Thursday, 26 September 2019

ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ Baaro namma Manege

ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ ||
ಬಾರೂ ದುಃಖಾಪಹಾರ ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರುವೆ ||
ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀನರಹರಿಯ ಕಾಲರೂಪವ ತೋರ್ದೆ || ೧ ||
ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ
ಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ ||
ಮಂತ್ರಗೃಹದಲಿನಿಂತ ಸುಯತಿವರ್ಯ
ಅಂತ ತಿಳಿಯದೊ ನೀ ಅಂತರದೊಳು || ೩ ||
ಭೂತಪ್ರೇತಗಳನು ಘಾತಿಸಿಬಿಡುವಂಥ
ಖ್ಯಾತಿಯುತ ಯತಿನಾಥನೆ ತುತಿಸುವೆ || ೪ ||
ಕುಷ್ಟರೋಗಾದಿಗಳ ನಷ್ಟ ಮಾಡುವಂಥ
ಅಷ್ಟಮಹಿಮೆಯುತ ಶ್ರೇಷ್ಠ ಮುನಿಯೆ || ೫ ||
ಕರೆದರೆ ಬರುವಿಯೆಂಬೊ ಕೀರುತಿ ಕೇಳಿ ನಾ
ಕರೆದೆನೊ ಕರುಣದಿ ಕರವ ಪಿಡಿಯೊ || ೬ ||
ಭಕ್ತವತ್ಸಲನೆಂಬ ಬಿರುದು ನಿಂದಾದರೆ
ಸಕ್ತನ ಮೊರೆ ಕೇಳಿ ಮಧ್ವೇಶವಿಠಲದಾಸ || ೭ ||

No comments:

Post a Comment