Labels

Wednesday, 6 November 2019

ಕಂಡ್ಯಾ ಕಂಡ್ಯಾ ಕಂಡ್ಯಾ kandya kandya

ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕೂಸಿನ್ನಚಂಡನಾಡುತಾಲೆ ಬಾಲೆರ್ಹಿಂಡು ಕೂಡಿ ಬಂದನಂತೆ ಪ
ದಂಡದಿಂದ ಚಿನ್ನಿ ಬಾಲೇರ್ಹಿಂದಿನೋಳು ಚಿಮ್ಮಿದನಂತೆಕಂಡಕಂಡ ನಾರಿಯರೆಲ್ಲ ಪುಂಡ ಕೃಷ್ಣರೆಂಬರಂತೆ 1
ದುಂಡು ಮುಖದೊಳಿಟ್ಟು ವೇಣುದಂಡವನೂದಲು ಕೃಷ್ಣಹಿಂಡು ನವಿಲು ಪಕ್ಷಿಗಳು ಮಂಡಲ ಕಟ್ಟಿದವಂತೆ 2
ದೃಷ್ಟಿಯಾದೀತೆಂದು ಕೂಸಿಗೆ ಎಷ್ಟು ಹೇಳಿದೆ ಮನೆಬಿಟ್ಟು ಪೋಗಬ್ಯಾಡೆಂದರೆ ಕೃಷ್ಣ ಘಳಿಗೆ ನಿಲ್ಲವಲ್ಲ 3
ಇಂದಿರೇಶ ಎನ್ನ ಮನೆ ಮುಂದಲಾಡೆಂದ್ಹೇಳಿದರೆನಂದ ವೃಜದಿ ಪೊಕ್ಕು ಬಹಳ ದುಂದು ಮಾಡುವನು ಕೃಷ್ಣ

No comments:

Post a Comment