ಪವಮಾನ ಪವಮಾನ / ಜಗದ ಪ್ರಾಣಾ ಸಂಕರುಷಣಾ/ ಭವಭಯ ರಣ್ಯಾ ಧಹನಾ ಪವನಾ /
ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಜನ ಪ್ರಿಯಾ /ಅ.ಪ /
ಹೇಮ ಕಚ್ಚುಟ ಉಪವೀತ ಧರಿಪ ಮಾರುತಾ ಕಾಮಾದಿ ವರ್ಗರಹಿತಾ/ ವ್ಯೋಮಾದಿ ಸರ್ವವ್ಯಾಪೂತಾ ಸತತ ನಿರ್ಭಿತಾ ರಾಮಚಂದ್ರನ ನಿಜ ದೂತಾ ಽ ಯಾಮಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖ ಸ್ತೋಮವ ತೋರುತ ಪಾಮರ ಮತಿಯನು ನಿ ಮಾಣಿಪುದು /೧/
ವಜ್ರ ಶರೀರ ಗಂಭೀರಾ ಮುಕುಟ ಧರಾ ದುರ್ಜನ ವನಕುಟಾರಾ ನಿರ್ಜರ ಮಣಿದಯಪಾರಾ ವಾರ ಉಧ್ದಾರಾ ಸಜ್ಜನರಘ ಪರಿಹಾರಾ ಽ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗರಿವಂತೆ ಘರ್ಜನೆ ಮಾಡಿದೆ ಹೆಜ್ಜೆ ಹೆಜ್ಜೆಗೂ ನಿನ್ನಾಬ್ಜ ಪಾದ ಧೂಳಿ ಮಾರ್ಜನದಲಿ ಭವವರ್ಜಿತ ನೆನಿಸೊ /೨/
ಪ್ರಾಣ ಅಪಾನ ವ್ಯಾನ ಉದಾನ ಸಮಾನ ಆನಂದ ಭಾರತೀ ರಮಣಾ/ ನಿನೇ ಸರ್ವಾದಿ ಗಿರ್ವಾಣ ಆದ್ಯಮರರಿಗೆ ಜ್ಞಾನ ಧನ ಪಾಲಿಪ ವರೆಣ್ಯಾ ಽ ನಾನು ನಿರುತದಲಿ ಏನೇನೆಸಗುವ ಮಾನಸಾದಿ ಕರ್ಮ ನಿನಗೊಪ್ಪಿಸುವೆನು ಪ್ರಾಣನಾಥ ಶ್ರೀ ವಿಜಯ ವಿಠ್ಠಲನ ಕಾಣಿಸಿ ಕೊಡುವುದು ಭಾನುಪ್ರಕಾಶ /೩/
No comments:
Post a Comment