ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾ
ಕಂಡು ಧನ್ಯನಾದೆ ನಮ್ಮ ಈ ಗುರುಗಳ ||
ತುಂಗಾತಟದಿ ಬಂದು ನಿಂತ
ಪಂಗು ಬಧಿರಾದ್ಯಂಗಹೀನರ
ಅಂಗಗೈಸಿ ಸಲಹುವ ನರಸಿಂಗನಂಘ್ರಿ
ಭಜಕರಿವರ || ೧ ||
ಗುರುವರ ಸುಗುಣೇಂದ್ರರಿಂದ
ಪರಿಪರಿಯಲಿ ಸೇವೆಗೊಳುತ
ವರಮಂತ್ರಾಲಯಪುರದಿ ಮೆರೆವ
ಪರಿಮಳಾಖ್ಯ ಗ್ರಂಥಕರ್ತರ || ೨ ||
ಸೋಹಂ ಎನ್ನದೆ ಹರಿಯ ದಾಸೋಹಂ
ಎನ್ನಲು ಒಲಿದು
ವಿಜಯ ಮೋಹನವಿಠಲನ ಪರಮ
ಸ್ನೇಹದಿಂದ ತೋರುವವರ || ೩ ||
No comments:
Post a Comment