ಎಲ್ಲಿ ಶ್ರೀ ತುಳಸಿಯ ವನವು |ಅಲ್ಲೊಪ್ಪುವರು ಸಿರಿ-ನಾರಾಯಣರು ||
ಗಂಗೆ ಯಮುನೆ ಗೋದಾವರಿ ಕಾವೇರಿ |ಕಂಗೊಳಿಸುವ ಮಣಿಕರ್ಣಿಕೆಯು ||
ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ |ಸಂಗಡಿಸುತ ವೃಕ್ಷಮೂಲದಲ್ಲಿರುವುವು ||
ಸರಸಿಜಭವಭವಸುರಪಪಾವಕಚಂ-|ದಿರಸೂರ್ಯಮೊದಲಾದವರು ||
ಸಿರಿರಮಣನ ಆಜೆÕಯಲಿ ಅಗಲದಂತೆ |ತರುಮಧ್ಯದೊಳುನಿತ್ಯನೆಲಸಿಪ್ಪರು||
ಋಗ್ವೇದ ಯಜುರ್ವೇದಸಾಮಅಥರ್ವಣ |ಅಗ್ಗಳಿಸಿದ ವೇದಘೋಷಗಳು ||
ಅಗ್ರಭಾಗದಲಿವೆ ಬೆಟ್ಟದೊಡೆಯನಲ್ಲಿ |ಶ್ರೀಘ್ರದಿ ಒಲಿವ ಶ್ರೀಪುರಂದರವಿಠಲ||
No comments:
Post a Comment