Labels

Thursday, 7 November 2019

ಶ್ರೀ ತುಳಸಿಯಾ ಸೇವಿಸಿ shri tulasiya sevisi

ಶ್ರೀ ತುಳಸಿಯಾ ಸೇವಿಸಿ ||ಪ||
ಶ್ರೀ ತುಳಸಿಯಳಾ ಸೇವೆ ಪ್ರೀತಿಯಿಂದಲಿ ಮಾಡೆ |
ಗಾತರದ ಮಲವಳಿದು ಮಾತೆಯೆಂಬನಿತರೊಳು |
ಪಾತಕ ಪರಿಹರಿಸಿ ಪುನೀತರನು ಮಾಡುವಳು ಯಾತಕನುಮಾನವಯ್ಯ ||ಅ.ಪ||
ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ |
ಪದುಮನಾಭನು ತಾನು ಉದುಭವಿಸಿ ಬರಲಂದು ಉದುರಿದವು ಕಣ್ಣಿಂದ |
ಉದಕವುತ್ಸಹದಿಂದಲದೆ ತುಳಸಿನಾಮವಾಗೆ |
ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು |
ಒದಗಿ ಸುಜನರು ತಮ್ಮ ಸದನದಲ್ಲಿ ನಿತ್ಯ ಸ |
ತ್ಪದವಿಗೆ ಸಿದ್ಧವೆಂದು ಮುದದಿಂದ ತಿಳಿದು ವೃಂದಾವನ ರಚಿಸಿದರೈಯ್ಯಾ ||೧||
ಮೂಲದಲಿ ಸರ್ವತೀರ್ಥಗಳುಂಟು ತನ್ಮಧೈ |
ಕಾಲಮೀರದೆ ಸರ್ವ ನದನದಿಗಳಮರಗಣ |
ಮೇಲೆ ದಳ ಒಂದರಲಿ ಒಂದೊಂದು ಮೂರುತಿಯು ವಾಲಯವಾಗಿಪ್ಪುದು |
ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು |
ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿರ್ಮಾಲ್ಯವನು
ಸತತ ಕರ್ಣದಲಿ ಧರಿಸಿದ ಮನುಜ ಕಾಲನಾಳಿಗೆ ಶೂಲನೊ ||೨||
ಉದಯದೊಳಗೆದ್ದು ನೀರೆರೆದು ಮಜ್ಜನಗೈದು |
ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು |
ಮುದದಿಂದಲೊಂದು ಪ್ರದಕ್ಷಿಣೆ ನಮಸ್ಕಾರ ತದನಂತರದಲ್ಲಿ ಭಜನೆ |
ವದನದೊಳು ಗೈಯ ಧರೆಯೊಳಗಿದ್ದ ಸರ್ವನದ |
ನದಿಗಳಿಗೆ ನೂರ್ಮಡಿಯಾತ್ರೆ ಮಾಡಿದ ಫಲ |
ಒದಗುವುದು ಹಿಂದಣಾನಂತ ಜನ್ಮಗಳಘವ ತುದಿಮೊದಲು ದಹಿಪುದಯ್ಯಾ || ೩ ||
ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ |
ಆವವನ ಮನೆಯಲ್ಲಿ ಹರಿದಾಸರಾಕೂಟ |
ಅವವನ ಭುಜದಲ್ಲಿ ತಪ್ತಮುದ್ರಾಂಕಿತವು ಪಾವಮಾನಿಯ ಮತದೊಳು |
ಆವವನು ಕಾಲತ್ರಯವ ಕಳೆವನಾವಲ್ಲಿ |
ಶ್ರೀ ವಾಸುದೇವ ಮುನಿದೇವಾದಿ ಗಣಸಹಿತ |
ಕಾವುತ್ತಲಿಪ್ಪ ಬಲಿಗೊಲಿದಂತೆ ತೊಲಗದಲೆ ||೪||
ಕಂಡರೆ ದುರಿತಕ್ಕೆ ಕೆಂಡವನು ಬೀರುವುದು |
ಕೊಂಡಾಡಿದರೆ ಪುಣ್ಯವಪರಿಮಿತಿವುಂಟು ಮೈ- |
ದಿಂಡುಗೆಡಹಿದರೆ ಪುನರಪಿ ಜನನವಿಲ್ಲ ಸಲೆ ದಂಡವಿಟ್ಟವ ಮುಕ್ತನೊ |
ಚಂಡಾಲ ಕೇರಿಯೊಳು ಇರಲು ಹೀನಯವಲ್ಲ |
ಪಾಂಡುರಂಗಕ್ಷೇತ್ರ ಸರಿಮಿಗಿಲು ಎನಿಸುವುದು |
ತಂಡತಂಡದ ಕುಲಕೆ ಅವರವರ ಯೋಗ್ಯಫಲ ಕಂಡವರಿಗುಂಟೆ ಅಯ್ಯಾ ||೫||
ಚಿತ್ತಶುದ್ದನು ಆಗಿ ಮುಂಜಾನೆಯೊಳು ತುಳಸಿ |
ಸ್ತೋತ್ರವನೆ ಮಾಡುತ್ತ ದಿವ್ಯವಾಗಿಹ ತ್ರಿದಳ |
ಪ್ರತ್ಯೇಕ ಪಾತ್ರೆಯಲಿ ತೆಗೆದು ಶೋಧಿಸಿ ತುಂಬಿ ವಿತ್ತಾದಿಯಲಿ ತಾರದೆ |
ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ |
ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ |
ರ್ವೋತ್ತರಭಿಮುಖನಾಗಿ ಭಕ್ತಿಯಿಂ ತರಬೇಕು ಹೊತ್ತು ಮೀರಿಸಲಾಗದೊ ||೬||
ಕವಿಮಂಗಳವಾರ ವೈಧೃತಿ ವ್ಯತೀಪಾತ |
ರವಿಶಶಿಯ ಸಂಗಮ ಪರ್ವಣಿ ಪುಣ್ಯಕಾಲ |
ದಿವಸ ದ್ವಾದಶಿ ಶೇಷ್ಠ ಉಪರಾಗ ಪಿತೃಶ್ರಾದ್ಧ ಇವುಗಳಲಿ ತೆಗೆಯದಿರಿ |
ನವವಸನ ಪೊದ್ದು ಊಟಮಾಡಿ ತಾಂಬೂಲ |
ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿಸುವುದು |
ಚಿತ್ತವಲ್ಲೆಂದು ತಿಳಿದು ಕೊಂಡಾಡುತಿರಿ ದಿವಸ ದಿವಸಗಳೊಳಯ್ಯಾ ||೭||
ದಳವಿದ್ದರೇ ಒಳಿತು ಇಲ್ಲದಿದ್ದರೆ ಕಾಷ್ಠ |
ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು |
ತುಳಸಿ ನಿರ್ಮಾಲ್ಯವಾದರು ತೊಳೆತೊಳೆದು ಏರಿಸಲಿಬಹುದು |
ತುಳಸಿ ಒಣಗಿದ್ದರೂ ಲೇಶದೋಷಗಳಿಲ್ಲ |
ತುಳಸಿ ವಿರಹಿತವಾದ ಪೂಜೆಯದು ಸಲ್ಲದು |
ತುಳಸಿ ತುಳಸಿ ಎಂದು ಸ್ಮರಣೆಯಾದರು ಮಾಡಿ ಜಲಜಾಕ್ಷನರ್ಚಿಸಿರೈಯ್ಯಾ ||೮||
ತುಳಸಿ ಇಲ್ಲದ ಸದನ ಹೊಲೆಮಾದಿಗರ ಸದನ |
ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ |
ತುಳಸಿ ಇಲ್ಲದ ತೀರ್ಥವೆಂದಿಗಿದ್ದರು ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ |
ತುಳಸಿ ಮಿಶ್ರಿತವಾದ ನೈವೇದ್ಯಗತಿಸಾಧ್ಯ |
ತುಳಸಿ ಧರಿಸಿದ ದೇಹ ಪರಮಸಾರ್ಥಕವಯ್ಯ |
ತುಳಸಿ ದಳ ಹರಿಗೆ ಅರ್ಪಿಸಿದವನ ಪುಣ್ಯಕ್ಕೆ ನೆಲೆಯ ನಾ ಕಾಣೆನಯ್ಯಾ ||೯||
ಶಿವನಸತಿ ಪ್ರಹ್ಲಾದ ನಾರದ ವಿಭೀಷಣನು |
ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು |
ಇವರೆ ಮೊದಲಾದವರು ಭಕ್ತಿಪೂರ್ವಕದಲಿ ವಿವರವನು ತಿಳಿದರ್ಚಿಸಿ |
ತವಕದಿಂ ತಂತಮ್ಮ ಘನಪದವನೈದಿದರು |
ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು |
ಜವಭಟರನೋಡಿಸೀ ಜಡದೇಹವನು ನೀಗಿ ಭವದೂರರಾದರೈಯ್ಯಾ ||೧೦||
ಉದಯಕಾಲದೊಳೆದ್ದು ಆವನಾದರು ತನ್ನ
ಹೃದಯನಿರ್ಮಲನಾಗಿ ಭಕ್ತಿಪೂರ್ವಕದಿಂದ |
ಸದಮಲಾ ತುಳಸಿಯನು ಸ್ತೋತ್ರಮಾಡಿದ ಕ್ಷಣಕೆ ಮದಗರ್ವ ಪರಿಹಾರವೋ |
ಇದೆ ತುಲಸಿ ಸೇವಿಸಲು ಪೂರ್ವದಲಿ ಕಾವೇರಿ |
ನದಿಯ ತೀರದಲೊಬ್ಬ ಭೂಸುರ ಪದಕೆ ಪೋದ |
ಪದಪದೆಗೆ ಸಿರಿವಿಜಯವಿಟ್ಠಲಗೆ |
ಪ್ರಿಯಳಾದ ಮದನತೇಜಳ ಭಜಿಸಿರೈಯ್ಯಾ ||೧೧||

No comments:

Post a Comment