಂದಿಹುದನುಅರುಹಿರಿ ಹರಿಗೆಂದು ಕಳುಹಿದನವರನು 6
ವಾರುತಿಯನು ಕೇಳುತಾಶ್ರೀಕೃಷ್ಣ ತಾ ವಿಪ್ರನೆಡೆಗೆ ಬರುತಾ
ಕರ ಪಿಡಿದವನ ಕರೆತಂದನರಮನೆಗೆ ತಾವರ ಸಿಂಹಾಸನದಲ್ಲಿ ಕುಳ್ಳಿರಿಸಿದನಾಗ 7
ದೂರದ ದಾರಿಯನು ನಡೆದು ಬಂದಶ್ರಮ ಪರಿಹಾರಕೆಂದುನಾರಿ ರುಕ್ಮಿಣಿ ನೀರ ನೆರೆಯ ಪಾದವ ತೊಳೆದುಭಾರಿ ಉಪಚಾರ ಮಾಡುತಿದ್ದನು ಕೃಷ್ಣಾ 8
ಮಡದಿ ಮಕ್ಕಳ ಕ್ಷೇಮವ ವಿಚಾರಿಸಿಕಡು ಸಂಭ್ರಮವ ತೋರುತಷಡುರಸದನ್ನವ ಮಡದಿ ರುಕ್ಮಿಣಿ ಬಡಿಪೆಸಡಗರದಲಿ ಸುಭೋಜನವ ಮಾಡಿಸಿದನು 9
ಅಂದಿನಿರುಳು ಕಳೆಯೇತಂದಿಹುದೇನು ಕಾಣಿಕೆ ತಮಗೆನುತಾಚಿಂದೆ ಬಟ್ಟೆಯೊಳಿದ್ದ ಪ್ರಥಕು ತಂಡುಲವ [ಅವಲಕ್ಕಿ]ಬ್ರಹ್ಮಾಂಡದೊಡೆಯ ತಾ ಕೊಂಡೆ ಸಂಭ್ರಮದಿಂದ 10
ಪ್ರಥಕು ತಂಡುಲವ ಕೊಂಡುಸುಧಾಮನ ಭಕುತಿ ಭಾವನೆ ಕಂಡುಅತುಲ ಐಶ್ವರ್ಯದ ಸುಖ ಸಂಪದವಿತ್ತುಮುಕುತಿ ನೀಡಿದ ನಮ್ಮ ಭಕುತ ವತ್ಸಲ ಕೃಷ್ಣಾ 11
ಮಂಗಲಂ ಮಚ್ಛ ಕೂರ್ಮವರಹ ನರಸಿಂಹ ಸುಂದರ ವಾಮನಮಂಗಲಂ ಭ್ರಗುರಾಮ ದಶರಥ ತನಯಗೆಮಂಗಲಂ ಸಿರಿ ಕೃಷ್ಣ ಬೌದ್ಧ ಸುಕಲ್ಕಿಗೆ 12
ಮಂಗಲಂ ಪ್ರದ ಚರಿತ್ರೆಯಾಭಕುತಿಯಿಂ ಪೇಳಿ ಕೇಳಿದ ಜನಕೆಹಿಂಗದೆ ಸಕಲ ಸೌಭಾಗ್ಯ ಸಂಪದ ವೀವಾಅಂಗಜ ಪಿತ ತಂದೆ ಸಿರಿ ವಿಠಲ ಸ್ವಾಮಿ 13
ಶ್ರೀಹರಿಪ್ರಿಯ ಸಖನು ಕುಚೇಲನುವರ ವಿಪ್ರೋತ್ತಮನವನುನೀರಜನಾಭನ ಕರುಣೆಯಿಂದಲಿ ತಾಭೂರಿ ಸಂಪದ ಸಿರಿ ಭೋಗಿಸುತಿದ್ದನು 14
ಶ್ರೀ ಸುಧಾಮ ಚರಿತ್ರ ಸಂಪೂರ್ಣಂ


ಎಂದಿಗೆ ಕಾಂಬೆನೊ ಮುರಹರ endige kambeno murahara


ಎಂದಿಗೆ ಕಾಂಬೆನೊ ಮುರಹರ ಮಂದರೋದ್ಧರಅಂದು ಇಂದು ಎನದೇ ಮನ್ಮನಮಂದಿರದೊಳಿಂದಿರಾವರ ಪ
ಭೋಗಿ ಶಯ್ಯದಿ ಯೋಗ ನಿದ್ರೆಯಲಿಜಾಗರಾದೆನೋ ಹರಿಜಾಗು ಮಾಡದೆ ಹೃದಯ ಪದ್ಮದಿಭಾಗವತರ ಭಾಗ್ಯದ ದೇವ 1
ಸಿರಿಯ ಸುರುಚಿರ ಊರುಗಳ ಮೇಲೆಚರಣ ಯುಗ್ಮವನಿರಿಸಿಪರಮ ಸುಖಕೆ ಮರಳುಗೊಂಡೆನ್ನಮರತೆಯಾದರೆ ಸ್ವರಮಣ ನಿನ್ನ 2
ಸುರರು ಋಷಿ ಪಿತೃ ಧರಣೀಶ ಗಂಧರುವನರರ ವರದ ಭಕ್ತಿಲಿಕರೆಪ ಸೇವೆಗೆ ಮೆಚ್ಚಿ ಎನ್ನನುತೊರೆದು ಬಿಡಲು ಸಿರಿವಿಠಲ ನಿನ್ನ ಎಂದಿಗೆ ಕಾಂಬೆನೊ ಮುರಹರ 3