ಕರುಣಾದಿ ಪೊರೆಯನ್ನ ಪಾರ್ವತೀರಮಣ ಪುರಹರನೆ ಕರುಣಿಪುದೆಮಗೆ ಸುಜ್ಞಾನ \\ ಪ\\
ಈಧರಣಿಯೊಳು ಗೂಗಲ್ಲು ಕ್ಷೇತ್ರ ಸುಮಂದಿರನೆ ನಿನ್ನ ಸ್ಮರಿಸುವೆನು ಅನುದಿನ \\ಅ.ಪ\\
ನಿರುತ ಸ್ಮರಿಪರ ದುರಿತ ಗಜ ಪಂಚಾಸ್ಯ ಕರಮುಗಿವೆ ನೆರೆನಂಬಿನಿನ್ನನು ಶೇವಿಸುವ ಶರಣರಿಗೆ ಸುರತರುವೆ
ಜನಿಸಿರುವರೊಳು ಸರ್ವರಿಗೆ ಮನದಲಿ ಪ್ರೇರಿಸುವ ಗುರುವೆ ಗೂಗಲ್ಲಪ್ರಭುವೆ \\1\\
ಕ್ಷಿತಿಪವರ ಪರಿಕ್ಷಿತಗೆ ಶೃತಿ ಸಮ್ಮತವೆನಿಸಿದಂಥ ಭಾಗವತಸು ಕಥಾ ಮೃತವನುಣಿಸಿದ ಪರಮ ಪ್ರಖ್ಯಾತ
ತಿಳಿಸೆನ್ನ ಮನಕೆ ತದರ್ಥಗಳ ಪೊಳೆವಂತೆ ಶುಭಚರಿತ ಜಿತ ಮನೋಜಾತ \\2\\
ಅನುಗಾಲ ಭಕುತರ ಮ್ಯಾಳವನು ಪರಿಪಾಲಿಸಲು ಶಿವನೆ ರಾಜಿಸುವ
ಕೃಷ್ಣಾಕೂಲದಲಿ ನಿಂದಿರುವಿ ಶಂಕರನೇ ಜನಮೇಜಯಾಖ್ಯ ನೃಪಾಲಪೂಜಿತ ಪಾದ ಪಲ್ಲವನೇ ಸುವಿಶಾಲ ಮಹಿಮನೇ \\3\\
ನಂದೀಶ ಗಮನನೆ ವಂದಿಸುವೆ ಇಂದ್ರಾದಿಸುರರೊಡೆಯ ನೀಡಿದೆಯೊ ಗೌತುಮ
ರಂದ ಮಾಡಿದ ತಪಕೆ ಒಲಿದಭಯ ಮನಮಂದಿರದಿ ಗೋವಿಂದನಂಘ್ರಿಯ ಕಾಂಬುವೊ ಬಗೆಯ ತೋರೆನಗೆ ಜೀಯ\\4\\
ಶ್ರೀಶ್ವೇತಗಿರಿ ಸುಕ್ಷೇತ್ರ ಪಂಚ ಕ್ರೋಶಗನು ನೀನೆ ಸರ್ವೇಶ ಕಾರ್ಪರ ವಾಸಸಿರಿ ನರಕೇಸರಿಗೆ ಪ್ರಿಯನೇ
ದುರ್ವಿಷಯದಲಿ ಅಭಿಲಾಷೆ ಪುಟ್ಟಿಸದಂತೆ ಶಶಿಧರನೆ ಸಿರಿವ್ಯಾಸಕುವರನೇ\\5\\
No comments:
Post a Comment