ಎಂತು ನಾತುತಿಸಲಿ ಯತಿವರ
ಚರ್ಯನಾಮುಗಿವೆನು ಕೈಯ್ಯಾ ಪ
ಮಂತ್ರಸದನ ಪದ ಚಿಂತಕ ಶ್ರೀ ರಘು ಕಾಂತಕರಜ ರಘು
ದಾಂತ ಯತೀಂದ್ರರ ಅ.ಪ
ಅಂತರಂಗದಿ ಸಂತತ ಶ್ರೀಹರಿಯ ಚಿಂತಿಸುತಲಿ ಭೂಮಿಯ
ಕಾಂತ ದಂಷ್ಟ್ರದಿ ಸಂಜನಿಸಿದ ನದಿಯ ಸಂಗಮ ಶುಭನಿಲಯ
ಶಾಂತದಾಂತ ಧೀಮಂತರೆನಿಸುತ ದಿಗಂತರದಲಿ
ವಿಶ್ರಾಂತ ಸುಮಹಿಮರ 1
ಮೇದಿನಿ ಜಾತ ಪತಿ ಲಕ್ಷ್ಮಣರ ಪಾದಾಂಬುಜ ಮಧುಪರ
ಮೋದಾಶ್ರು ಸುರಿಸುತ ಪೂಜಿಸಿದವರ ಪುಲಕೀತ ವಿಗ್ರಹರ
ವಾದಿವಾರಣ ಮೃಗಾಧಿಪರೆನಿಸುತ ಮೋದತೀರ್ಥ ಸುಮ
ತೋದಧಿ ಚಂದಿರ 2
ಇಳಿಯೊಳು ಚರಿಸುತ ಬುಧ ಜನರನ್ನು ಚಲಿಸುತ ಛಾತ್ರರನು
ತಿಳಿಸೀ ಸಚ್ಛಾಸ್ತ್ರವ ಮರ್ಮಗಳನ್ನು ಉದ್ಧರಿಸ್ಯವರನ್ನು
ಯಳಮೇಲಾರ್ಯರ ಒಲುಮೆ ಪಡೆದು ಭವ
ಜಲಧಿಯ ದಾಟಿದ ಕಲುಷ ವಿದೂರರ 3
ಪ್ರಥಮಾಶಿಲೆ ಕ್ಷೇತ್ರದೊಳಿಹ ಗುರುವಿಜಯ
ದಾಸರ ಶುಭಚರಿಯ
ಸ್ತುತಿಸಿ ಶೇವಿಸಿ ಪಡೆದರು ಗುರುಕೃಪೆಯ ನೋಳ್ಪರಿಗಾಶ್ಚರ್ಯ
ನತ ಜನರಘ ಪರ್ವತ ಪವಿ ಸನ್ನಿಭ
ಕ್ಷಿತಿ ಸುರತತಿ ಸೇವಿತ ಪದ ಪದ್ಮರ 4
ಕ್ಷೋಣಿಯೊಳು ಕಾಣೆ ನಿವರಿಗೆ ಸಮಾನ
ಜಾಣ ಮಾನವರನ
ಸಾನುರಾಗದಿ ಧ್ಯಾನಿಸಲಿವರನ್ನ ಕಾಮಿತ ಗರಿವರನ
ಶ್ರೀನಿಧಿ ಕಾರ್ಪರ ಸ್ಥಾನಗ ನರಪಂಚನನನೊಲಿಸಿದ
ಮೌನಿವರೇಣ್ಯರ 5
No comments:
Post a Comment