ಇಂದುವದನೆ ಎನ್ನ ಕಂದನ ನೋಡೆ ಪ
ಮಂದಿರದೊಳಗೆಷ್ಟು ಚಂದದಿಂದಾಡುವನೆ ಅ.ಪ
ದೃಷ್ಟಿ ಮಾಲೆಯ ಕಟ್ಟಿಪೆ ಕೊರಳೊಳುದೃಷ್ಟಿ ಆಗುವುದಲ್ಲೆ ಪುಟ್ಟ ನಮ್ಮಪ್ಪನಿಗೆ 1
ನಗುವನು ಬೆಳದಿಂಗಳ ಹಗಲೆ ಬಂದಿಹುದೇನೆನಗುತ ನಿಂತಿರುವ ಸುಗುಣವಂತನ್ನ ಎನ್ನಬಗಲೊಳಗೆತ್ತಿಕೊಂಬುವೆನೆ 2
ತುಡುಗನೆಂಬುವರಲ್ಲೆ ಮಡದೇರು ಊರೊಳುಕೊಡ ಕೊಡ ದಧಿ ಪೇಯ ಪಿಡಿಯನು ಒಂದಿ£ 3
ಅಂಗಿ ಕುಂಚಿಗಿ ಹಾಕಿ ಶೃಂಗರಿಸುವೆನುಅಂಗಳದೊಳಗೆಷ್ಟು ಮಂಗಳ ತೋರುವನೆ 4
ಕೂಸಿನಿಂದಲೆ ಗೋಷ್ಟ ಭೂಷಿತವಾಗಿದೆಸಂತೋಷಿಸುತ ಇಂದಿರೇಶನು ನಲಿವನು 5
No comments:
Post a Comment