Labels

Wednesday, 6 November 2019

ಕಂಡೆನೋ ನಿನ್ನ ವೆಂಕಟನೇ kandeno ninna venkatane

ಕಂಡೆನೋ ನಿನ್ನ ವೆಂಕಟನೇ ಸ್ವಪ್ನೆಪುಂಡರೀಕಾಕ್ಷ ಸಂಪೂರ್ಣ ಸದ್ಗುಣನೇ ಪ
ಗಿರಿಯ ಮೇಲ್ಹತ್ತಿ ಬಂದಿಹೆನು ನಿನ್ನಶರಣರೊಳಗೆ ಬಂದು ನುತಿಯ ಮಾಡಿಹೆನುಪರದೇಶ ಜನರ ನೋಡಿದೆನು ಅವರ್ಹೊರಗೆ ಪೋಗಲು ನಾನ್ಹೊರಗೆ ಬಂದಿಹೆನು1
ಮತ್ತು ನಾ ಒಳಗೆ ಬಂದಿಹೆನು ತೆರದುತ್ತಮ ದ್ವಾರಗಳನ್ನೇ ನೋಡಿದೆನುಚಿತ್ರ ವಾಲಗರ ಕೇಳಿದೆನು ಪೋಗ-ಲುಕ್ತಿ ಪೇಳುತಲೆ ಸನ್ನಿಧಿಲೆ ಬಂದಿಹೆನು 2
ಸುಂದರಾಂಗಿಯರ ಮಧ್ಯದಲಿ ನಿನ್ನಚಂದ್ರಮಂಡಲ ಮುಖ ಕಮಲ ನೋಡುತಲಿಇಂದಿರೇಶನೆ ನಯನದಲಿ ಪೊಕ್ಕೆ-ನಿಂದು ಸಂತೋಷ ನಿರ್ಭರ ಶರಧಿಯಲಿ 3

No comments:

Post a Comment