Labels

Wednesday, 6 November 2019

ಎಷ್ಟು ಸುಸ್ವರ ಊದುತಿಹನಮ್ಮ estu suswara udutihanamma

ಎಷ್ಟು ಸುಸ್ವರ ಊದುತಿಹನಮ್ಮ ಶ್ರೀಕೃಷ್ಣ ಕೊಳಲನ ಪ
ಎಷ್ಟು ಸುಸ್ವರ ಊದುತಿಹನೋ ಗೋಷ್ಠಿಯೊಳು ಗೋವುಗಳಕಿವಿಗಳು ನೆಟ್ಟನಿಲ್ಲಿಗೆ ಕೇಳಿ ಮೋದದಿ ಕಟ್ಟಿದೆಲೆ ಕಣ್ಣಿಗಳಹರಿವವೊಅ.ಪ
ತರಣಿ ತನುಜನ ತೀರದಲ್ಲಿಹನೆ ಕೊರಳೊಳಗೆ ಕೌಸ್ತುಭಹರಳಿನಿಂದ ಜಗವ ಬೆಳಗುವನೆ ಕುರುಳು ಕುಣಿಸುತಬಾಲಬಿಂಬದಿಕರ್ಣಕುಂಡಲ ಗಂಡ ಸುಪ್ರಭ ಮರುಳು ಮಾಡುತಮೂರು ಲೋಕವಸಿರಿಯ ಮೋಹಿಪ ಪರಮ ಪುರುಷನು1
ಚರಣದೊಳು ಭೂಷಗಳ ನುಡಿಸುವನೆ ಕಟಿಯಲ್ಲಿ ಕಾಂಚನಜರದ ಪೀತಾಂಬರವ ಹೊದ್ದವನೆ ಕರದಿ ಕಂಕಣ ವಂಕಿಉಂಗುರಹರಳು ಕೆತ್ತಿದ ಸರಿಗೆಸರ ನಗ ಮುರಿಗೆ ತೋಡೆ ಸುಹಾರಭೂಷಿತಉರದಿ ಕುಳಿತಿಹ ಸಿರಿಯ ಮೋಹಿಪ 2
ಅರಗೀಮನೆ ಬಾಂಧವರು ಬೇಕೆ ನಿಜ ಪತಿಗಳೆಮ್ಮನುಮೀರಿ ಪೋದರು ಅಂದರೆನಲೇಕೆ ಮಾರನಯ್ಯನ ಮುರಲಿಸುಸ್ವರಸಾರಿ ಮನಸಪಹಾರ ಮಾಡಿತು ನಾರಿ ಮಣಿಯರೆ ಕ್ಷಣವುತಡೆಯದೆವಾರಿಜಾಸನ ವನಕೆ ತೆರಳಿರೆ 3
ಎಷ್ಟು ಜನ್ಮದ ಪುಣ್ಯವಿರುತಿಹದೆ ಈ ಮುರಲಿ ಬಾಲನಪುಟ್ಟತುಟಿಯಲಿ ಸುಧೆಯ ಸುರಿಸುವದೇಸೃಷ್ಟಿರವ ಬಳ್ಳಿಮನದಲಿ ವೃಷ್ಟಿಹಿಡಿಸದೆ ಕುಸುಮಫಲಗಳುವೃಷ್ಟಿಯಿಂದಲೆ ಹೊರಗೆ ಚೆಲ್ಲುತ ಅಭೀಷ್ಠೆ ಸುರಿಸುತಪೇಳುತಿಹವೊ 4
ಅರುಣನಂದಧಿ ಅದರ ಸೌಭಗವೊ ವನ ನಿಲಯ ಮೃಗಗಳುತೊರೆದು ವೈರವ ಸುತ್ತು ನಿಂತಿಹವೋ ಹರುಷದಲೆ ಮನತೊರೆದು ನಿಲ್ಲಲು ಇಂದಿರೇಶನ ತರುಣಿಯರು ಪೋಗೋಣ ನಡೆಯಿರಿ 5

No comments:

Post a Comment