Labels

Friday, 1 November 2019

ಬಿಡಿ ಬಿಡಿ ಸಂದೇಹವನು bidi bidi Sandehavanu

ಬಿಡಿ ಬಿಡಿ ಸಂದೇಹವನು ಪೊಡವಿ ಮನುಜರೆಲ್ಲಒಡೆಯನೊಬ್ಬನೆ ಜಗಕೆ ರಂಗವಿಠಲ ಪ
ಹರಿಹರವಿರಿಂಚರೊಳು ಪರದೈವವಾರೆಂದುಪರಮ ಮುನಿಗಳು ವಿವಾದವನು ಮಾಡೆಸರಸಿಜಾತನ ಸುತನ ಭೃಗುವನಟ್ಟಲು ಪೋದಅರಿದು ಬಹೆನೆಂದು ಪದ್ಮಜನ ಸಭೆಗೆ1
ಮುನಿವರನು ಕಂಡು ಪದ್ಮಜಗೆ ವಂದಿಸದಿರಲುವನಜಭವ ಕೋಪವನು ಮಾಡಿ ಜರಿಯೆಮುನಿ ಪರಮ ತತ್ತ್ವ ಇವನಲ್ಲವೆಂದೆನೆ ಕನಲಿಮನಸಿಜವೈರಿಯ ಲೋಕಕೆ ಪೋದನು 2
ಹರ ಕಂಡು ಭೃಗುಮುನಿ ಬರಲು ತನ್ನನುಜನೆಂದುಭರವಸೆಯಲೆದ್ದು ತಕ್ಕೈಸ ಪÉÇೀಗೆ ಜರಿದು ಹರನನು ಮುಟ್ಟದಿರೆ ಶಂಕರನು ಕನಲಿಕರೆದ ಶೂಲವ ಜಡಿದು ಕೊಲಲುಬಗೆದ 3
ಹರನ ಕೋಪವ ಕಂಡು ಗಿರಿಜೆ ಚರಣವ ಪಿಡಿದುಕರುಣಿ ಮುನಿಯನು ಕಾಯಬÉೀಕೆಂದೆನಲುಮರಣ ಭಯದಿಂದ ನಿರ್ಮುಕ್ತನಾಗಿ ಮುನಿವರನು ಸರಸಿಜನಯ್ಯನಿಪ್ಪ ವೈಕುಂಠಕೆ ಪೋದನು 4
ಅಲ್ಲಿ ಮಹಲಕ್ಷುಮಿಯ ತೊಡೆಯಲ್ಲಿ ಪವಡಿಸಿ ಇರಲುಫುಲ್ಲನಾಭನ ಚರಣದಿಂದಲೊದೆಯೆಮೆಲ್ಲನೆ ಪಾದವ ಪಿಡಿದು ಮುನಿವರಗೆ ಪೊಡಮಟ್ಟುಇಲ್ಲಿ ಬಿಜಯಂಗೈಸಬೇಕೆಂದನು 5
ಪರಮ ಮುನಿ ನಿಮ್ಮ ಪದ ಸೋಂಕಲು ಪಾವನನಾದೆಚರಣರಜ ಪರಮ ಪಾವನ ಸುಲಭವೆಸಿರಿಗೆ ನೆಲೆವನೆಯಾದೆ ಪದಸಂಗದಿಂದಲೆನೆಪರಮ ಹರುಷದಲಿ ಮುನಿತನುವ ಮರೆದ 6
ಪರತತ್ವವನು ಕಂಡು ಬಂದು ಮುನಿವರನಂದುಒರೆಯೆ ಋಷಿವರರಿಗವರವರ ಪರಿಯಅರಿದರಾ ಮುನಿವರರು ಹರಿಯೆ ಪರದೈವವೆಂದುನೆರೆ ತಿಳಿದು ಭಜಿಸಿ ನರಹರಿಯ ಹರಿಯ 7
ಕಡಲ ದನುಜರು ಸುರರು ಕಡೆಯೆ ಕಡಲೊಳಗಿರ್ದಮಡದಿ ಮಹಾಲಕ್ಷುಮಿ ಅವತರಿಸಿ ಬರಲುಮೃಡ ಕಮಲಜ ಸುರಮುಖ್ಯರನು ಜರಿದು ಸಿಂಧುವಿನದಡದಲ್ಲಿ ಹರಿಯ ವರಿಸಿದಳು ವರನೆಂದು 8
ಕರಿಪತಿಯ ಸರಸಿಯೊಳು ಮೊಸಳೆ ಪಿಡಿಯಲು ಭರದಿಪರಮ ಪುರುಷ ಜಗತ್ಪತಿಯೆನಲುಗರುಡವಾಹನನಾಗಿ ಹರಿ ಬಂದವನ ಕಾಯ್ದಪರದೈವವಾರು ಜಗದೊಳಗೆ ಪೇಳಾ9
ರಾಜಸೂಯವ ಧರ್ಮಸುತ ಮಾಡೆ ಅವನಗ್ರ-ಪೂಜೆಗರುಹರು ಸುರರೊಳಾರೆಂದೆನಲುಭಾಜನನು ಸದ್ಗುಣನು ಕೃಷ್ಣನೊಬ್ಬನೆಯೆಂದುರಾಜಸಭೆಯಲಿ ದೇವವ್ರತ ನುಡಿದನು 10
ಗಂಗೆ ಈತನ ಪಾದಸಂಗದಿ ಪಾವನವೆನಲುಗಂಗಾಧರನು ಪರಮ ದಾಸನೆನಲುಮಂಗಳಾತ್ಮಕ ವಿಶ್ವಜನ್ಮಾದಿ ಕಾರಣನುರಂಗವಿಠಲರೇಯನ ನೆರೆನಂಬಿರೋ 11

No comments:

Post a Comment