ರಾಮಾವರಂತೆ (ರಾಮಾ+ಅವರಂತೆ) ರಕ್ಷಿಸೋ ಎಂದರೆರಕ್ಷಿಸಲೊಲ್ಲ್ಯಾ ಪರಾಕು ಪ
ಕಾಮಿತ ಫಲವೀವ ಕರುಣಾಂಬುಧಿ ಎಂದು ನಾ ಮೊರೆಹೊಕ್ಕೆನಲ್ಲೋ ರಾಮರಾಮಾ ಪ್ರಫುಲ್ಲ ಅ.ಪ.
ಎಡವಿದ್ದ ಮಾತ್ರದಿ ಪೆಣ್ಣಾದ ಗೌತಮಮಡದಿಯು ನಿನ್ನವಳೇನೋಕಡುಪ್ರೀತಿಯಿಂದ ಕಾಯಿದಿ ಕರಿರಾಜನು ನಿನ್ನಒಡಲಲ್ಲಿ ಜನಿಸಿದನೇನೋನಡುಗುತ ಮಗನ ನಾರಗನೆನ್ನಲುನುಡಿ ಕೇಳಿ ಪೊರೆದೆಲ್ಲೊ ರಾಮರಾಮಾ1
ಹಿಂದ್ವೈರಿ ದೆಸೆಯಿಂದ ಬಂದ ವಿಭೀಷಣನುತಂದೆಯ ಕಡೆಯವನೇನೋಕಂದು ಕುಂದೆಣಿಸದೆ ಕಾಯಿದಿ ಘಂಟಾಕರ್ಣಾಎಂದಾ ಮಾತಿನ ಬಗೆಯೇನೋಬಂದು ಕಂಬದಿ ಶಿಶುವ ಬಾಧೆಯ ಬಿಡಿಸಿದಿ ಆಪದ್ಬಾಂಧವ ನೀನಲ್ಲೋ ರಾಮರಾಮಾ 2
ಉಲ್ಲಾಸದಿಂದ ಶಬರಿ ಉಂಡೆಂಜಲಿಗೊಡ್ಡಿದವಲ್ಲಭ ನೀನಲ್ಲವೇನೋಎಲ್ಲಿಯ ಬಲ್ಲಿದ ಪಿಡಿಯವಲಕ್ಕಿಗೆ ನೀ ಪೋಗಿವಲ್ಲ್ಯೊಡ್ಡಿದ್ದು ಮರೆತ್ಯೇನೋಎಲ್ಲಿಯ ಮಾತಿದು ಪೇಳಲಂಜುವೆ ರಂಗ ವಿ-ಠಲ ನೀನಲ್ಲೋ ರಾಮರಾಮಾ 3
No comments:
Post a Comment