Labels

Tuesday, 5 November 2019

ಅಂಜುವೆನು ನಿನಗಂಜನೆಯ anjuvenu ninaganjaneya

ಅಂಜುವೆನು ನಿನಗಂಜನೆಯ ತನಯಪ್ರಭಂಜನನ ಸುತ ಅಂಜುವೆನು ಪ
ವಾರಿಧಿಯನು ಹಾರಿ ಸೀತೆಗೆ ಚಾರು ಮುದ್ರೆಯನುತೋರಿ ಲಂಕೆಯ ಸೂರೆ ಮಾಡಿದೆ ಘೋರರಾಕ್ಷಸರ್ಘಾತಗೊಳಿಸಿದಿ 1
ಮಾರಮಣಪದ ಸಾರಸಾವನು ಭೂರಿ ಸೇವಿಸಿದೆನಾರಿ ಕಾಡಿದ ಕ್ರೂರರಡಹನು ಹಾರ ಮಾಡಿದಿ ಶೂರ ಭೀಮನೆ 2
ನಂದ ತೀರ್ಥನೆ ಬಂದು ದುರ್ಜನದುಂದು ನಿಲ್ಲಿಸುತಾಇಂದಿರೇಶ ವಿದೇಂದ್ರದೈವತ ವಂದ್ಯನೆಂದು ನಿಬಂಧ ಮಾಡಿದಿ 3

No comments:

Post a Comment