Labels

Thursday, 7 November 2019

ತುಳಸಿ ದೇವಿ ನಮಿಸಿ ಬೇಡುವೇ tulasi devi namisi befuve

ತುಳಸಿ ದೇವಿ ನಮಿಸಿ ಬೇಡುವೇ | ನಿಮ್ಮ ಪಾದಒಲುಮೆಯಿಂದ ಭಜಿಸಿ ಪಾಡುವೇ ||pa||

ಅಲವ ಬೋಧರ ಹೃದಯ ವಾಸ |
ಸುಲಭ ನಮ್ಮ ಹರಿಯ ರೂಪಫಲಿಸಿ ಎನ್ನ ಹೃದಯದಲ್ಲಿ |
ಗೆಲಿಸು ಎನ್ನ ಭವದ ತಾಪ ||.a.pa||

ಹರಿಯ ನಯನಧಾರೆ ಸಂಭವೇ | ಕಾಯೆ ತಾಯಿಸಿರಿಯ ರಮಣ ನಮಿತ ಪ್ರೀಯಳೇ ||
ವರ ಸುವರ್ಣ ಪುಷ್ಪವಮಿತ |
ಎರಮಿಸಿ ಬೇಡಿದಾರುಹರಿಯು ಒಪ್ಪ ನಿಮ್ಮದಳ |
ವಿರಹಿತವಾದ ಪೂಜೆಯನ್ನ ||1||

ಸರಸಿಜಾಕ್ಷಿ ನಿನ್ನ ಮೃತ್ತಿಕಾ | ಫಾಲದಲ್ಲಿಧರಿಸುವರ ಅಘಕೆ ಪಾವಕಾ ||
ಕರಣ ತೀರ್ಥಾದಿಗ |
ವರದಳಗಳ್ ದ್ವಿನವಗಳನ್ನಧರಿಪ ಜನರ ಭಿ್ಟ5ವಿತ್ತು |
ಘೋರ ಪಾಪವನ್ನು ಕಳೆವೆ ||2||

ಶ್ರೀರಮಣಿ ಆವಿಷ್ಟಯೇ | ನಮಿಪೆ ತಾಯೆಕರುಣಿಸೆನಗೆ ಸುಜನ ಸೇವಿತೇ ||
ಗುರುಗಳಂತರ್ಯಾಮಿಯಾದ |
ಗುರು ಗೋವಿಂದ ವಿಠಲಾನಚರಣ ವನಜ ತೋರಿ ಎನಗೆ |
ಹರಿಸು ಎನ್ನ ತ್ರಿವಿಧ ತಾಪ||3|

No comments:

Post a Comment