ಆರಮ್ಮ ಮುರಲಿಯನೂದುವನುಮಾರ ಸುಂದರ ಸುಖ ಸಾರುವ ಜಗಕೆ ಪ
ಪುಂಡರೀಕಾಕ್ಷನು ಹಿಂಡುಗೋವ್ಗಳ ಕಾಯ್ದುಕಂಡ ಕಂಡವರನ್ನು ಕರೆಯುತಾನೆಚೆಂಡು ಬಗರಿ ಗೋಲಿ ಗುಂಡುಗಳನೆ ಕಟ್ಟಿತಂಡ ತಂಡವಾಗಿ ಪೋದನಮ್ಮ 1
ತಾಯಿ ಕಟ್ಟಿರುವಂಥಾ ತೋರ ಬುತ್ತಿಯ ಗಂಟುತೂಗುತ ಯಮುನೆಯ ತೀರದಲ್ಲೇತೋರ ಉಪ್ಪಿನಕಾಯಿ ಬುತ್ತಿಗಳನೆ ತಿಂದುತೀರಿದವರಿಗೆಲ್ಲಾ ತಾ ಕೊಡುವಾ 2
ಇಂದಿರೇಶನು ಕೊಟ್ಟ ತಿಂದ ಉಪ್ಪಿನಕಾಯಿಆನಂದಬಟ್ಟರು ಗೋಪನಂದನರುಹಿಂದಿನ ಪುಣ್ಯವು ಬಂದೊದಗಿತು ಎಂದುತಿಂದ ಎಂಜಲನಿಟ್ಟ ಇಂದಿರೇಶ3
No comments:
Post a Comment