Labels

Thursday, 7 November 2019

ತುಳಸೀ ದೇವಿಗೆ ಜಯ ಮಂಗಳಂ Tulasidevige mangala

ತುಳಸೀ ದೇವಿಗೆ ಜಯ ಮಂಗಳಂ ।। PA ।।
ಜಗನ್ಮಾತೆಯಾಗಿ ಶ್ರೀ ಹರಿಯ । ಪ್ರೀತಿಪಾತ್ರ ।
ಳಾಗಿ ಮೆರೆವ ।। A.pa।।
ಮಂದರ ಗಿರಿಧರನಾ
ನಂದ ಬಾಷ್ಪದಿಂದಲಿ ವ-
ಸುಂಧರೆಯೊಳುದಿಸಿ ಬುಧ ।
ಮಂದರ ತರುವೆಂದೆನಿಸಿದ ।। 1 ।।
ಸರಸ ಬುದ್ಧಿಯಿಂದ ಹರಿ
ಚರಣನಾಶ್ರಯಿಸಿ ।
ದರ ಬ್ರಹ್ಮಾದ್ಯರುಗಳಿಂ ಬಹುಮಾನ ।
ಪರಸ್ಪರೆಯದಿಂದಲರುವಾ ।। 2 ।।
ಕಮಲೇಶವಿಠ್ಠಲರಾಯನಾ ।
ಸಮವಾಗದೆ ಮೇಲೆ ಮೆರೆದು ।
ಮಮತೆಯಿಂದಿರುವಳು ।
ಗಾಮಿಕ್ಯಾಡೊ ವನಮಾಲೆಯಾವ ।। 3।।

No comments:

Post a Comment