ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ
ನಾಕವಿಲಸಿತಗೀತೆ ಲಾವಣ್ಯಮೂರ್ತೆ |
ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ ||
ನಾಕವಿಲಸಿತಗೀತೆ ಲಾವಣ್ಯಮೂರ್ತೆ |
ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ ||
ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ
ಮುಂದೆ ನ೦ದನ ಕಂದ ನಿನ್ನೆದುರು ಕುಣಿದ
ಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆ
ಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧||
ಮುಂದೆ ನ೦ದನ ಕಂದ ನಿನ್ನೆದುರು ಕುಣಿದ
ಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆ
ಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧||
ಇಷ್ಟವಿಲ್ಲದ ರಾಜ್ಯವಾಳಿ ಬಹು ವರ್ಷಗಳು
ಶ್ರೇಷ್ಠ ನೀ ಬಹು ಆಯಾಸಗೊಂಡೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠ ಗ್ರಂಥವ ಬರೆದು ಬರೆದು ಸಾಕಾಯ್ತೆ ||೨||
ಶ್ರೇಷ್ಠ ನೀ ಬಹು ಆಯಾಸಗೊಂಡೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠ ಗ್ರಂಥವ ಬರೆದು ಬರೆದು ಸಾಕಾಯ್ತೆ ||೨||
ಪರಿ ಪರಿ ಅಭಿಷ್ಟಗಳ ನೀಡೆಂದು ಜನ ಕಾಡೆ
ವರವಿತ್ತು ಸಾಕಾಯ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ ||೩||
ವರವಿತ್ತು ಸಾಕಾಯ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ ||೩||
No comments:
Post a Comment