Monday, 30 September 2019

ತೊರೆದು ಜೀವಿಸಬಹುದೆ toredu jeevisabahude

ತೊರೆದು ಜೀವಿಸಬಹುದೆ
ಹರಿ ನಿನ್ನ ಚರಣಗಳ‌
ಬರಿದೇ ಮಾತೇಕಿನ್ನೂ
ಅರಿತು ಪೇಳುವೆನಯ್ಯ... ||ಪ||

ತಾಯಿ ತಂದೆಯ ಬಿಟ್ಟು
ತಪವ ಮಾಡಲುಬಹುದು
ದಾಯಾದಿ ಬಂಧುಗಳ ಬಿಡಲುಬಹುದು
ರಾಯ ತಾ ಮುನಿದರೆ
ರಾಜ್ಯವನೆ ಬಿಡಬಹುದು
ಕಾಯಜಾ ಪಿತನಿನ್ನ ಅಡಿಯ ಬಿಡಲಾಗದು... ||೧||

ಒಡಲು ಹಸಿದರೆ ಮತ್ತೆ
ಅನ್ನವನೆ ಬಿಡಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳ ಕಡೆಗೆ
ತೊಲಗಿಸಿಯೆ ಬಿಡಬಹುದು
ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು...||೨||

ಪ್ರಾಣವನು ಪರರು
ಬೇಡಿದರೆತ್ತಿ ಕೊಡಬಹುದು
ಮಾನಾಭಿಮಾನವ ತಗ್ಗಿಸಲುಬಹುದು
ಪ್ರಾಣದಾಯಕಾನಾದ ಆದಿಕೇಶವರಾಯ‌
ಜಾಣ ಶ್ರೀ ಕೃಷ್ಣ ನಿನ್ನಡಿಯ‌ ಬಿಡಲಾಗದು....||೩

ನೀ ಮಾಯೆಯೊಳಗೊ nee mayeyolagu


ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೂ
ಬಯಲು ಆಲಯದೊಳಗೊ, ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ

ತೊಳಸದಕ್ಕಿಯ Tolasadakkiya

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|
ತನ್ನ ನೋಡೆನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರ್ಶನ ಕೊಡದೆ
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|
ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ

ಪವಮಾನ ಪವಮಾನ Pavamana pavamana

ಪವಮಾನ ಪವಮಾನ / ಜಗದ ಪ್ರಾಣಾ ಸಂಕರುಷಣಾ/ ಭವಭಯ ರಣ್ಯಾ ಧಹನಾ ಪವನಾ /
ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಜನ ಪ್ರಿಯಾ /ಅ.ಪ /
ಹೇಮ ಕಚ್ಚುಟ ಉಪವೀತ ಧರಿಪ ಮಾರುತಾ ಕಾಮಾದಿ ವರ್ಗರಹಿತಾ/ ವ್ಯೋಮಾದಿ ಸರ್ವವ್ಯಾಪೂತಾ ಸತತ ನಿರ್ಭಿತಾ ರಾಮಚಂದ್ರನ ನಿಜ ದೂತಾ ಽ ಯಾಮಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖ ಸ್ತೋಮವ ತೋರುತ ಪಾಮರ ಮತಿಯನು ನಿ ಮಾಣಿಪುದು /೧/
ವಜ್ರ ಶರೀರ ಗಂಭೀರಾ ಮುಕುಟ ಧರಾ ದುರ್ಜನ ವನಕುಟಾರಾ ನಿರ್ಜರ ಮಣಿದಯಪಾರಾ ವಾರ ಉಧ್ದಾರಾ ಸಜ್ಜನರಘ ಪರಿಹಾರಾ ಽ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗರಿವಂತೆ ಘರ್ಜನೆ ಮಾಡಿದೆ ಹೆಜ್ಜೆ ಹೆಜ್ಜೆಗೂ ನಿನ್ನಾಬ್ಜ ಪಾದ ಧೂಳಿ ಮಾರ್ಜನದಲಿ ಭವವರ್ಜಿತ ನೆನಿಸೊ /೨/

ಪ್ರಾಣ ಅಪಾನ ವ್ಯಾನ ಉದಾನ ಸಮಾನ ಆನಂದ ಭಾರತೀ ರಮಣಾ/ ನಿನೇ ಸರ್ವಾದಿ ಗಿರ್ವಾಣ ಆದ್ಯಮರರಿಗೆ ಜ್ಞಾನ ಧನ ಪಾಲಿಪ ವರೆಣ್ಯಾ ಽ ನಾನು ನಿರುತದಲಿ ಏನೇನೆಸಗುವ ಮಾನಸಾದಿ ಕರ್ಮ ನಿನಗೊಪ್ಪಿಸುವೆನು ಪ್ರಾಣನಾಥ ಶ್ರೀ ವಿಜಯ ವಿಠ್ಠಲನ ಕಾಣಿಸಿ ಕೊಡುವುದು ಭಾನುಪ್ರಕಾಶ /೩/

ನವರಾತ್ರಿ ದಂತಕಥೆ Navaratri Story

ಉತ್ತರ ಭಾರತದಲ್ಲಿ ನವರಾತ್ರಿ ಬಗ್ಗೆ ಇರುವ ದಂತಕಥೆ
ಉತ್ತರ ಹಾಗೂ ಪೂರ್ವೋತ್ತರ ಭಾರತದಲ್ಲಿ ನವರಾತ್ರಿ ಬಗ್ಗೆ ವಿವಿಧ ದಂತಕಥೆಗಳು ಇವೆ. ಉತ್ತರ ಭಾರತದ ದಂತಕಥೆಯ ಪ್ರಕಾರ ಶಿವನ ಭಕ್ತನಾಗಿದ್ದ ಮಹಿಷಾಸುರ ಘೋರ ತಪಸ್ಸು ಮಾಡಿ ಶಿವನಿಂದ ಅಮರನಾಗುವ ವರ ಪಡೆಯುತ್ತಾನೆ. ಮಹಿಷಾಸುರ ಜನರನ್ನು ಹಿಂಸಿಸುತ್ತಾನೆ ಮತ್ತು ಮೂರು ಲೋಕದ ಮೇಲೆ ತನ್ನ ಸಾಮ್ರಾಜ್ಯ ಕಟ್ಟುತ್ತಾನೆ. ಸ್ವರ್ಗಲೋಕದ ದೇವದೇವತೆಗಳೆಲ್ಲರೂ ಬಂದು ಶಿವನಲ್ಲಿ ತಮ್ಮ ಸಂಕಷ್ಟ ಹೇಳಿಕೊಳ್ಳುವರು ಮತ್ತು ತಮ್ಮ ರಾಜ್ಯ ಮರಳಿ ನೀಡಬೇಕೆಂದು ಪ್ರಾರ್ಥಿಸುವರು. ಮಹಿಷಾಸುರನ ಹಿಂಸೆಯಿಂದ ಮೂರು ಲೋಕಗಳನ್ನು ರಕ್ಷಿಸಲು ತ್ರಿಮೂತ್ರಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಜತೆಯಾಗಿ ದುರ್ಗೆಯ ಸ್ಥಾಪಿಸುವರು.
ದುರ್ಗೆಯ ಸೌಂದರ್ಯಕ್ಕೆ ಮಾರುಹೋದ ಮಹಿಷಾಸುರ ತನ್ನನ್ನು ಮದುವೆಯಾಗಬೇಕೆಂದು ಆಕೆಯನ್ನು ಕೇಳಿಕೊಳ್ಳುತ್ತಾನೆ. ದುರ್ಗೆಯು ಇದಕ್ಕೆ ತಯಾರಾಗುತ್ತಾಳೆ. ಆದರೆ ತನ್ನ ವಿರುದ್ಧ ಯುದ್ಧ ಗೆಲ್ಲಬೇಕೆಂದು ಆಕೆ ಹೇಳುತ್ತಾಳೆ. ಈ ಯುದ್ಧವು ಒಂಭತ್ತು ದಿನಗಳ ಕಾಲ ನಡೆಯಿತು ಮತ್ತು 9ನೇ ದಿನದಂದು ದುರ್ಗೆಯು ಮಹಿಷಾಸುರನನ್ನು ವಧೆ ಮಾಡಿದಳು. ಈ 9 ದಿನಗಳನ್ನು ನವರಾತ್ರಿ ಎಂದು ಕರೆಯಲಾಗುತ್ತದೆ. 9ನೇ ಹಾಗೂ ಕೊನೆಯ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ದುಷ್ಟ ಶಕ್ತಿ ವಿರುದ್ಧ ಒಳ್ಳೆಯದ ವಿಜಯ. 
ಭಾರತದಲ್ಲಿ ನವರಾತ್ರಿ ಬಗ್ಗೆ ಇರುವ ದಂತಕಥೆ




ಉತ್ತರ ಹಾಗೂ ಪೂರ್ವೋತ್ತರ ಭಾರತದಲ್ಲಿ ನವರಾತ್ರಿ ಬಗ್ಗೆ ವಿವಿಧ ದಂತಕಥೆಗಳು ಇವೆ. ಉತ್ತರ ಭಾರತದ ದಂತಕಥೆಯ ಪ್ರಕಾರ ಶಿವನ ಭಕ್ತನಾಗಿದ್ದ ಮಹಿಷಾಸುರ ಘೋರ ತಪಸ್ಸು ಮಾಡಿ ಶಿವನಿಂದ ಅಮರನಾಗುವ ವರ ಪಡೆಯುತ್ತಾನೆ. ಮಹಿಷಾಸುರ ಜನರನ್ನು ಹಿಂಸಿಸುತ್ತಾನೆ ಮತ್ತು ಮೂರು ಲೋಕದ ಮೇಲೆ ತನ್ನ ಸಾಮ್ರಾಜ್ಯ ಕಟ್ಟುತ್ತಾನೆ. ಸ್ವರ್ಗಲೋಕದ ದೇವದೇವತೆಗಳೆಲ್ಲರೂ ಬಂದು ಶಿವನಲ್ಲಿ ತಮ್ಮ ಸಂಕಷ್ಟ ಹೇಳಿಕೊಳ್ಳುವರು ಮತ್ತು ತಮ್ಮ ರಾಜ್ಯ ಮರಳಿ ನೀಡಬೇಕೆಂದು ಪ್ರಾರ್ಥಿಸುವರು. ಮಹಿಷಾಸುರನ ಹಿಂಸೆಯಿಂದ ಮೂರು ಲೋಕಗಳನ್ನು ರಕ್ಷಿಸಲು ತ್ರಿಮೂತ್ರಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಜತೆಯಾಗಿ ದುರ್ಗೆಯ ಸ್ಥಾಪಿಸುವರು.

ದುರ್ಗೆಯ ಸೌಂದರ್ಯಕ್ಕೆ ಮಾರುಹೋದ ಮಹಿಷಾಸುರ ತನ್ನನ್ನು ಮದುವೆಯಾಗಬೇಕೆಂದು ಆಕೆಯನ್ನು ಕೇಳಿಕೊಳ್ಳುತ್ತಾನೆ. ದುರ್ಗೆಯು ಇದಕ್ಕೆ ತಯಾರಾಗುತ್ತಾಳೆ. ಆದರೆ ತನ್ನ ವಿರುದ್ಧ ಯುದ್ಧ ಗೆಲ್ಲಬೇಕೆಂದು ಆಕೆ ಹೇಳುತ್ತಾಳೆ. ಈ ಯುದ್ಧವು ಒಂಭತ್ತು ದಿನಗಳ ಕಾಲ ನಡೆಯಿತು ಮತ್ತು 9ನೇ ದಿನದಂದು ದುರ್ಗೆಯು ಮಹಿಷಾಸುರನನ್ನು ವಧೆ ಮಾಡಿದಳು. ಈ 9 ದಿನಗಳನ್ನು ನವರಾತ್ರಿ ಎಂದು ಕರೆಯಲಾಗುತ್ತದೆ. 9ನೇ ಹಾಗೂ ಕೊನೆಯ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ದುಷ್ಟ ಶಕ್ತಿ ವಿರುದ್ಧ ಒಳ್ಳೆಯದ ವಿಜಯ.



ಉತ್ತರ ಭಾರತದಲ್ಲಿ ನವರಾತ್ರಿಯ ಇತಿಹಾಸ
ದಂತಕಥೆಯ ಪ್ರಕಾರ ಹಿಮಾಲಯದ ರಾಜನಾಗಿ ದಕ್ಷನಿಗೆ ಉಮಾ ಎನ್ನುವ ಅಪೂರ್ವ ಸುಂದರಿ ಮಗಳಿದ್ದಳು. ಇವಳು ಶಿವ ದೇವರನ್ನು ಮದುವೆಯಾಗಲು ಬಯಸಿದ್ದಳು. ಆತನನ್ನು ಓಲೈಸಿಕೊಳ್ಳಲು ಆಕೆ ಆತನನ್ನು ಪ್ರಾರ್ಥಿಸಲು ಆರಂಭಿಸಿದಳು ಮತ್ತು ಅಂತಿಮವಾಗಿ ಆತನನ್ನು ಓಲೈಸಿದಳು. ಶಿವ ದೇವರು ಉಮಾಳನ್ನು ಮದುವೆಯಾಗಲು ಬಂದಾಗಳ ಕೇವಲ ಹುಲಿ ಚರ್ಮ ಸುತ್ತಿಕೊಂಡಿದ್ದರು. ಇದರಿಂದ ದಕ್ಷ ಕುಪಿತಗೊಂಡು ಉಮಾ ಮತ್ತು ಆಕೆಯ ಪತಿಯೊಂದಿಗೆ ಯಾವುದೇ ಸಂಬಂಧವಿಟ್ಟುಕೊಳ್ಳಲು ಬಯಸಲಿಲ್ಲ.
ಇದರ ಬಳಿಕ ದಕ್ಷ ರಾಜ ದೊಡ್ಡ ಯಜ್ಞವೊಂದನ್ನು ಆಯೋಜಿಸಿದ. ಇದಕ್ಕೆ ಶಿವನನ್ನು ಬಿಟ್ಟು ಎಲ್ಲರನ್ನೂ ಆಹ್ವಾನಿಸಿದ. ಇದರಿಂದ ಕುಪಿತಳಾದ ಉಮಾ ಯಜ್ಞಕುಂಡದ ಅಗ್ನಿಗೆ ಜಿಗಿದು ತನ್ನ ಪ್ರಾಣ ಕಳೆದುಕೊಳ್ಳಬೇಕೆಂದು ನಿರ್ಧರಿಸಿದಳು. ಉಮಾ ಮರುಜನ್ಮ ಪಡೆದು ಮತ್ತೆ ಶಿವನನ್ನು ಮದುವೆಯಾದಳು. ಈ ದಿನದಿಂದ ಉಮಾ ತನ್ನ ತವರು ಮನೆಗೆ ಲಕ್ಷ್ಮೀ, ಸರಸ್ವತಿ, ಕಾರ್ತಿಕ ಮತ್ತು ಗಣೇಶ ಹಾಗೂ ಸ್ನೇಹಿತೆಯರಾದ ಜಯ ಮತ್ತು ವಿಜಯದೊಂದಿಗೆ ಬರುತ್ತಾಳೆಂಬ ಪ್ರತೀತಿಯಿದೆ.
ರಾಮ ಮತ್ತು ರಾಮನನ ದಂತಕಥೆ
ನವರಾತ್ರಿಯು ರಾಮಾಯಣಕ್ಕೂ ಒಂದು ಸಂಬಂಧವಿದೆ ಎಂದು ಪುರಾಣಗಳು ಹೇಳುತ್ತವೆ. ರಾವಣನೆಂಬ ಬಲಶಾಲಿ ರಾಕ್ಷಸನನ್ನು ವಧೆ ಮಾಡಲು ರಾಮನು ಒಂಬತ್ತು ದಿನಗಳ ಕಾಲ ದುರ್ಗೆಯ ಪೂಜೆ ಮಾಡಿ ಆಕೆಯಿಂದ ಶಕ್ತಿ ಹಾಗೂ ಬಲ ಪಡೆದ ಎನ್ನಲಾಗುತ್ತದೆ. ಸೀತೆಯನ್ನು ಅಪಹರಿಸಿದ್ದ ರಾವಣನನ್ನು ಇದರ ಬಳಿಕ ರಾಮ ವಧಿಸಿದ. ಒಂಬತ್ತು ದಿನ ಕಾಲ ನವರಾತ್ರಿ ಎಂದು ಕರೆಯಲಾಗುವುದು ಮತ್ತು ರಾಮನು ರಾವಣನನ್ನು ಅಂತಿಮ ದಿನ ವಧಿಸಿದ.
ಈ ದಿನವನ್ನು ದಸರಾ ಅಥವಾ ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ರಾವಣನಂತಹ ದುಷ್ಟ ರಾಕ್ಷಸನ ಮೇಲೆ ರಾಮನ ಗೆಲುವನ್ನು ತೋರಿಸುತ್ತದೆ. ನವರಾತ್ರಿಯು ದೀಪಾವಳಿಗೆ ನಾಂದಿಯಾಗಿದೆ. ಬೆಳಕಿನ ಹಬ್ಬ ದೀಪಾವಳಿಯು ದಸರಾದ 20 ದಿನಗಳ ಬಳಿಕ ಬರುತ್ತದೆ. ನವರಾತ್ರಿಯನ್ನು ದೇಶದೆಲ್ಲೆಡೆ ತುಂಬಾ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ.


Sunday, 29 September 2019

ತುಳಸಿ ವಿವಾಹ ಪೌರಾಣಿಕ ಹಿನ್ನೆಲೆ Tulasi vivaah story

ಪೌರಾಣಿಕ ಹಿನ್ನೆಲೆ
ಇನ್ನೊಂದು ಪುರಾಣ ಕಥೆಯ ಪ್ರಕಾರ, ವೃಂದಾಳೆಂಬ ಯುವತಿ, ಜಲಂಧರನೆಂಬ ದುಷ್ಟ ರಾಕ್ಷ ಸನನ್ನು ಮದುವೆಯಾಗುತ್ತಾಳೆ. ವೃಂದೆ ತಪಸ್ಸು ಮಾಡಿ, ಲಕ್ಷ್ಮೀನಾರಾಯಣರು ಸದಾ ತಮ್ಮ ಮನೆಯಲ್ಲಿ ನೆಲೆಗೊಳ್ಳಲೆಂಬ ವರವೊಂದನ್ನು ಪಡೆದಿದ್ದಳು. ಪತಿವ್ರತೆಯಾದ ವೃಂದಾಳ, ತಪಃಶಕ್ತಿಯ ಪ್ರಭಾವದಿಂದ ಜಲಂಧರನಿಗೆ ಸೋಲೆಂಬುದೇ ಇರಲಿಲ್ಲ. ಅಹಂಕಾರ, ಅಧರ್ಮಗಳ ಪ್ರತಿರೂಪವೆನಿಸಿದ ಜಲಂಧರ, ದೇವತೆಗಳ ಮೇಲೆ ಯುದ್ಧ ಸಾರುತ್ತಾನೆ. ಋುಷಿ, ಮುನಿಗಳ ಯಜ್ಞ-ಹವನಾದಿಗಳಿಗೆ ಭಂಗ ತರುತ್ತಾನೆ. ಈತನ ಉಪಟಳ ತಾಳಲಾರದ ದೇವತೆಗಳು ಪರಿಹಾರಕ್ಕಾಗಿ, ವಿಷ್ಣುವಿನ ಮೊರೆ ಹೋಗುತ್ತಾರೆ. ವಿಷ್ಣು ಜಲಂಧರ ರಾಕ್ಷ ಸನ ವೇಷದಲ್ಲಿ ಬಂದು, ವೃಂದಾಳ ಪಾತಿವೃತ್ಯವನ್ನು ಭಂಗ ಮಾಡಿ, ಜಲಂಧರನನ್ನು ಸಂಹರಿಸುತ್ತಾನೆ. ಕುಪಿತಗೊಂಡ, ವೃಂದಾ, ವಿಷ್ಣುವಿಗೆ, ಪತ್ನಿ ವಿಯೋಗವಾಗಲೆಂಬ ಶಾಪವನ್ನಿತ್ತು, ಪತಿಯೊಂದಿಗೆ ಚಿತೆಯೇರುತ್ತಾಳೆ. ರಾಮಾಯಣದಲ್ಲಿ, ವಿಷ್ಣುವಿನ ಅವತಾರವಾಗಿರುವ ರಾಮನಿಗೆ ಸೀತಾ ವಿಯೋಗವಾಗುವುದನ್ನು ಇಲ್ಲಿ ಸ್ಮರಿಸಬಹುದು. ಪಾರ್ವತಿ ದೇವಿ, ವೃಂದೆಯ ಚಿತೆಯ ಸುತ್ತಲೂ ತುಳಸಿ, ನೆಲ್ಲಿ, ಹುಣಸೆ ಗಿಡಗಳನ್ನು ನಿರ್ಮಿಸಿ, ವೃಂದಾವನವೊಂದನ್ನು ನಿರ್ಮಿಸಿದಾಗ, ನಳನಳಿಸಿ ಬೆಳೆದ ತುಳಸಿಯನ್ನು ವಿಷ್ಣು ವರಿಸುತ್ತಾನೆಂದು ಪ್ರತೀತಿಯಿದೆ. ಮುಂದೆ, ತುಳಸಿ ಮಾತೆಯೇ ರುಕ್ಮಿಣಿಯಾಗಿ ಜನಿಸಿ, ತುಳಸಿ ವಿವಾಹದ ದಿನವಾದ ಉತ್ಥಾನ ದ್ವಾದಶಿಯಂದು ಕೃಷ್ಣನನ್ನು ವರಿಸುತ್ತಾಳೆ. ಈ ವಿವಾಹೋತ್ಸವದ ಸ್ಮರಣೆಯನ್ನೇ ತುಳಸಿ ವಿವಾಹವೆಂದು ಆಚರಿಸುವ ಸಂಪ್ರದಾಯ ಬೆಳೆದು ಬಂದಿದೆ

Friday, 27 September 2019

ದಾಸನ ಮಾಡಿಕೊ ಎನ್ನ Dasana madiko enna

ದಾಸನ ಮಾಡಿಕೊ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟರಮಣ
ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ಹರಣಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ||೧||
ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ ||||
ಮೊರೆಹೊಕ್ಕವರ ಕಾಯುವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು ಸಿರಿ
ಪುರಂದರ ವಿಠಲ ಎನ್ನನು ಪೊರೆದು

ಬಲಿಪಾಡ್ಯಮಿ Balipadyami


ಬಲಿಪಾಡ್ಯಮಿ


ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ |
ಇಂದ್ರಶತ್ರೋ ಅಮರಾವತೇ ವಿಷ್ಣುಸಾನ್ನಿಧ್ಯತೋ ಭವ |
बलिराज नमस्तुभ्यं दैत्यदानव वंदित ।
इंद्रशत्रो अमरावते विष्णुसान्निध्यतो भव ।

ಬಲಿಪಾಡ್ಯಮಿಯ ವಿಶೇಷತೆ ಏನು ?
ಪರಮಾತ್ಮನು ಕಶ್ಯಪ ಅದಿತಿಗಳ ಪ್ರಾರ್ಥನೆಯಂತೆ ಅವರ ಮಗನಾಗಿ ವಾಮನನಾಗಿ ಅವತರಿಸಿ, ಇಂದ್ರಾದಿ ದೇವತೆಗಳಿಗೆ ಕಂಟಕನಾಗಿದ್ದ ದೈತ್ಯಚಕ್ರವರ್ತಿ ಬಲಿಚಕ್ರವರ್ತಿಯನ್ನು ನಿಗ್ರಹಿಸಿ, ಅವನಿಂದ ಮೂರು ಹೆಜ್ಜೆ ದಾನ ಪಡೆದು ಅವನನ್ನು ಸುತಳ ಲೋಕಕ್ಕೆ ಅಟ್ಟಿ, ಅಲ್ಲಿ ಅವನ ಮನೆ ಬಾಗಿಲಲ್ಲೇ ನಿಂತ ದಿನವೇ ಬಲಿಪಾಡ್ಯಮಿ. ಇದನ್ನು ಕಾರ್ತೀಕ ಶುದ್ಧ ಪ್ರತಿಪತ್ ದಿನದಂದು ಆಚರಿಸಲಾಗುತ್ತದೆ. ಬಲಿಯ ಪ್ರಾರ್ಥನೆಯಂತೆ ಈ ದಿನವನ್ನು ಅವನ ಹೆಸರಿನಿಂದ ಪ್ರಖ್ಯಾತಿಗೊಳಿಸಿ ಅನುಗ್ರಹಿಸಿದ ವಾಮನರೂಪಿ ಹರಿಯು. ಈ ದಿನದಂದು ವಿಶೇಷ ಕಾರ್ಯಗಳಿಗೆ ಮುಹೂರ್ತವನ್ನು ನೋಡಬೇಕಾಗಿಲ್ಲ. ಸ್ವಯಂಸಿದ್ಧ 3½ ಮುಹೂರ್ತಗಳಲ್ಲಿ ಅರ್ಧ ಮುಹೂರ್ತ ಬಲಿಪಾಡ್ಯಮಿಯೆಂದು ಪ್ರಸಿದ್ಧ. ಉಳಿದ ಮೂರು ಮುಹೂರ್ತಗಳು ವಿಜಯದಶಮಿ, ಅಕ್ಷಯತೃತೀಯ, ಮತ್ತು ಯುಗಾದಿ. ಬಲಿಪಾಡ್ಯಮಿಯಂದು ಅರ್ಧದಿನದವರೆಗೂ ಸ್ವಯಂಸಿದ್ಧ ಮುಹೂರ್ತವಾಗಿದ್ದು, ಇಂದೂ ಕೂಡ ತೈಲಾಭ್ಯಂಜನವನ್ನು ಮಾಡಬೇಕು. ಮತ್ತು ಈ ದಿನ ದೀಪದಾನ, ಗೋದಾನ, ವಸ್ತ್ರದಾನ, ಮಂಗಳವಸ್ತ್ರಗಳ ದಾನ ಮಾಡಿದರೆ ವಾಮನ ರೂಪಿ ಪರಮಾತ್ಮನು ಸುಪ್ರೀತನಾಗುತ್ತಾನೆ. ಈದಿನ ದೀಪಪ್ರಜ್ವಲವನ್ನು ಮಾಡುವುದರಿಂದ ಲಕ್ಷ್ಮೀದೇವಿಯು ಸುಪ್ರೀತಳಾಗಿ ಸ್ಥಿರವಾಗಿ ನೆಲೆಸುತ್ತಾಳೆ.


ಯಾರು ಈ ಬಲಿಚಕ್ರವರ್ತಿ –
ಯಾರು ಈ ಬಲಿಚಕ್ರವರ್ತಿ – ಕಶ್ಯಪ ದಿತಿಗಳ ವಂಶದಲ್ಲಿ ಬಂದ ಪ್ರಹ್ಲಾದರಾಜರ ಮೊಮ್ಮಗನೇ ಈ ಬಲಿಚಕ್ರವರ್ತಿ. ಹಿರಣ್ಯಕಶಿಪುವಿನ ಮಗ ಪ್ರಹ್ಲಾದರಾಜರು – ಅವರ ಮಗ ವಿರೋಚನ – ಅವರ ಮಗನೇ ಬಲಿಚಕ್ರವರ್ತಿ. ಬಲಿಯ ಮಗ ಬಾಣಾಸುರ. ಬಲಿಯ ನಿಜವಾದ ಹೆಸರು ಇಂದ್ರಸೇನ. ಇವನು ದೈತ್ಯಕುಲದಲ್ಲಿ ಹುಟ್ಟಿದ್ದರೂ ತನ್ನ ಆಡಳಿತದಲ್ಲಿ ಧರ್ಮನಿಷ್ಟೆ ಮತ್ತು ದಾನದಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ. ಸಮುದ್ರಮಥನ ಕಾಲದಲ್ಲಿ ದೈತ್ಯರ ಗುಂಪಿನ ನಾಯಕನಾಗಿದ್ದವನು ಈ ಬಲಿಚಕ್ರವರ್ತಿಯೇ.  ಮುಂದಿನ ಸಾವರ್ಣಿ ಮನ್ವಂತರದಲ್ಲಿ ಇಂದ್ರಪದವಿಗೆ ಬರುವವನು ಈ ಬಲಿಯೇ.
ಬಲಿಚಕ್ರವರ್ತಿಯು ಇಡೀ ವಿಶ್ವವನ್ನೇ ತನ್ನ ಹದಬಸ್ತಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ, ಇಂದ್ರಲೋಕವನ್ನೂ ಆಕ್ರಮಿಸಿ, ಇಂದ್ರನನ್ನು ಕೆಳಗಿಳಿಸಿದನು. ತಾನೇ ಇಂದ್ರನಾಗಲು ಉದ್ಯುಕ್ತನಾಗಿ, 100 ಅಶ್ವಮೇಧ ಯಾಗವನ್ನು ಮಾಡಲು ಆರಂಭಿಸಿ, 99 ಯಾಗವನ್ನು ಪೂರೈಸಿದನು. 100ನೇ ಯಾಗವನ್ನು ದೈತ್ಯಗುರು ಶುಕ್ರಾಚಾರ್ಯರ ನೇತೃತ್ವದಲ್ಲಿ ಆರಂಭಿಸಿದನು. ಆಗ ಇಂದ್ರನಾಗಿದ್ದ ಪುರಂದರನೆಂಬ ಇಂದ್ರನು ತನ್ನ ಹುದ್ದೆ ಕಳೆದುಕೊಳ್ಳುವ ಭೀತಿಯಿಂದ ಶ್ರೀಹರಿಯನ್ನು ಪ್ರಾರ್ಥಿಸಿದನು. ಅದೇ ಸಂದರ್ಭದಲ್ಲಿ ಅದಿತಿಯೂ ಪರಮಾತ್ಮನನ್ನು ತನ್ನ ಮಗನಾದ ಪುರಂದರನಿಗೆ ಇಂದ್ರಪದವಿಯನ್ನು ಉಳಿಸಿಕೊಡಲು ಪ್ರಾರ್ಥಿಸಿ, ಕಠಿಣ ವ್ರತಗಳ ಮಾಡಲು, ಅವರ ಪ್ರಾರ್ಥನೆಯಂತೆ, ದೇವತೆಗಳ ಪ್ರಾರ್ಥನೆಯಂತೆ, ದುಷ್ಟ ಬಲಿಯ ನಿಗ್ರಹಿಸಲು ಕಶ್ಯಪ ಅದಿತಿಗಳ ಮಗನಾಗಿ ಜನಿಸಿದನು.
ಬಲಿಯ ನೂರನೇ ಅಶ್ವಮೇಧ ಯಾಗ ಮುಕ್ತಾಯ ಹಂತದಲ್ಲಿದ್ದಾಗ ವಾಮನರೂಪಿ ಪರಮಾತ್ಮನು ಯಾಗ ಮಂಟಪ ಪ್ರವೇಶಿಸಿದನು. ಅತಿ ಸುಂದರ ಬ್ರಹ್ಮಚಾರಿಯ ದರ್ಶನದಿಂದ ಪುಳಕಿತನಾದ ಬಲಿಯು ಅವನಿಗೆ ನಮಸ್ಕರಿಸಿ, ಪಾದಪ್ರಕ್ಷಾಲನೆ ಮಾಡಿ, ನಿನಗೆ ಏನು ಬೇಕೆಂದು ಕೇಳಿದನು. ವಾಮನನಾದರೋ ನನಗೆ ಏನೂ ಬೇಡ, ಕೇವಲ ತನ್ನ ಮೂರು ಹೆಜ್ಜೆ ಭೂಮಿಯನ್ನು ನೀಡಿದರೆ ಸಾಕೆನಲು, ಗುರು ಶುಕ್ರಾಚಾರ್ಯರು ಎಚ್ಚರಿಸಿದರೂ ಕೇಳದೆ ಆ ಮೂರು ಹೆಜ್ಜೆ ಭೂಮಿಯನ್ನು ನೀಡಲು ಉದ್ಯುಕ್ತನಾದನು. ತನ್ನ ಮೊದಲ ಹೆಜ್ಜೆಯಿಂದ ಪರಮಾತ್ಮನು ಇಡೀ ಭೂಲೋಕವನ್ನೇ ಆಕ್ರಮಿಸಿ, ತನ್ನ ಎರಡನೇ ಹೆಜ್ಜೆಯಿಂದ ತ್ರಿವಿಕ್ರಮನಾಗಿ ಬೆಳೆದು, ಆಕಾಶವನ್ನೂ ಆಕ್ರಮಿಸಿ, ಮೂರನೇ ಹೆಜ್ಜೆ ಎಲ್ಲಿಡಲೆಂದು ಪ್ರಶ್ನಿಸಿದಾಗ, ತನ್ನ ತಲೆಯನ್ನೇ ತೋರಿದ ಬಲಿಚಕ್ರವರ್ತಿ. ಬ್ರಹ್ಮದೇವರಿಂದ ಪ್ರಾರ್ಥಿತನಾದ ಪರಮಾತ್ಮನು ತನ್ನ ಪಾದಕಮಲವನ್ನು ಬಲಿಯ ತಲೆಯ ಮೇಲಿಟ್ಟು, ಅವನನ್ನು ಪಾತಾಳ ಲೋಕಕ್ಕೆ ತಳ್ಳಿ, ಅಲ್ಲಿ ತನ್ನದೇ ಒಂದು ರೂಪದಿಂದ – ಉಪೇಂದ್ರರೂಪದಿಂದ ಈಗಲೂ ಬಲಿಯ ಮನೆ ಕಾಯುತಿಹನು, ಮತ್ತು ಅವನಿಗೆ ಮುಂದಿನ ಮನ್ವಂತರದಲ್ಲಿ ನೀನೇ ಇಂದ್ರನಾಗೆಂದು ಅನುಗ್ರಹಿಸಿದನು.


ಬಲಿಪಾಡ್ಯಮಿ ಮಾಡಬೇಕಾದ್ದು –
ಅಭ್ಯಂಜನ ಸ್ನಾನ. ಯಥಾ ಶಕ್ತಿ ದಾನ ಮಾಡಬೇಕು. ದೀಪ ಪ್ರಜ್ವಲನ, ಮತ್ತು ದೀಪ ದಾನ / ವಸ್ತ್ರ ದಾನ, ಮಂಗಳ ವಸ್ತ್ರ ದಾನ ಮಾಡಬೇಕು.
ಬಲಿಪೂಜಾಕ್ರಮ –
ರಂಗೋಲಿಯಿಂದ ಬಲಿಪ್ರತಿಮೆ ಚಿತ್ರವನ್ನು ಬರೆಯಬೇಕು
ಅಥವಾ ಗೋಮಯದಿಂದ ಚಿತ್ರವನ್ನು ಬರೆಯಬಹುದು.
ಆಚಮನ, ಪ್ರಾಣಾನಾಯಮ್ಯ,
ನಂತರ ಬಲಿಯನ್ನು ಮತ್ತು ಅವನ ಅಂತರ್ಗತನಾದ ವಾಮನರೂಪಿ ಪರಮಾತ್ಮನನ್ನೂ ಆವಾಹಿಸಬೇಕು.
ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ |
ಇಂದ್ರಶತ್ರೋ ಅಮರಾರಾತೇ ವಿಷ್ಣುಸಾನ್ನಿಧ್ಯದೋ ಬವ: ||
ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ: |
ಭವಿಷ್ಯೇಂದ್ರ ಸುರಾರಾತೇ ಪೂಜೋಽಯಂ ಪ್ರತಿಗೃಹ್ಯತಾಂ

Thursday, 26 September 2019

ರಾಘವೇಂದ್ರ ಕವಚಂ Raghavendra Kavacham

ಕವಚಂ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನಃ |
ವಕ್ಷ್ಯಾಮಿ ಗುರುವರ್ಯಸ್ಯ ವಾಂಛಿತಾರ್ಥಪ್ರದಾಯಕಮ್        || ೧ ||
ಋಷಿರಸ್ಯಾಪ್ಪಣಾಚಾರ್ಯಃ ಛಂದೋsನುಷ್ಟುಪ್ ಪ್ರಕೀರ್ತಿತಮ್ |
ದೇವತಾ ಶ್ರೀರಾಘವೇಂದ್ರಗುರುರಿಷ್ಟಾರ್ಥಸಿದ್ಧಯೇ            || ೨ ||
ಅಷ್ಟೋತ್ತರಶತಂ ಜಪ್ಯಂ ಭಕ್ತಿಯುಕ್ತೇನ ಚೇತಸಾ |
ಉದ್ಯತ್ಪ್ರದ್ಯೋತನದ್ಯೋತಭರ್ಮಕೂರ್ಮಾಸನೇ ಸ್ಥಿತಮ್        || ೩ ||
ಏದ್ಯಖದ್ಯೋತನದ್ಯೋತಪ್ರತಾಪಂ ರಾಮಮಾನಸಮ್ |
ಧೃತಕಾಷಾಯವಸನಂ ತುಲಸೀಹಾರವಕ್ಷಸಮ್            || ೪ ||
ದೋರ್ದಂಡವಿಲಸದ್ದಂಡಕಮಂಡಲುವಿರಾಜಿತಮ್ |
ಅಭಯeನಮುದ್ರಾಕ್ಷಮಾಲಾಶೀಲಕರಾಂಬುಜಮ್            || ೫ ||
ಯೋಗೀಂದ್ರವಂದ್ಯಪಾದಾಬ್ಜಂ ರಾಘವೇಂದ್ರಗುರುಂ ಭಜೇ |
ಶಿರೋ ರಕ್ಷತು ಮೇ ನಿತ್ಯಂ ರಾಘವೇಂದ್ರೋsಖಿಲೇಷ್ಟದಃ        || ೬ ||
ಪಾಪಾದ್ರಿಪಾಟನೇ ವಜ್ರಃ ಕೇಶಾನ್ ರಕ್ಷತು ಮೇ ಸದಾ |
ಕ್ಷಮಾಸುರಗಣಾಧೀಶೋ ಮುಖಂ ರಕ್ಷತು ಮೇ ಗುರುಃ        || ೭ ||
ಹರಿಸೇವಾಲಬ್ಧಸರ್ವಸಂಪತ್ಫಾಲಂ ಮಮಾವತು |
ದೇವಸ್ವಭಾವೋsವತು ಮೇ ದೃಶೌ ತತ್ತ ಪ್ರದರ್ಶಕಃ        || ೮ ||
ಇಷ್ಟಪ್ರದಾನೇ ಕಲ್ಪದ್ರುಃ ಶ್ರೋತ್ರೇ ಶ್ರುತ್ಯರ್ಥಬೋಧಕಃ |
ಭವ್ಯಸ್ವರೂಪೋ ಮೇ ನಾಸಾಂ ಜಿಹ್ವಾಂ ಮೇsವತು ಭವ್ಯಕೃತ್        || ೯ ||
ಆಸ್ಯಂ ರಕ್ಷತು ಮೇ ದುಃಖತೂಲಸಂಘಾಗ್ನಿಚರ್ಯಕಃ |
ಸುಖಧೈರ್ಯಾದಿಸುಗುಣೋ ಭ್ರುವೌ ಮಮ ಸದಾsವತು        || ೧೦ ||
ಓಷ್ಠೌ ರಕ್ಷತು ಮೇ ಸರ್ವಗ್ರಹನಿಗ್ರಹಶಕ್ತಿಮಾನ್ |
ಉಪಪ್ಲವೋದಧೇಸ್ಸೇತುರ್ದಂತಾನ್ ರಕ್ಷತು ಮೇ ಸದಾ        || ೧೧ ||
ನಿರಸ್ತದೋಷೋ ಮೇ ಪಾತು ಕಪೋಲೌ ಸರ್ವಪಾಲಕಃ |
ನಿರವದ್ಯಮಹಾವೇಷಃ ಕಂಠಂ ಮೇsವತು ಸರ್ವದಾ            || ೧೨ ||
ಕರ್ಣಮೂಲೇ ತು ಪ್ರತ್ಯರ್ಥಿಮೂಕತ್ವಾಕರವಾಙ ಮಮ |
ಬಹುವಾದಿಜಯೀ ಪಾತು ಹಸ್ತೌ ಸತ್ತತ್ತ್ವವಾದಕೃತ್            || ೧೩ ||
ಕರೌ ರಕ್ಷತು ಮೇ ವಿದ್ವತ್ಪರಿಜ್ಞೇಯವಿಶೇಷವಾನ್ |
ವಾಗ್ವೈಖರೀಭವ್ಯಶೇಷಜಯೀ ವಕ್ಷಸ್ಥಲಂ ಮಮ            || ೧೪ ||
ಸತೀಸಂತಾನಸಂಪತ್ತಿಭಕ್ತಿeನಾದಿವೃದ್ಧಿಕೃತ್ |
ಸ್ತನೌ ರಕ್ಷತು ಮೇ ನಿತ್ಯಂ ಶರೀರಾವದ್ಯಹಾನಿಕೃತ್            || ೧೫ ||
ಪುಣ್ಯವರ್ಧನಪಾದಾಬ್ಜಾಭಿಷೇಕಜಲಸಂಚಯಃ |
ನಾಭಿಂ ರಕ್ಷತು ಮೇ ಪಾರ್ಶ್ವೌ ದ್ಯುನದೀತುಲ್ಯಸದ್ಗುಣಃ        || ೧೬ ||
ಪೃಷ್ಟಂ ರಕ್ಷತು ಮೇ ನಿತ್ಯಂ ತಾಪತ್ರಯವಿನಾಶಕೃತ್ |
ಕಟಿಂ ಮೇ ರಕ್ಷತು ಸದಾ ವಂಧ್ಯಾಸತ್ಪುತ್ರದಾಯಕಃ            || ೧೭ ||
ಜಘನಂ ಮೇsವತು ಸದಾ ವ್ಯಂಗಸ್ವಂಗಸಮೃದ್ಧಿಕೃತ್ |
ಗುಹ್ಯಂ ರಕ್ಷತು ಮೇ ಪಾಪಗ್ರಹಾರಿಷ್ಟವಿನಾಶಕೃತ್            || ೧೮ ||
ಭಕ್ತಾಘವಿಧ್ವಂಸಕರನಿಜಮೂರ್ತಿಪ್ರದರ್ಶಕಃ |
ಮೂರ್ತಿಮಾನ್ಪಾತು ಮೇ ರೋಮಂ ರಾಘವೇಂದ್ರೋ ಜಗದ್ಗುರುಃ    || ೧೯ ||
ಸರ್ವತಂತ್ರಸ್ವತಂತ್ರೋsಸೌ ಜಾನುನೀ ಮೇ ಸದ್ರಾವತು |
ಜಂಘೇ ರಕ್ಷತು ಮೇ ನಿತ್ಯಂ ಶ್ರೀಮಧ್ವಮತವರ್ಧನಃ            || ೨೦ ||
ವಿಜಯೀಂದ್ರಕರಾಬ್ಜೋತ್ಥಸುಧೀಂದ್ರವರಪುತ್ರಕಃ |
ಗುಲ್ಫೌ ಶ್ರೀರಾಘವೇಂದ್ರೋ ಮೇ ಯತಿರಾಟ್ ಸರ್ವದಾsವತು    |    | ೨೧ ||
ಪಾದೌ ರಕ್ಷತು ಮೇ ಸರ್ವಭಯಹಾರೀ ಕೃಪಾನಿಧಿಃ |
eನಭಕ್ತಿಸುಪುತ್ರಾಯುರ್ಯಶಃ ಶ್ರೀಪುಣ್ಯವರ್ಧನಃ            || ೨೨ ||
ಕರಪಾದಾಂಗುಲೀಃ ಸರ್ವಾ ಮಮಾವತು ಜಗದ್ಗುರುಃ |
ಪ್ರತಿವಾದಿಜಯಸ್ವಾಂತಭೇದಚಿಹ್ನಾದರೋ ಗುರುಃ            || ೨೩ ||
ನಖಾನವತು ಮೇ ಸರ್ವಾನ್ ಸರ್ವಶಾಸ್ತ್ರವಿಶಾರದಃ |
ಅಪರೋಕ್ಷೀಕೃತಶ್ರೀಶಃ ಪ್ರಾಚ್ಯಾಂ ದಿಶಿ ಸದಾsವತು            || ೨೪ ||
ಸ ದಕ್ಷಿಣೇ ಚಾವತು ಮಾಂ ಸಮುಪೇಕ್ಷಿತಭಾವಜಃ |
ಅಪೇಕ್ಷಿತಪ್ರದಾತಾ ಚ ಪ್ರತೀಚ್ಯಾಮವತು ಪ್ರಭುಃ            || ೨೫ ||
ದಯಾದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ |
ಸದೋದೀಚ್ಯಾಮವತು ಮಾಂ ಶಾಪಾನುಗ್ರಹಶಕ್ತಿಮಾನ್        || ೨೬ ||
ನಿಖಿಲೇಂದ್ರಿಯದೋಷಘ್ನೋ ಮಹಾನುಗ್ರಹಕೃದ್ಗುರುಃ |
ಅಧಶ್ಚೋರ್ಧ್ವಂ ಚಾವತು ಮಾಮಷ್ಟಾಕ್ಷರಮನೂದಿತಮ್        || ೨೭ ||
ಆತ್ಮಾತ್ಮೀಯಾಘರಾಶಿಘ್ನೋ ಮಾಂ ರಕ್ಷತು ವಿದಿಕ್ಷು ಚ |
ಚತುರ್ಣಾಂ ಚ ಪುಮರ್ಥಾನಾಂ ದಾತಾ ಪ್ರಾತಃ ಸದಾsವತು        || ೨೮ ||
ಸಂಗಮ್ರೇವತು ಮಾಂ ನಿತ್ಯಂ ತತ್ತ್ವವಿತ್ಸರ್ವಸೌಖ್ಯಕೃತ್ |
ಮಧ್ಯಾಹ್ನೇಽಗಮ್ಯಮಹಿಮಾ ಮಾಂ ರಕ್ಷತು ಮಹಾಯಶಾಃ        || ೨೯ ||
ಮೃತಪೋತಪ್ರಾಣದಾತಾ ಸಾಯಾಹ್ನೇ ಮಾಂ ಸದಾsವತು |
ವೇದಿಸ್ಥಪುರುಷೋಜ್ಜೀವೀ ನಿಶೀಥೇ ಪಾತು ಮಾಂ ಗುರುಃ        || ೩೦ ||
ವಹ್ನಿಸ್ಥಮಾಲಿಕೋದ್ಧರ್ತಾ ವಹ್ನಿತಾಪಾತ್ಸದಾsವತು |
ಸಮಗ್ರಟೀಕಾವ್ಯಾಖ್ಯಾತಾ ಗುರುರ್ಮೇ ವಿಷಯೇsವತು            || ೩೧ ||
ಕಾಂತಾರ್ರೇವತು ಮಾಂ ನಿತ್ಯಂ ಭಾಟ್ಟ (ಭಾಷ್ಯ) ಸಂಗ್ರಹಕೃದ್ಗುರುಃ |
ಸುಧಾಪರಿಮಳೋದ್ಧರ್ತಾ ಸು (ಸ್ವ)ಚ್ಛಂದಸ್ತು ಸದಾsವತು        || ೩೨ ||
ರಾಜಚೋರವಿಷವ್ಯಾಧಿಯಾದೋವನ್ಯಮೃಗಾದಿಭಿಃ |
ಅಪಸ್ಮಾರಾಪಹರ್ತಾ ನಃ ಶಾಸ್ತ್ರವಿತ್ಸರ್ವದಾsವತು            || ೩೩ ||
ಗತೌ ಸರ್ವತ್ರ ಮಾಂ ಪಾತೂಪನಿಷದರ್ಥಕೃದ್ಗುರುಃ |
ಋಗ್ವ್ಯಾಖ್ಯಾನಕೃದಾಚಾರ್ಯಃ ಸ್ಥಿತೌ ರಕ್ಷತು ಮಾಂ ಸದಾ        || ೩೪ ||
ಮಂತ್ರಾಲಯನಿವಾಸೀ ಮಾಂ ಜಾಗ್ರತ್ಕಾಲೇ ಸದಾsವತು |
ನ್ಯಾಯಮುಕ್ತಾವಲೀಕರ್ತಾ ಸ್ವಪ್ನೇ ರಕ್ಷತು ಮಾಂ ಸದಾ        || ೩೫ ||
ಮಾಂ ಪಾತು ಚಂದ್ರಿಕಾವ್ಯಾಖ್ಯಾಕರ್ತಾ ಸುಪ್ತೌ ಹಿ ತತ್ತ ಕೃತ್ |
ಸುತಂತ್ರದೀಪಿಕಾಕರ್ತಾ ಮುಕ್ತೌ ರಕ್ಷತು ಮಾಂ ಗುರುಃ            || ೩೬ ||
ಗೀತಾರ್ಥಸಂಗ್ರಹಕರಸ್ಸದಾ ರಕ್ಷತು ಮಾಂ ಗುರುಃ |
ಶ್ರೀಮಧ್ವಮತದುಗ್ಧಾಬ್ಧಿಚಂದ್ರೋsವತು ಸದಾsನಘಃ            || ೩೭ ||
ಇತಿ ಶ್ರೀರಾಘವೇಂದ್ರಸ್ಯ ಕವಚಂ ಪಾಪನಾಶನಮ್ |
ಸರ್ವವ್ಯಾಧಿಹರಂ ಸದ್ಯಃ ಪಾವನಂ ಪುಣ್ಯವರ್ಧನಮ್            || ೩೮ ||
ಯ ಇದಂ ಪಠತೇ ನಿತ್ಯಂ ನಿಯಮೇನ ಸಮಾಹಿತಃ |
ಅದೃಷ್ಟಿಃ ಪೂರ್ಣದೃಷ್ಟಿಃ ಸ್ಯಾದೇಡಮೂಕೋsಪಿ ವಾಕ್ಪತಿಃ        || ೩೯ ||
ಪೂರ್ಣಾಯುಃ ಪೂರ್ಣಸಂಪತ್ತಿಭಕ್ತಿeನಾಭಿವೃದ್ಧಿಕೃತ್ |
ಪೀತ್ವಾ ವಾರಿ ನರೋ ಯೇನ ಕವಚೇನಾಭಿಮಂತ್ರಿತಮ್        || ೪೦ ||
ಜಹಾತಿ ಕುಕ್ಷಿಗಾನ್ ರೋಗಾನ್ ಗುರುವರ್ಯಪ್ರಸಾದತಃ |
ಪ್ರದಕ್ಷಿಣನಮಸ್ಕಾರಾನ್ ಗುರೋರ್ವೃಂದಾವನಸ್ಯ ಯಃ            || ೪೧ ||
ಕರೋತಿ ಪರಯಾ ಭಕ್ತ್ಯಾ ತದೇತತ್ಕವಚಂ ಪಠನ್ |
ಪಂಗುಃ ಕೂಣಿಶ್ಚ ಪೌಗಂಡಃ ಪೂರ್ಣಾಂಗೋ ಜಾಯತೇ ಧ್ರುವಮ್    || ೪೨ ||
ಶೇಷಾಶ್ಚ ಕುಷ್ಠಪೂರ್ವಾಶ್ಚ ನಶ್ಯಂತ್ಯಾಮಯರಾಶಯಃ |
ಅಷ್ಟಾಕ್ಷರೇಣ ಮಂತ್ರೇಣ ಸ್ತೋತ್ರೇಣ ಕವಚೇನ ಚ            || ೪೩ ||
ವೃಂದಾವನೇ ಸನ್ನಿಹಿತಮಭಿಷಿಚ್ಯ ಯಥಾವಿಧಿ |
ಯಂತ್ರೇ ಮಂತ್ರಾಕ್ಷರಾಣ್ಯಷ್ಟೌ ವಿಲಿಖ್ಯಾತ್ರ ಪ್ರತಿಷ್ಠಿತಮ್        || ೪೪ ||
ಷೋಡಶೈರುಪಚಾರೈಶ್ಚ ಸಂಪೂಜ್ಯ ತ್ರಿಜಗದ್ಗುರುಮ್ |
ಅಷ್ಟೋತ್ತರಶತಾಖ್ಯಾಭಿರರ್ಚಯೇತ್ಕುಸುಮಾದಿಭಿಃ            || ೪೫ ||
ಫಲೈಶ್ಚ ವಿವಿಧೈರೇವ ಗುರೋರರ್ಚಾಂ ಪ್ರಕುರ್ವತಃ |
ನಾಮಶ್ರವಣಮಾತ್ರೇಣ ಗುರುವರ್ಯಪ್ರಸಾದತಃ            || ೪೬ ||
ಭೂತಪ್ರೇತಪಿಶಾಚಾದ್ಯಾಃ ವಿದ್ರವಂತಿ ದಿಶೋ ದಶ |
ಪಠೇದೇತತ್ತ್ರಿಕಂ ನಿತ್ಯಂ ಗುರೋರ್ವೃಂದಾವನಾಂತಿಕೇ            || ೪೭ ||
ದೀಪಂ ಸಂಯೋಜ್ಯ ವಿದ್ಯಾವಾನ್ ಸಭಾಸು ವಿಜಯೀ ಭವೇತ್ |
ರಾಜಚೋರಮಹಾವ್ಯಾಘ್ರಸರ್ಪನಕ್ರಾದಿಪೀಡನಾತ್            || ೪೮ ||
ಕವಚಸ್ಯ ಪ್ರಭಾವೇಣ ಭಯಂ ತಸ್ಯ ನ ಜಾಯತೇ |
ಸೋಮಸೂರ್ಯೋಪರಾಗಾದಿಕಾಲೇ ವೃಂದಾವನಾಂತಿಕೇ        || ೪೯ ||
ಕವಚಾದಿತ್ರಿಕಂ ಪುಣ್ಯಮಪ್ಪಣಾಚಾರ್ಯದರ್ಶಿತಮ್ |
ಜಪೇದ್ಯಃ ಸ ಧನಂ ಪುತ್ರಾನ್ ಭಾರ್ಯಾಂ ಚ ಸುಮನೋರಮಾಮ್    || ೫೦ ||
ಜ್ಞಾನಂ ಭಕ್ತಿಂ ಚ ವೈರಾಗ್ಯಂ ಭುಕ್ತಿಂ ಮುಕ್ತಿಂ ಚ ಶಾಶ್ವತೀಮ್ |
ಸಂಪ್ರಾಪ್ಯ ಮೋದತೇ ನಿತ್ಯಂ ಗುರುವರ್ಯಪ್ರಸಾದತಃ            || ೫೧ ||
|| ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರಕವಚಂ ಸಂಪೂರ್ಣಮ್ ||

ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ Baaro namma Manege

ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ ||
ಬಾರೂ ದುಃಖಾಪಹಾರ ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರುವೆ ||
ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀನರಹರಿಯ ಕಾಲರೂಪವ ತೋರ್ದೆ || ೧ ||
ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ
ಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ ||
ಮಂತ್ರಗೃಹದಲಿನಿಂತ ಸುಯತಿವರ್ಯ
ಅಂತ ತಿಳಿಯದೊ ನೀ ಅಂತರದೊಳು || ೩ ||
ಭೂತಪ್ರೇತಗಳನು ಘಾತಿಸಿಬಿಡುವಂಥ
ಖ್ಯಾತಿಯುತ ಯತಿನಾಥನೆ ತುತಿಸುವೆ || ೪ ||
ಕುಷ್ಟರೋಗಾದಿಗಳ ನಷ್ಟ ಮಾಡುವಂಥ
ಅಷ್ಟಮಹಿಮೆಯುತ ಶ್ರೇಷ್ಠ ಮುನಿಯೆ || ೫ ||
ಕರೆದರೆ ಬರುವಿಯೆಂಬೊ ಕೀರುತಿ ಕೇಳಿ ನಾ
ಕರೆದೆನೊ ಕರುಣದಿ ಕರವ ಪಿಡಿಯೊ || ೬ ||
ಭಕ್ತವತ್ಸಲನೆಂಬ ಬಿರುದು ನಿಂದಾದರೆ
ಸಕ್ತನ ಮೊರೆ ಕೇಳಿ ಮಧ್ವೇಶವಿಠಲದಾಸ || ೭ ||

ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾ Kandu Kandu Dhanyanade

ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾ
ಕಂಡು ಧನ್ಯನಾದೆ ನಮ್ಮ ಈ ಗುರುಗಳ ||
ತುಂಗಾತಟದಿ ಬಂದು ನಿಂತ
ಪಂಗು ಬಧಿರಾದ್ಯಂಗಹೀನರ
ಅಂಗಗೈಸಿ ಸಲಹುವ ನರಸಿಂಗನಂಘ್ರಿ
ಭಜಕರಿವರ || ೧ ||
ಗುರುವರ ಸುಗುಣೇಂದ್ರರಿಂದ
ಪರಿಪರಿಯಲಿ ಸೇವೆಗೊಳುತ
ವರಮಂತ್ರಾಲಯಪುರದಿ ಮೆರೆವ
ಪರಿಮಳಾಖ್ಯ ಗ್ರಂಥಕರ್ತರ || ೨ ||
ಸೋಹಂ ಎನ್ನದೆ ಹರಿಯ ದಾಸೋಹಂ
ಎನ್ನಲು ಒಲಿದು
ವಿಜಯ ಮೋಹನವಿಠಲನ ಪರಮ
ಸ್ನೇಹದಿಂದ ತೋರುವವರ || ೩ ||

ಜಯಮಂಗಳಂ ನಿತ್ಯ ಶುಭಮಂಗಳಂ Jayamangalam

ಜಯಮಂಗಳಂ ನಿತ್ಯ ಶುಭಮಂಗಳಂ
ಯೋಗೀಂದ್ರತೀರ್ಥಕರ ರಾಜೀವ ಪೂಜಿತಗೆ
ಭಾಗವತಜನ ಪ್ರಿಯರೆನಿಸುವರಿಗೆ
ಯೋಗಿಗಳ ಅಧಿಪತಿ ಸುಧೀಂದ್ರಕರಜಾತರಿಗೆ
ಬಾಗಿ ವಂದಿಪರ ಸಲಹುವ ಸ್ವಾಮಿಗೆ || ೧ ||
ವರಹಜಾತೀರ ಮಂತ್ರಾಲಯ ನಿಕೇತನಗೆ
ಧರಣಿಯೊಳಗ ಅಪ್ರತಿಮ ಚರಿತೆ ತೋರ್ವರಿಗೆ
ಕುರುಡ ಕಿವುಡಾದಿಗಳ ಬಯಕೆ ಪೂರೈಪರಿಗೆ
ವರ ಸುವೃಂದಾವನದಿ ಶೋಭಿಪರಿಗೆ || ೨ ||
ಆರಾಧನೆಯ ಜನರು ಮಾಡುವುದು ನೋಡಲಿಕೆ
ವಾರವಾರಕ್ಕಧಿಕವೆನಿಸುವರಿಗೆ
ಮಾರಮಣ ಪ್ರಾಣೇಶವಿಠಲನಂಘ್ರಿ ಜಲಜಕೆ
ಆರುಪದವೆನಿಪಗೆ ಕರುಣಾಜಲಧಿಗೆ || ೩ ||

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ Eke vrindavandi Nelesiruve

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ
ನಾಕವಿಲಸಿತಗೀತೆ ಲಾವಣ್ಯಮೂರ್ತೆ |
ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ ||
ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ
ಮುಂದೆ ನ೦ದನ ಕಂದ ನಿನ್ನೆದುರು ಕುಣಿದ
ಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆ
ಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧||
ಇಷ್ಟವಿಲ್ಲದ ರಾಜ್ಯವಾಳಿ ಬಹು ವರ್ಷಗಳು
ಶ್ರೇಷ್ಠ ನೀ ಬಹು ಆಯಾಸಗೊಂಡೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠ ಗ್ರಂಥವ ಬರೆದು ಬರೆದು ಸಾಕಾಯ್ತೆ ||೨||
ಪರಿ ಪರಿ ಅಭಿಷ್ಟಗಳ ನೀಡೆಂದು ಜನ ಕಾಡೆ
ವರವಿತ್ತು ಸಾಕಾಯ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ ||೩||

ರಾಘವೇಂದ್ರ ರಾಘವೇಂದ್ರ ರಾಘವೇಂದ್ರರೆನ್ನಿರಿ Raghavendra Raghavendra enniri

ರಾಘವೇಂದ್ರ ರಾಘವೇಂದ್ರ ರಾಘವೇಂದ್ರರೆನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ||ರಾಘವೇಂದ್ರ ರಾಘವೇಂದ್ರ repeat 2 times||
ತಂದೆ ತಾಯಿ ಬಂಧು ಬಳಗ ಎಲ್ಲ ನೀನೆ ಎನ್ನಿರಿ
ನಾನು ಎಂಬ ಮೋಹ ಮರೆತು ಎಂದೂ ಅವನ ನಂಬಿರಿ||ತಂದೆತಾಯಿ repeat twice||
ಹೇಗೆ ಇರಲಿ ಎಲ್ಲೆ ಇರಲಿ…ಅವನ ಸ್ಮರಣೆ ಮಾಡಿರಿ….
ಧ್ಯಾನದಿಂದ ಮನವ ಸುಡುವ ಚಿಂತೆ ದೂರ ಮಾಡಿರಿ||ರಾಘವೇಂದ್ರ repeat pallavi again||
ಮಾನ ಪ್ರಾಣ ಧನವು ಎಲ್ಲ ಸ್ವಾಮಿ ನಿನ್ನದೆನ್ನಿರಿ
ಗುರುವೆ ನಿನ್ನ ಕರುಣೆಯೊಂದೆ ಸಾಕು ನನಗೆ ಎನ್ನಿರಿ||ಮಾನಪ್ರಾಣ repeat twice||
ಕಲ್ಲು ಮುಳ್ಳೊ ಸಿಡಿಲೊ ಮಳೆಯೊ ಅವನ ಕರುಣೆಯೆನ್ನಿರಿ
ಏನೇ ಬರಲಿ ಅವನದೆಂದು ನಂಬಿ ಮುಂದೆ ನಡೆಯಿರಿ||ರಾಘವೇಂದ್ರ repeat pallavi again ||
ನಿಮ್ಮ ಮನೆಯ ನಿಮ್ಮ ಮನದ ವಿಷಯವೆಲ್ಲ ಬಲ್ಲನು
ಚಪಲದಿಂದ ಅಲೆವ ಮನದಲೆಂದು ಗುರುವು ನಿಲ್ಲನು||ನಿಮ್ಮ ಮನೆಯ repeat twice||
ಕೊಡುವುದೆಲ್ಲ ಕೊಡುವನವನು ಇನ್ನು ಆಸೆಯೇತಕೆ
ಕಲ್ಪವೃಕ್ಷದಂತೆ ಗುರುವು ಇರಲು ಚಿಂತೆಯೇತಕೆ||ರಾಘವೇಂದ್ರ repeat pallavi again||
“ಪೂಜ್ಯಾಯ ರಾಘವೇಂದ್ರಾಯ, ಸತ್ಯಧರ್ಮವ್ರತಾಯಚ
ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನುವೆ…………………. ನಮತಾಂ ಕಾಮಧೇನುವೆ” ||

Wednesday, 25 September 2019

ಅವಿಧವಾ ನವಮೀ Avidha Navami



*ಮಾತೃ ವಂದನಮ್*

" *ಅವಿಧವಾ ನವಮೀ - ಒಂದು ಚಿಂತನೆ* "

ಶ್ರೀ ವಾಯು ಪುರಾಣಾಂತರ್ಗತ ಶ್ರೀ ವೇದವ್ಯಾಸದೇವರು ಹೇಳಿದ " ಮಾತೃ ವೈಭವಮ್ ".

" ಅಮ್ಮ " ಎನ್ನುವ ಅಕ್ಷರದಲ್ಲಿ " ಅಮೃತ " ವಿದೆ.

" ಅಮ್ಮ " ಎಂಬ ಎರಡಕ್ಷರದಲ್ಲಿ ಅಪ್ಯಾಯತೆ - ಅಂತಃಕರಣ - ವಾತ್ಸಲ್ಯ ತುಂಬಿದೆ. "

ಅಮ್ಮ " ಅಂದರೆ.....

ಗಾಳಿಗೆ ಗೊತ್ತು. ನಕ್ಷತ್ರಗಳಿಗೆ ಗೊತ್ತು.

ಆ " ಚಂದಮಾಮ " ಬಲ್ಲ.

ಧರೆ ಬಲ್ಲಳು.

ಪ್ರೀತಿ - ತ್ಯಾಗ - ಸಹನೆ - ಧೈರ್ಯ - ಕಳಕಳಿಯ ರೂಪ ಅವಳು.

ಸಂಪೂರ್ಣ ಸ್ತ್ರೀ ಆದಾಗ ತನ್ನನ್ನು ಮರೆಯುತ್ತಾಳೆ.

ಬರುವ ಕಂದನನ್ನು ಮರೆತೂ ಮರೆಯಳು.

ಒಂದೊಂದು ಕ್ಷಣವನ್ನೂ ಅನುಭವಿಸುತ್ತಾಳೆ.

ಕಲ್ಪನೆ - ಸ್ಪರ್ಶ - ನೋವುಗಳು ಒಟ್ಟೊಟ್ಟಿಗೆ.

ಒಂದು ಆಕೃತಿಯ ರಚನೆಯನ್ನು ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತಾಳೆ.

ಹೊಟ್ಟೆ ತುಂಬಿದ್ದರೂ ತುಸು ಹೆಚ್ಚಾಗಿಯೇ ಆಹಾರವನ್ನು ತೆಗೆದುಕೊಳ್ಳುತ್ತಾಳೆ.

ಅಷ್ಟು ವರುಷ ತನಗಾಗಿ ತೋರದ ಕಾಳಜಿಯನ್ನು ಜೋಪಾನವಾಗಿ ಪ್ರಕಟಿಸುತ್ತಾಳೆ.

ಬಾಳಿನಲ್ಲಿ ಬಂದು ಹೋದ ಕೆಲವೇ ಕೆಲವು ನೆನಪುಗಳನ್ನು ಆಹ್ವಾನಿಸಿಕೊಳ್ಳುತ್ತಾ

ವಾಸ್ತವಿಕವಾಗಿ ಯಾವುದೇ ತೊಂದರೆ ಇದ್ದರೂ ಗಮನಿಸದೇ ಹಣನ್ಮುಖತೆಯೆಡೆಗೆ ಜಾರುತ್ತಾಳೆ.

ಎದ್ದಾಗ - ಬಿದ್ದಾಗ - ಒದ್ದಾಗ ಸದ್ದಾಗದಂತೆ ಅವಡುಗಚ್ಚುತ್ತಾಳೆ.

ಮಗುವಿಗಾಗಿ ನಗುತ್ತಾಳೆ.

ಸೃಷ್ಟಿಯಾದಾಗ ದೃಷ್ಟಿಸಿ ನೋಡುತ್ತಾ ಬಿಂಬ - ಪ್ರತಿಬಿಂಬ - ರೂಪ - ಅನುರೂಪಗಳ ಎಣಿಕೆಯ ಪ್ರಾಣಗಳನ್ನು ಕಣ್ಣಿನಲ್ಲಿ - ತುಟಿಯಲ್ಲಿ - ಕರಗಳಲ್ಲಿ - ಅಪ್ಪುಗೆಯಲ್ಲಿ - ಎದೆಯಲ್ಲಿ ತೋರುತ್ತಾಳೆ.

ಹಗಲು - ರಾತ್ರಿ - ನಿದ್ದೆ - ಆಯಾಸಗಳು ಅಲ್ಲಿ ಇಲ್ಲ!

ಅಲ್ಲಿರುವುದು ಬರೀ ಪ್ರೀತಿ!!!

ತನಗಾಗಿ ಬಂದ ಮಗು ದೇವರು ಕೊಟ್ಟ ಹೂವು.

ತಾಯ್ತನ ತುಂಬಿದ ಆ ಕಂದನನ್ನು ಎವೆಯಿಕ್ಕದೆ ಸಮಯದ ಪರಿವೆಯಿಲ್ಲದ ಕಣ್ತುಂಬಕೊಳ್ಳುತಾಳೆ..

ಆಕೆ ಅಮ್ಮ........ !!

ಅಮ್ಮ ಮೊದಲೇ?

ದೇವರು ಮೊದಲೇ?

ವೇದ ಹೇಳುತ್ತದೆ ಅಮ್ಮನೇ ದೇವರು!

ಆಕೆಗೆ ಮಗುವಿನ ನಾಡಿ ಮಿಡಿತ ಗೊತ್ತು.

ಉಸಿರಿನ ವೇಗ ಕೊಂಬೆ ಬಲ್ಲದು.

ಬಳ್ಳಿಗೆ ನೀರುಣಿಸುವಂತೆ ದೃಷ್ಟಿಯಾಗದಿರಲೆಂದು ಸೆರಗು ಮುಚ್ಚಿ ಅಮೃತ

ಕುಡಿಸುತ್ತಾಳೆ.

ಮಗು ನಿದ್ರಿಸುತ್ತೆ.

ತಾಯಿಯ ಮನ - ತನು ಎಚ್ಚರವಿರುತ್ತೆ.

ಮತ್ತೆ ಮತ್ತೆ ಏಳುತ್ತದೆ.

ತಾಯಿ ಇಂಪಾದ ದನಿ; ತೂಗುವಾಗ ಮಧ್ಯದಲ್ಲಿ ಬೇಕಂತಲೇ ಅಳುವುದು.

ಅಮ್ಮನ ಮೊಗ ಮತ್ತೆ ದಿಟ್ಟಿಸಲು ಆ ತಾಯಿಗೂ ಗೊತ್ತು ಮಗು ಆಟವಾಡುತ್ತಿದೆಯೆಂದು.

ಆದರ ಜೊತೆ ಆ ಮಾತೃ ಹೃದಯವೂ ಆಟವಾಡುತ್ತದೆ.

ಮಧುರ ಸ್ವರ, ಹುಸಿ ಮುನಿಸು, ತೋರೆಗೊಡದ ನಗು ಇಬ್ಬರಿಗೂ ಬೇಕು.

ಪ್ರಕೃತಿಯ ನಿಯಮದಂತೆ ಬೆಳೆಯುತ್ತದೆ.

ಆದರೆ ಆ ತಾಯಿ ಅಲ್ಲಿಯೇ ನಿಲ್ಲುತ್ತಾಳೆ.

ಕ್ರಮೇಣ ಮಾಡು ಮರೆತು ಬಿಡುತ್ತದೆ.

ಗೆಳತಿ - ಸಂಗಾತಿ ದೊರೆತಾಗ ಅಮ್ಮನಿಂದ ಅದು ಬಹು ದೂರ.

" ಮಾತೃ ಹೃದಯ ಮಮತೆ " ಯಿಂದ ಮನದಲ್ಲಿ ಮಗುವಿಗೆ ಜೋಕಾಲಿ ತೂಗುತ್ತಲೇ ಇರುತ್ತಾಳೆ.

ಅದು ನಿರಂತರ.

ಅಂಥಹಾ ಕರುಣಾಮಯಿಯಾದ ತಾಯಿ ಋಣವನ್ನು ತೀರಿಸಲು ಅಸಾಧ್ಯ!

ಆದುದರಿಂದ ಮುತ್ತೈದೆಯಾಗಿ ಮರಣ ಹೊಂದಿದ ತಾಯಿಗೆ " ಅವಿಧವಾ ನವಮೀ " ( ಯಂದೇ ಶ್ರಾದ್ಧ ಮಾಡಬೇಕು.

ಎಲ್ಲಿ ತಾಯಿಯ ಋಣದ ಪರಿಹಾರ ನೆನಿಸಿ 16 ಪಿಂಡಗಳನ್ನು ಇಡಲಾಗುತ್ತದೆಯೋ ಅದನ್ನು ನೆನೆಸಿಕೊಂಡಾಗ ಕರುಳು ಕಿವಿಚಿದಂತಾಗುತ್ತದೆ.

ಕಲ್ಲೆದೆಯ ಮನಸ್ಸು ಕೂಡಾ ಕರಗುತ್ತದೆ.

ನಿಮ್ಮ ತಂದೆ - ತಾಯಿಗಳು ನಿಮ್ಮನ್ನು ನೋಡಿಕೊಂಡಂತೆ ನೀವು ನಿಮ್ಮ ಮಕ್ಕಳನ್ನು ನೋಡಿಕೊಳ್ಳಲಾರಿರಿ.

ಅವರು ತಮ್ಮ ಸುಖವನ್ನು ತ್ಯಾಗ ಮಾಡಿ ನಿಮಗೆ ಸುಖ ಕೊಟ್ಟರು.

ಹೀಗಾಗಿ ಅರ್ಥ ತಿಳಿದು ಪಿಂಡ ಪ್ರದಾನ ಮಾಡಿ!!

ಶ್ರೀ ವೇದವ್ಯಾಸದೇವರು " ವಾಯುಪುರಾಣ " ದಲ್ಲಿ ಮಾತೃ ವೈಭವವನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ವಾಯುಪುರಾಣದಲ್ಲಿ ಶ್ರೀ ವೇದವ್ಯಾಸದೇವರು ತಾಯಿಯ ವೈಭವವನ್ನು ಸಜ್ಜನರ ಮಾಹಿತಿಗಾಗಿ...

ಗರ್ಭೇ ಚ ವಿಷಮೇ ದುಃಖಂ

ವಿಷಮೇ ಭೂಮಿವರ್ತ್ಮನಿ ।

ತಸ್ಯಾ ನಿಷ್ಕ್ರಮಣಾರ್ಥಾಯ

ಮಾತೃ ಪಿಂಡಂ ದದಾಮ್ಯಹಮ್ ।। 1 ।।

ನಾನು ಗರ್ಭದಲ್ಲಿರುವುದರಿಂದ ನಿನಗೆಷ್ಟು ಕಷ್ಟವಾಯಿತು? ಅತಿಥಿಗಳು ಮನೆಗೆ ಬಂದರೇನೇ ಮನೆಯವರ ಸ್ವಾತಂತ್ರ್ಯ ಹೋಗುವುದು. ಹೀಗಿರುವಾಗ 9 ತಿಂಗಳು ನಿನ್ನೊಳಗೆ ಬಂದುದರಿಂದ ನಿನ್ನ ದೇಹಕ್ಕೆ ಎಷ್ಟೊಂದು ವಿಕಾರವಾಯಿತು ಮತ್ತು ದುಃಖವಾಯಿತು. ಊಟವಾದಾಗ ತಿಂದಿದ್ದೆಲ್ಲಾ ವಾಂತಿ, ಹೊಟ್ಟೆ ಹೊತ್ತು ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲ. ಮನೆ - ಸಮಾರಂಭ - ಸಮಾಜದಲ್ಲಿ ಮುಜುಗರವಾದರೂ ನನಗಾಗಿ ಅದನ್ನು ಸಹಿಸಿಕೊಂಡಿರುವ ನಿನಗೆ ನಮನ! ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಯಾವತ್ಪುತ್ರೋ ನ ಭವತಿ

ತಾವನ್ಮಾತುಶ್ಚ ಶೋಚನಮ್ ।

ತಸ್ಯಾ ನಿಷ್ಕ್ರಮಣಾರ್ಥಾಯ

ಮಾತೃ ಪಿಂಡಂ ದದಾಮ್ಯಹಮ್ ।। 2 ।।

ಗರ್ಭದಲ್ಲಿ ನಾನು ಹೊರಗೆ ಬರುವ ತನಕ ನಿನಗಾದ ಶೋಕಕ್ಕೆ ಕೊನೆಯಿಲ್ಲ. ಸಿಕ್ಕಾಪಟ್ಟಿ ತಿರುಗಾಡಲಾಗದು. ಮಗುವಿಗೆ ಏನಾದೀತೋ ಎಂಬ ಭಯ. ಅಡ್ಡಾದಿಡ್ಡಿಯಾಗಿ ಬಂದರಂತೂ ನನಗಾಗಿ ನಿನ್ನ ಪ್ರಾಣವೇ ಹೋದರೆ ಎಂಬ ಭಯ ಬೇರೇ. ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಪಾಂಡವರ ಸಾವಿನ ರಹಸ್ಯ Death of Pandavas

ಪಾಂಡವರ ಸಾವಿನ ರಹಸ್ಯ ಕೊನೆಗೂ ಬಯಲು…! ಪಾಂಡವರ ಸಾವು ಹೇಗಿತ್ತು ಗೊತ್ತಾ..?

ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ..
ನಕುಲನಾದರೋ ಅಪ್ರತಿಮ ರೂಪವಂತ. .
ಮೂರು ಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ..
ಸಹಸ್ರ ಸಹಸ್ರ ಗಂಡಾನೆಗಳ ಭೀಮನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ ಧರ್ಮರಾಜನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿದ್ದ ಏಕೈಕ ಸಂಪತ್ತೆಂದರೆ “ಧರ್ಮ“..!
ಹುಟ್ಟು ಹೆಸರು ಯುಧಿಷ್ಠಿರನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.

“ಶರಣರ ಮಹಿಮೆಯನ್ನು ಮರಣ ಕಾಲದಲ್ಲಿ ಕಾಣಬೇಕು” ಇದು ಗಾದೆ ಮಾತು.
ಧರ್ಮರಾಜನೇನೆಂದು ಅರ್ಥಮಾಡಿಕೊಳ್ಳಬೇಕಾದರೆ ಪಾಂಡವರ ಜೀವನದ ಕೊನೆಗೆ ನಾವು ಬರಬೇಕು..

ಭಗವಾನ್ ಶ್ರೀಕೃಷ್ಣನಿಗೆ ಪಾಂಡವರೆಂದರೆ ಪಂಚಪ್ರಾಣ. ಪಾಂಡವರಿಗಾದರೋ – ಶ್ರೀಕೃಷ್ಣ ಆತ್ಮವೇ ಆಗಿದ್ದ.
ಹೀಗಾಗಿ ಶ್ರೀಕೃಷ್ಣ ಪರಂಧಾಮದ ನಂತರ ಪಾಂಡವರಿಗೆ ಆತನಿಲ್ಲದ ಭೂಮಿ ಶೂನ್ಯವೆನಿಸಿತು.. ಬದುಕು ಸಪ್ಪೆ ಎನಿಸಿತು..!
ಮನಸ್ಸು ಮಹಾಪ್ರಸ್ಥಾನಕ್ಕೆ ಅಣಿಯಾಯಿತು..!
ಮಹಾಪ್ರಸ್ಥಾನವೆಂದರೆ ಹಿಂದಿರುಗಿ ಬಾರದ ಪ್ರಯಾಣ.
ಬದುಕು ಸಾಕೆನಿಸಿದಾಗ ಮನಸ್ಸನ್ನು ಪರತತ್ವದಲ್ಲಿ ಲೀನಗೊಳಿಸಿ, ಅನ್ನನೀರುಗಳನ್ನೂ ಪರಿತ್ಯಜಿಸಿ ಶರೀರ ಬೀಳುವವರೆಗೆ ನಡೆಯುತ್ತಲೇ ಭೂಮಂಡಲ ಪರ್ಯಟನೆ ಮಾಡುವ ಒಂದು ಮಹಾವ್ರತ..!!ರಾಜವಸ್ತ್ರಗಳನ್ನು ತೊರೆದು, ನಾರುಮಡಿಯುಟ್ಟು ಮಹಾಪ್ರಸ್ಥಾನಕ್ಕೆ ಹೊರಟುನಿಂತ ಪಾಂಡವರನ್ನು ಕಂಡು ಹಸ್ತಿನಾವತಿಯೇ ಗೋಳಿಟ್ಟಿತು..
ವನವಾಸದ ನೆನಪು ಮತ್ತಷ್ಟು ಧಾರುಣವಾಗಿ ಮರುಕಳಿಸಿತು..
ಪೌರರೆಷ್ಟೇ ಪ್ರಯತ್ನಿಸಿದರೂ ಮುಕ್ತಿಗೆ ಮುಖಮಾಡಿ ನಿಂತಿದ್ದ ಪಾಂಡವರನ್ನು ಹಿಂದಿರುಗಿಸಲು ಸಾಧ್ಯವಾಗಲೇ ಇಲ್ಲ.!

ವನವಾಸಕ್ಕೆ ಹೊರಟುನಿಂತಾಗ ಇದ್ದಂತೆ ಪಾಂಡವರಲ್ಲಿ ಕಿಂಚಿತ್ತಾದರೂ ದುಃಖವಿರಲಿಲ್ಲ.
ಮರಣವು ಅವರಿಗೆ ಮಹೋತ್ಸವವೇ ಆಗಿತ್ತು.!
ಮುಂದೆ ಮುಂದೆ ಧರ್ಮರಾಜ, ಮತ್ತೆ ಭೀಮ, ಅರ್ಜುನ, ನಕುಲ-ಸಹದೇವರು, ಕೊನೆಯಲ್ಲಿ ದ್ರೌಪದಿ – ಹೀಗೆ ಸಾಗುತ್ತಿದ್ದ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು.

ಭೂಮಿಯನ್ನೆಲ್ಲಾ ಸುತ್ತಿ ಕೊನೆಯಲ್ಲಿ ಪಾಂಡವರು ಹಿಮಾಲಯದ ಶಿಖರಗಳನ್ನು ದಾಟಿ ಸಾಗುತ್ತಿದ್ದಾಗ ಮೊದಲಿಗೆ ದ್ರೌಪದಿಯು ಪ್ರಾಣಗಳನ್ನು ತೊರೆದು ಬಿದ್ದು ಬಿಟ್ಟಳು.
ಒಡನೆಯೇ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ:”ಅಣ್ಣಾ, ದ್ರೌಪದಿಯೇಕೆ ಯೋಗಭ್ರಷ್ಟಳಾಗಿ ಬಿದ್ದು ಬಿಟ್ಟಳು…!?”
ಧರ್ಮರಾಜ ಉತ್ತರಿಸಿದ, “ಐವರನ್ನು ಸಮಾನರಾಗಿ ಪ್ರೀತಿಸಬೇಕಾಗಿದ್ದ ಆಕೆ ಗುಪ್ತವಾಗಿ ಅರ್ಜುನನನ್ನು ಅಧಿಕವಾಗಿ ಪ್ರೀತಿಸುತ್ತಿದ್ದಳು. ಈ ತಾರತಮ್ಯವೇ ಅವಳ ಪತನಕ್ಕೆ ಕಾರಣವಾಯಿತು”

ಮತ್ತೆ ಕುಸಿದವನು ನಕುಲ, ಅಣ್ಣನಲ್ಲಿ ಭೀಮ ನಕುಲನ ಪತನಕ್ಕೆ ಕಾರಣವನ್ನು ಪ್ರಶ್ನಿಸಿದ..
“ತನ್ನ ಅನನ್ಯ ಸಾಧಾರಣವಾದ ರೂಪದ ಕುರಿತಾದ ಗಾಢ ಗರ್ವವೇ ನಕುಲನ ಪತನಕ್ಕೆ ಕಾರಣ”ವಾಯಿತೆಂದು ಧರ್ಮರಾಜ ಉತ್ತರಿಸಿದ.

ಮತ್ತೆ ಮೃತ್ಯುವಿನ ಸರದಿ ಅರ್ಜುನದಾಯಿತು.
ಕಂಗೆಡುವ ಮನದ ಕಣ್ಣೀರನ್ನು ನುಂಗುತ್ತ ಭೀಮ ದೊಡ್ಡಣ್ಣನನ್ನು ಕೇಳಿದನು:”ಗೀತೋಪದೇಶಕ್ಕೆ ಪಾತ್ರನಾದ ಅರ್ಜುನನ ಸ್ಥಿತಿ ಹೀಗೇಕಾಯಿತು?”
ಧರ್ಮರಾಜ ಹೀಗೆ ಉತ್ತರಿಸಿದ: “ತನ್ನ ಪರಾಕ್ರಮದ ಬಗೆಗೆ ಅರ್ಜುನನಿಗೆ ಅತಿಶಯವಾದ ಅಹಂಕಾರವಿದ್ದಿತು..
ಅಹಂಕಾರದ ಆವೇಗದಲ್ಲಿ ಲೋಕದ ಎಲ್ಲಾ ವೀರರನ್ನು ಒಂದೇ ದಿನದಲ್ಲಿ ಮಣಿಸಿಬಿಡುವೆನೆಂದು ಆತ ಹೇಳಿಕೊಂಡಿದ್ದ.!
ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದುರಿಂದ ಸುಳ್ಳಾಡಿದಂತಾಯಿತು..
ಗರ್ವ ಮತ್ತು ಮಿಥ್ಯಾ ವಚನಗಳು ಅರ್ಜುನನ ಪತನಕ್ಕೆ ಕಾರಣವಾದುವು”

ಮಹಾಪ್ರಸ್ಥಾನ ಮುಂದುವರೆಯಿತು..

ಕೊಂಚ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮನೇ ಬಿದ್ದುಬಿಟ್ಟ.
ಆದರೆ ಪ್ರಾಣ ಕಳೆದುಕೊಳ್ಳುವುದಕ್ಕೆ ಮುನ್ನ, ಪ್ರಜ್ಞೆಕಳೆದುಕೊಳ್ಳದೆ, ಧೃತಿಗೆಡದೆ ಅಣ್ಣನನ್ನು ಪ್ರಶ್ನಿಸಿದ, “ಅಣ್ಣಾ, ನಿನ್ನ ಪ್ರಿಯ ಸೋದರನಾದ ನನಗೆ ಹೀಗೇಕಾಗುತ್ತಿದೆ?”
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿಯೂ ತನ್ನ ದೋಷಗಳನ್ನು ತಿಳಿಯಬಯಸಿದ ಭೀಮನ ಜ್ಞಾನದಾಹವನ್ನು, ಧೃತಿಯನ್ನು ಯಾರೂ ಮೆಚ್ಚಬೇಕು..!!
ಜೀವಜ್ಯೋತಿ ಆರಿ ಹೋಗುವ ಕೊನೆಯ ಕ್ಷಣಗಳಲ್ಲಿ ತನ್ನ ವ್ಯಕ್ತಿತ್ವದ ಕೊರತೆಗಳನ್ನು ತಿಳಿಹೇಳುವ ಅಣ್ಣನ ತಿಳಿಮಾತುಗಳು ತಮ್ಮನ ಕಿವಿಗಳಿಗೆ ಬಿದ್ದವು.
“ಬಾಹುಬಲದ ಗರ್ವ ನಿನ್ನ ಪತನದ ಪ್ರಬಲ ಕಾರಣ..
ಅದಕ್ಕಿಂತ ಮುಖ್ಯ ಕಾರಣ – ನೀನು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದುದು.
ನಮ್ಮ ಶರೀರ ಧಾರಣೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರದ ಮೇಲೆ ಮಾತ್ರವೇ ನಮಗೆ ಅಧಿಕಾರವಿದೆ..
ಜಗತ್ತಿನಲ್ಲಿ ಹಸಿವೆಯಿಂದ ಬಳಲುವ – ಸಾಯುವ ಜೀವಗಳೆಷ್ಟೋ!!
ನಾವೇ ಸಂಪಾದಿಸಿದ್ದಾದರೂ ನಾಲಿಗೆ ಚಪಲಕ್ಕಾಗಿ ಅಗತ್ಯವಿಲ್ಲದೇ ಆಹಾರ ಸೇವಿಸುವುದು ಆ ಜೀವಗಳಿಗೆ ಮಾಡಿದ ಅನ್ಯಾಯ. ಅನ್ನದೇವತೆಗೆ ಮಾಡಿದ ಅಪಚಾರವದು. ”

ಧೀರ ಧರ್ಮಜ ಅಸಹಾಯ ಶೂರನಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆದ. ಭೂಮಂಡಲಕ್ಕೆ ಚಕ್ರವರ್ತಿ ಎನಿಸಿದ್ದ ಜನನಾಥ ಧರ್ಮಜನ ಜೊತೆ ಉಳಿದಿದ್ದು ಕೊನೆಗೊಂದು ನಾಯಿ ಮಾತ್ರ.
ಬುದ್ಧಿ-ಭಾಷೆಗಳನ್ನು ಮೀರಿದ ಮಹಾ ಯಾತ್ರೆಯನ್ನು ಕೈಗೊಂಡಿದ್ದ ಆ ಮಹಾನುಭಾವನಿಗೆ ಕೆಲಹೊತ್ತಿನಲ್ಲಿಯೇ ದೇವರಾಜನ ದಿವ್ಯ ರಥದ ಘೋಷ ಕೇಳಿಸಿತು.
ಕಲ್ಮಷದ ಕಪ್ಪು ಚುಕ್ಕೆಗಳೇ ಇಲ್ಲದ ಧವಳ ಜೀವನವನ್ನು ಗೌರವಿಸಲು – ಧರೆಯ ದೊರೆಯನ್ನು ದಿವಿಗೆ ಸ್ವಾಗತಿಸಲು ಸ್ವಯಂ ಸ್ವರ್ಗದ ದೊರೆಯೇ ಆಗಮಿಸಿದ.
ದಿವಿ-ಭುವಿಯ ರಾಜರ ಆ ಭವ್ಯ ಸಮಾಗಮದಲ್ಲಿ ದೇವೇಂದ್ರ ಧರ್ಮರಾಜನಿಗೆ ಶರೀರ ಸಹಿತವಾಗಿ ಸ್ವರ್ಗಕ್ಕೆ ಬರಲು ಆಮಂತ್ರಣವಿತ್ತ.

“ತನ್ನ ಬದುಕನ್ನು ಸ್ವರ್ಗಮಾಡಿದ ತಮ್ಮಂದಿರು ಮತ್ತು ಮಡದಿಯ ಒಡನಾಟ ಸ್ವರ್ಗದಲ್ಲಿಯೂ ಬೇಕೆಂದ” ಧರ್ಮರಾಜ.
“ಶರೀರ ಸಹಿತವಾಗಿ ಸ್ವರ್ಗವೇರುವ ಅಪೂರ್ವ ಸುಯೋಗವು ನಿನ್ನದಾದರೆ, ನಿನ್ನ ತಮ್ಮಂದಿರು ಮತ್ತು ಮಡದಿ ಶರೀರವನ್ನು ತೊರೆದು ಆಗಲೇ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದ್ದಾರೆ ” ಎಂಬುದು ಇಂದ್ರನ ಉತ್ತರವಾಗಿತ್ತು.

ಧರ್ಮರಾಜನ ಮುಂದಿನ ಮನವಿ ಮನಸ್ಸು ಮುಟ್ಟುವಂತಹುದು.

“ಆಶ್ರಿತರನ್ನು ಕೈ ಬಿಡುವುದು ಸಜ್ಜನರ ಧರ್ಮವಲ್ಲ.
ಸೈನ್ಯ ಕೋಶಗಳು, ಅಮಾತ್ಯ ಪ್ರಜೆಗಳು, ಕೊನೆಗೆ ನನ್ನ ಜೀವದ ಒಡನಾಡಿಗಳೇ ಆಗಿದ್ದ ಸಹೋದರರು, ಮಡದಿಯೂ ಸೇರಿದಂತೆ ಸರ್ವಸ್ವವೂ ನನ್ನಿಂದ ದೂರವಾದರೂ ಜೊತೆಬಿಡದ ಈ ನಾಯಿಯನ್ನು ಬಿಡಲಾರೆ.
ನೀನು ನನ್ನ ವಿಷಯದಲ್ಲಿ ಪ್ರಸನ್ನನಾಗಿರುವುದೇ ನಿಜವಾದರೆ ಸ್ವರ್ಗದಲ್ಲಿ ನನ್ನೊಡನೆ ಈ ನಾಯಿಗೂ ಸ್ಥಾನವನ್ನು ಕಲ್ಪಿಸು.”

ಚಕಿತನಾದ ಇಂದ್ರ ಹೇಳಿದ, “ಸ್ವರ್ಗದಲ್ಲಿ ನಾಯಿಗಳಿಗೆ ಅವಕಾಶವಿಲ್ಲ“.

“ಹಾಗಿದ್ದರೆ ನನಗೆ ಯಾವ ಸ್ವರ್ಗವೂ ಬೇಡ, ನಾಯಿಯೊಡನೆ ನಾನೂ ಇಲ್ಲಿಯೇ ಇರುತ್ತೇನೆ” ಧರ್ಮರಾಜನ ಈ ಮಾತುಗಳು ಇಂದ್ರನನ್ನು ದಂಗುಬಡಿಸಿತು.!

ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..?
ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಲನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಷ್ಠಿರನೆಲ್ಲಿ….?

ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ?

ಸ್ವರ್ಗಕ್ಕೆ ಬೆನ್ನು ಹಾಕಿ ನಾಯಿ ಇದ್ದ ಕಡೆ ಮುಖಮಾಡಿ ನಿಂತ ಧರ್ಮರಾಜ ನಿಗೆ ಮಹಾದಾಶ್ಚರ್ಯವೇ ಕಾದಿತ್ತು..!!
ನಾಯಿ ಮಾಯವಾಗಿತ್ತು..!!
ಆಸ್ಥಾನದಲ್ಲಿ ಧರ್ಮ ನಿಂತಿತ್ತು..!!

ಯಾವ ಧರ್ಮಕ್ಕಾಗಿ ರಾಜ್ಯ ಕೋಶಗಳನ್ನೂ ಕಳೆದು ಕೊಂಡನೋ ,
ಯಾವ ಧರ್ಮಕ್ಕಾಗಿ ತುಂಬಿದ ರಾಜ ಸಭೆಯಲ್ಲಿ ಧರ್ಮಪತ್ನಿಯ ವಸ್ತ್ರಾಪಹರಣ ವನ್ನು ಎದುರಿಸಿದನೋ ,
ಯಾವ ಧರ್ಮಕ್ಕಾಗಿ ಕಾಡಾಡಿಯಾಗಿ ಕ್ಲೇಶಗಳನ್ನು ಅನುಭವಿಸಿದನೋ,
ಯಾವ ಧರ್ಮಕ್ಕಾಗಿ ಸಂಗ್ರಾಮ ಯಜ್ಞದೀಕ್ಷಿತನಾಗಿ ಬಂಧು ಮಿತ್ರರು, ಮುದ್ದು ಮಕ್ಕಳು,
ಯುದ್ಧ ಯಜ್ಞದಲ್ಲಿ ಹತರಾಗಿ-ಹುತರಾಗಿ ಹೋಗುವುದನ್ನು ಕಣ್ಣಾರೆ ಕಂಡನೋ ,
ಯಾವ ಧರ್ಮದ ಪೂರ್ಣಸಾಧನೆಗಾಗಿ ಸರ್ವತ್ಯಾಗದ ಮಹಾಪ್ರಸ್ಥಾನವನ್ನು ಕೈ ಗೊಂಡನೋ, ಆ ಧರ್ಮ ಭುವಿಯ ಬದುಕಿನ ಕೊನೆ ಕ್ಷಣಗಳಲ್ಲಿ, ಎಲ್ಲವನ್ನು ಕಳೆದು ಕೊಂಡ ಅಕಿಂಚನ ಸ್ಥಿತಿಯಲ್ಲಿ ಕಣ್ಣೆದುರು ಮೈದಳೆದು ನಿಂತಿತ್ತು..ಧರ್ಮರಾಜನಿಗೆ ತನ್ನಿರವೇ ಮರೆಯಿತು..!!

ನಾಯಿ ನಾಯಿಯಾಗಿರಲಿಲ್ಲ, ಧರ್ಮರಾಜನ ತಂದೆ ಯಮಧರ್ಮರಾಜನಾಗಿದ್ದ..! ಧರ್ಮಸ್ವರೂಪಿಯೇ ಅವನಲ್ಲವೇ?

*ಬದುಕೆಂಬುದು ಮರಣದೆಡೆಗಿನ ನಿರಂತರ ಪಯಣ..*
*ಬದುಕೆಂಬುದು ಮರಣದ ಸಿದ್ಧತೆ ಮಾತ್ರ..!!*
*ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು..*
*ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ..*
*ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ…ಕೂಡಿಕೊಳ್ಳುತ್ತಲೇ ಇರುತ್ತದೆ..*
“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..”
ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು..
ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.?

ಬಲವೇ ..?
ಪರಾಕ್ರಮವೇ ..?
ರೂಪವೇ..?
ವಿದ್ಯೆಯೇ..?

ಮರಣದ ಮಾತು ಹಾಗಿರಲಿ..
ಬದುಕಿನ ಕೊನೆಯವರೆಗೆ ಕೂಡ ಇವುಗಳು ಬರಲಾರವು..
ಕಾಲ ಕಳೆದಂತೆ ಬಲ ಕುಂದುತ್ತದೆ ..
ಪರಾಕ್ರಮ ಮಸುಕಾಗುತ್ತದೆ..
ರೂಪ ಮಾಸುತ್ತದೆ..
ವಿದ್ಯೆ ಮರೆಯುತ್ತದೆ ..
ದ್ರೌಪದಿ ನಕುಲರ ರೂಪವೇನಾಯಿತು ?
ಸಹದೇವನ ವಿದ್ಯೆ ಎಲ್ಲಿ ಹೋಯಿತು ?
ಭೀಮಾರ್ಜುನರ ಬಲ ಪರಾಕ್ರಮಗಳು ಯಾವ ಪ್ರಯೋಜನಕ್ಕೆ ಬಂದವು?
ಧರ್ಮರಾಜನೆಂದೂ ಕೈಬಿಡದ ಧರ್ಮವೊಂದೇ ತಾನೆ ನಾಯಿಯಾಗಿ ಅವನನ್ನು ಕಾಯುತ್ತಿದ್ದುದು..!!
ಧರ್ಮದೊಡನಿದ್ದರೆ ಮಾತ್ರ ಬಲ ವಿದ್ಯೆ ರೂಪಗಳಿಗೊಂದು ಅರ್ಥ ..
ಹಾಗಿಲ್ಲದಿದ್ದರೆ ಇವುಗಳು ಪತನ ಸೋಪಾನಗಳೇ ಸರಿ ..
ಧರ್ಮಶೀಲನಿಗೆ ಬದುಕಿನ ಕೊನೆ ಧರ್ಮರೂಪದಲ್ಲಿಯೇ ಬಂದರೆ ಉಳಿದವರಿಗೆ ಅದು ಮೃತ್ಯುರೂಪ …

ಭೋಜರಾಜನ ಜೀವನಸಂದೇಶವನ್ನು ಗಮನಿಸಿ:

ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ |
ಆಪಾತಮಾತ್ರ ಮಧುರೋ ವಿಷಯೋಪಭೋಗಃ||
ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ |
ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ ||

(ಗಾಳಿಗೆ ಸಿಕ್ಕಿದ ಮೋಡವೆಷ್ಟು ಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಸ್ಥಿರವಾದುದು ..
ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ ..
ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನ ಹಾಗೆ ನಮ್ಮ ಪ್ರಾಣ ..
ಪರಲೋಕ ಪ್ರಯಾಣದ ಪರಮಸಖನೆಂದರೆ ಧರ್ಮವೊಂದೇ ಅಲ್ಲವೇ..?)

*ಧರ್ಮವಿರುವಲ್ಲಿ ಸಾವಿಲ್ಲ ,ನೋವಿಲ್ಲ.. ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ .. ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು..!!*

…ಧರ್ಮೋ ರಕ್ಷತಿ ರಕ್ಷಿತಃ …
: ಸಂಗ್ರಹ ದಯವಿಟ್ಟು ಅಳಿಸಿ ಹಾಕದೆ ಬಿಡುವು ಮಾಡಿಕೊಂಡು ಓದಿ.. ಇದೇ ಮನವಿ ಪ್ಲೀಸ್

ಶ್ರಾದ್ಧ ಮಾಡುವಾಗ ಪಾಲಿಸಬೇಕಾದ ನಿಯಮಗಳು

*ಶ್ರಾದ್ಧ ಮಾಡುವಾಗ ಪಾಲಿಸಬೇಕಾದ ನಿಯಮಗಳು*
1.ಶ್ರಾದ್ಧ ಮಾಡುವ ದಿನ ಮನೆ     ಮುಂದೆ ರಂಗೋಲಿ ಹಾಕಬಾರದು
2. ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರ್ದು,  ಕೂದಲು ಬಾಚಿಕೊಳ್ಳಬಾರದು
3.ಆದಷ್ಟು ಮನೆಯಲ್ಲಿ ಶ್ರಾದ್ಧ ಮಾಡುವುದು ಅತ್ಯುತ್ತಮ..  ಹಿರಿಯರು ಹುಟ್ಟಿದ ಮನೆ,  ಅಲ್ಲದೆ, ಮನೆಯಲ್ಲಿರೋ ಮಕ್ಕಳು,  ಮೊಮ್ಮಕ್ಕಳು ಅವರ ಪ್ರಸಾದ  ಸ್ವೀಕಾರ  ಮಾಡಿ,  ಹಿರಿಯರ ಆಶೀರ್ವಾದ ಪಡೆಯುತ್ತಾರೆ,  ಹಿರಿಯರು,  ನಾವು ಪೂಜಿಸುವ ಆಚಾರ್ರ ರೂಪದಲ್ಲಿ ಬರುತ್ತಾರೆ.. ಮನೆಯಲ್ಲಿ ಎಲ್ಲರೂ ಅವರ ಕಾಲಿಗೆರಗಿ ಆಶಿರ್ವಾದ ಪಡೆಯಬೇಕು..
ಈಗಿನ ಜನರಿಗೆ ಮಡಿ  ಅಡುಗೆ ಅಂದ್ರೆ ಕಷ್ಟ.. ಅಡುಗೆ ಮಾಡಲು ಕಷ್ಟ ಅನಿಸಿದ್ರೆ ಸಾಕಷ್ಟು ಅಡುಗೆ ಮಾಡುವ ಸೇವೆ ಒದಗಿಸುವವರು ಇರುತ್ತಾರೆ. ಅವರ ಸೇವೆ ಪಡೀಬಹುದು..
4.ಮನೆಯಲ್ಲಿ ಮಾಡೋದು ಸಾಧ್ಯವಿಲ್ಲ ಅಂದ್ರೆ,  ಮಠದಲ್ಲಿ,  ಗುಡಿಯಲ್ಲಿ ಆದ್ರೂ, ಶ್ರಾದ್ಧ ಮಾಡಬೇಕು
5.ಅವಿಧವಾ ನವಮಿ ದಿನ ಸ್ರೀಯರು  ಎಲ್ಲರೂ ಎರೆದುಕೊಂಡು, ಮುತ್ತೈದೆಗೆ ಸೀರೆ, ಕುಪ್ಪುಸ,  ಬಳೆ,  ಹೂವು , ಕೊಟ್ಟು ಉಡಿ ತುಂಬಬೇಕು,  ( ತಮ್ಮ ಶಕ್ತ್ಯಾನುಸಾರ )
ಮನೆಯಲ್ಲಿ ಅವಿಧವಾ  ನವಮಿ ಆಚರಿಸುವ ಅಗತ್ಯ ಇಲ್ಲದಿದ್ರೂ  ತುಂಬಬೇಕು..
6.ಪಕ್ಷ ಮಾಸ ಅಂದ್ರೆ ಬೇರೇನೂ  ಅಲ್ಲ.,  ಪಿತೃ ದೇವತೆಗಳ ಪೂಜೆ, ಅವರ ಅಂತರ್ಯಾಮಿಯಾಗಿರುವ ಭಗವಂತನ ಪೂಜೆ.. ಪಿತೃ ದೇವತೆಗಳು, ನಮ್ಮ ಹಿರಿಯರಿಗೆ ಸದ್ಗತಿ ಕೊಡುವವರು.. ವಂಶಾಭಿವೃದ್ಧಿ ಆಗಲು ಆಶಿರ್ವಾದಿಸುವವರು..
ಎಲ್ಲರೂ ಶ್ರದ್ದೆ,  ಭಕ್ತಿಯಿಂದ , ಶ್ರಾದ್ಧ ಮಾಡಿ,  ಹಿರಿಯರ ಪ್ರೀತಿಗೆ ಪಾತ್ರರಾಗೋಣ,  ಮನೆಯಲ್ಲಿ,  ಸುಖ,  ಶಾಂತಿ,  ಸಂಪತ್ತು,  ಸಂತಾನ, ಕರುಣಿಸುವಂತೆ ಕೊರೋಣ...